ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಪಿಂಗ್‌ನಲ್ಲಿ ದೋನಿ ದಾಖಲೆ

Last Updated 6 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ನಾಯಕ ಮಹೇಂದ್ರ ಸಿಂಗ್ ದೋನಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಬಲಿ ಪಡೆಯಲು ನೆರವಾದ ಭಾರತದ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ಭಾನುವಾರ ಮಾಡಿದರು. ಈ ಮೂಲಕ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅವರ ದಾಖಲೆಯನ್ನು ಅಳಿಸಿ ಹಾಕಿದರು.

88 ಟೆಸ್ಟ್ ಪಂದ್ಯಗಳನ್ನಾಡಿರುವ ಕಿರ್ಮಾನಿ 198 ವಿಕೆಟ್ ಬಲಿ ಪಡೆಯಲು ಕಾರಣರಾದ ವಿಕೆಟ್ ಕೀಪರ್ ಎನಿಸಿಕೊಂಡಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದೋನಿ 69.5ನೇ ಓವರ್‌ನಲ್ಲಿ ಪ್ರಗ್ಯಾನ್ ಓಜಾ ಎಸೆತದಲ್ಲಿ  ಕ್ರೇಗ್ ಬ್ರಾಥ್ ವೈಟ್ ಅವರನ್ನು ಸ್ಪಂಪ್ ಔಟ್ ಮಾಡುವ ಮೂಲಕ  ಕಿರ್ಮಾನಿ ಅವರ ದಾಖಲೆ ಮುರಿದರು.

ಇದು ದೋನಿ ನೆರವಿನಿಂದ ಔಟಾದ 199ನೇ ವಿಕೆಟ್. ಒಟ್ಟು 200 ವಿಕೆಟ್ ಬಲಿ ಪಡೆಯಲು ನೆರವಾದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ಕೀರ್ತಿ ತಮ್ಮದಾಗಿಸಿಕೊಳ್ಳಲು ಸಹ ದೋನಿಗೆ (62 ಟೆಸ್ಟ್) ಹೆಚ್ಚು ಸಮಯ ತಗುಲಲಿಲ್ಲ. 77.2ನೇ  ಓವರ್‌ಗಳಲ್ಲಿ ಮರ್ಲಾನ್ ಸ್ಮಾಮುಯೆಲ್ಸ್ ಅವರ ಕ್ಯಾಚ್ ಪಡೆಯುವ ಮೂಲಕ ದೋನಿ ಈ ಸಾಧನೆ ಮಾಡಿದರು.

ಹೆಚ್ಚು ವಿಕೆಟ್ ಪಡೆಯಲು ನೆರವಾದ ಜಗತ್ತಿನ ವಿಕೆಟ್ ಕೀಪರ್‌ಗಳ ಸಾಧನೆಯ ಸಾಲಿನಲ್ಲಿ ದೋನಿಗೆ 13ನೇ ಸ್ಥಾನವಿದೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ (139 ಪಂದ್ಯ 521 ಬಲಿ), ಆಸ್ಟ್ರೇಲಿಯಾದ ಆ್ಯಡಮ್ ಗಿಲ್ ಕ್ರಿಸ್ಟ್ (96 ಪಂದ್ಯ, 416 ಬಲಿ) ಮೊದಲೆರೆಡು ಸ್ಥಾನ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT