ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಟತ್ತಾ ಸಾಗಿದ ಸಮುದಾಯ ಭವನ ಕಾಮಗಾರಿ

Last Updated 11 ಜೂನ್ 2012, 9:45 IST
ಅಕ್ಷರ ಗಾತ್ರ

ಗದಗ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಅನುದಾನದ ಕೊರತೆ ಯಿಂದಾಗಿ ಸಮುದಾಯ ಭವನದ ಕಾಮಗಾರಿ ಕುಂಟತ್ತಾ ಸಾಗಿದೆ.

ಪರಿಶಿಷ್ಟ ಜಾತಿ ವರ್ಗದ ಜನರ ಅನು ಕೂಲಕ್ಕಾಗಿ ನಾಲ್ಕು ವರ್ಷದ ಹಿಂದೆ ನಗರಸಭೆ ಶೇಕಡಾ 22.7ರ ಅನುದಾನ ದಲ್ಲಿ ನಗರದ ಸೆಟ್ಲ್‌ಮೆಂಟ್ ಪ್ರದೇಶ ದಲ್ಲಿ ಅಂದಾಜು ಹತ್ತು ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಯೋಜನೆ ರೂಪಿಸಿತ್ತು.

ನಿಗದಿತ ಸಮಯಕ್ಕೆ ಅನುದಾನ ಬಾರದೆ ಕಾಮಗಾರಿ ಸ್ಥಗಿತಗೊಂಡಿದೆ. ಕಟ್ಟಡದ ಸುತ್ತ ಗಿಡ-ಗಂಟಿಗಳು ಬೆಳೆದುಕೊಂಡಿವೆ.

ಕೇವಲ ಅರ್ಧದಷ್ಟು ಕೆಲಸ ಮಾತ್ರ ಆಗಿದೆ. ಸುತ್ತಲೂ ಗೋಡೆ ನಿರ್ಮಿಸಿ ರುವುದು ಹೊರತು ಪಡಿಸಿದರೆ ಯಾವುದೇ ಕೆಲಸವಾಗಿಲ್ಲ. ಭವನ ಪೂರ್ಣಗೊಂಡರೆ ಪರಿಶಿಷ್ಟ ಜಾತಿ ವರ್ಗದವರು ಸಭೆ, ಸಮಾರಂಭ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸಬಹುದು. ಮಳೆ ಬಂದ ಸಂದರ್ಭದಲ್ಲಿ ಮಹಿಳೆಯರು ಮಲಗಲು ವ್ಯವಸ್ಥೆ ಮಾಡಲಾಗುತ್ತಿದೆ.

ಈ ಪ್ರದೇಶದಲ್ಲಿ ವಾಸಿಸುವ ಬಹುತೇಕ ಜನರು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ತಗ್ಗು ಪ್ರದೇಶ ವಾದ್ದರಿಂದ ಮಳೆ ಬಂದಾಗ ನೀರು ಗುಡಿಸಲಿಗೆ ನುಗ್ಗುತ್ತದೆ. ಮೇಲ್ಛಾ ವಣಿಯು ಸರಿಯಿಲ್ಲದ ಕಾರಣ ನೀರು ಸೋರುತ್ತದೆ.

ಇಂತಹ ಸಂದರ್ಭದಲ್ಲಿ ನಿವಾಸಿಗಳು ಕ್ರೀಡಾಂಗಣದ ಕಚೇರಿ, ನಿರ್ಮಾಣ ಹಂತದಲ್ಲಿರುವ ಕಟ್ಟಡ ಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಈ ಸಮಸ್ಯೆ ಮನಗಂಡು ಮಹಿಳೆಯರ ಅನುಕೂಲಕ್ಕಾಗಿ ಇದನ್ನು ನಿರ್ಮಿಸ ಲಾಗುತ್ತಿದೆ.

`ಹಣ ಬಿಡುಗಡೆಯಾದ ಸಂದರ್ಭ ದಲ್ಲಿ ಮಾತ್ರ ಕೆಲಸ ನಡೆಯುತ್ತದೆ. ಶಾಸಕ ಶ್ರೀಶೈಲಪ್ಪ ಬಿದರೂರ ಅವರು ಮೂರು ಲಕ್ಷ ರೂಪಾಯಿ ನೀಡುವು ದಾಗಿ ಭರವಸೆ ನೀಡಿ ವರ್ಷ ಕಳೆದರೂ ಇತ್ತ ಗಮನ ಹರಿಸಿಲ್ಲ. ಅನುದಾನ ನೀಡುವಂತೆ ಹಲವು ಬಾರಿ ನಗರ ಸಭೆಯ ಗಮನಕ್ಕೆ ತಂದಿದ್ದೇನೆ. ಆದರೂ ಅನುದಾನ ನೀಡುತ್ತಿಲ್ಲ.
 
ಹಣ ಬಿಡುಗಡೆ ಯಾದಂತೆ ಕೆಲಸ ನಡೆಸಲಾಗುತ್ತದೆ. ಮಳೆ ಬಂದಾಗ ಮಹಿಳೆಯರು ಕಚೇರಿ, ಕಟ್ಟಡಗಳ ಆಶ್ರಯ ಪಡೆಯುತ್ತಾರೆ. ನಾನೂ ಮಹಿಳೆಯಾಗಿರುವುದರಿಂದ ಅವರ ಕಷ್ಟ ಗೊತ್ತಿದೆ. ಆದ್ದರಿಂದ ಸಮು ದಾಯ ಭವನದಲ್ಲಿ ಮಹಿಳೆಯರು ಆಶ್ರಯ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ~ ಎನ್ನುತ್ತಾರೆ ಎರಡನೇ ವಾರ್ಡ್‌ನ ನಗರಸಭೆ ಸದಸ್ಯೆ ಲಕ್ಷ್ಮೀದೇವಿ ಕಟ್ಟಿಮನಿ.

`ನಾಲ್ಕ್ ವರ್ಷಾತ್ ಕೆಲ್ಸ್ ಚಾಲೂ ಮಾಡಿ ಇನ್ನೂವರೆಗೂ ಮುಗದಿಲ್ಲ. ಆರ್ ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಬರ‌್ತಾರ್ ಅರ್ಧಮರ್ಧ ಕೆಲ್ಸ್ ಮಾಡಿ ಹೋಗ್ತಾರ್. ಹಿಂಗಾದ್ರ್ ಸಮು ದಾಯ ಭವನ ನಿರ್ಮಾಣ ಯಾವಾಗೋ ಏನೋ.. ನಮ್ಗಂತೂ ಮಳೆ ಬಂದ್ರ್ ಇದ್ ಕಟ್ಟಡ್ ಆಸರ. ನಗರಸಭೆಗೆ ಪೂರ್ತಿ ಕೆಲ್ಸ್ ಮಾಡಿ ಅನುಕೂಲ ಮಾಡಿಕೊಡ್ರಂತ ಮನವಿ ಮಾಡೀವಿ~ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT