ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರು ಸಮಸ್ಯೆ ನಿವಾರಣೆಗೆ ಆದ್ಯತೆ

Last Updated 5 ಅಕ್ಟೋಬರ್ 2012, 8:50 IST
ಅಕ್ಷರ ಗಾತ್ರ

ಗಜೇಂದ್ರಗಡ: ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಮೂಲಕ ತಲೆ ಮಾರುಗಳಿಂದ ಸಮಸ್ಯೆಯಾಗಿ ಉಳಿದಿದ್ದ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಹೊರವಲಯದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ 18 ಲಕ್ಷ ಅನುದಾನದ 2ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಮೇಲ್ಮ ಟ್ಟದ ಜಲಾಗಾರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರೋಣ ಮತಕ್ಷೇತ್ರದ ನಾಗರಿ ಕರು  ಪ್ಲೋರೈಡ್‌ಯುಕ್ತ ನೀರು ಸೇವಿಸಿ, ಸ್ನಾಯುಸೆಳೆತ, ಪಾಶ್ವವಾಯು, ನರ ದೌರ್ಬಲ್ಯ ಇತ್ಯಾದಿ ಕಾಯಿಲೆಗಳಿಂದ ನರಳುವಂತಾಗಿತ್ತು. ಈ ಎಲ್ಲ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಒದಗಿಸಲು ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗಿದೆ ಎಂದರು.

ಗಜೇಂದ್ರಗಡ, ನರೇಗಲ್ ಸೇರಿದಂತೆ ಮಾರ್ಗ ಮಧ್ಯದಲ್ಲಿನ ಏಳು ಗ್ರಾಮಗ ಳಿಗೆ ಶುದ್ಧ ಕುಡಿಯುವ ನೀರು ಒದಗಿ ಸುವ ಉದ್ದೇಶದಿಂದ ತಾಲ್ಲೂಕಿನ ಜಿಗಳೂರ ಗ್ರಾಮದ ಬಳಿ 360 ಎಕರೆ ವಿಸ್ತೀರ್ಣದಲ್ಲಿ 68 ಕೋಟಿ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಈ ಕೆರೆ ನಿರ್ಮಾಣ ದಿಂದ ಕೇವಲ ಕುಡಿಯುವ ನೀರಿನ ಸಮಸ್ಯೆಯಾಗದೆ, ಈ ಭಾಗದ 20 ಸಾವಿರಕ್ಕೂ ಅಧಿಕ ಕೊಳವೆಬಾವಿಗಳು ಮರು ಹುಟ್ಟು ಪಡೆದುಕೊಳ್ಳಲಿವೆ ಎಂದರು. ಸರ್ಜಾಪೂರ ಸುತ್ತಮುತ್ತಲಿನ 14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 38 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕಾಮ ಗಾರಿ ಆರಂಭಗೊಂಡಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಅಮರೇಶ ಅರಳಿ, ನಾಗೇಶ ಲಕ್ಕಲಕಟ್ಟಿ, ವಾಸುಗೌಡ ಪಾಟೀಲ, ಬಾಬು ದೇಸಾಯಿ, ರಾಚಪ್ಪ ಮಾರನಬಸರಿ, ಬಾಬು ಶೆಟ್ಟರ, ಜಿ.ಪಂ ಸಹಾಯಕ ಕಾ.ನಿ. ಎಂಜಿನಿಯರ್ ವಿ.ಕೆ. ಕಾಳಪ್ಪನವರ, ಎಸ್.ಎಂ. ದ್ಯಾಮನವರ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT