ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಕಬಡ್ಡಿ ಪಂದ್ಯಾವಳಿ

Last Updated 22 ಡಿಸೆಂಬರ್ 2012, 10:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ದೊಡ್ಡಮರಳಿ ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದ ಲಕ್ಷದೀಪೋತ್ಸವದ ಪ್ರಯುಕ್ತ ಇತ್ತೀಚೆಗೆ ರಾತ್ರಿ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಿತು. ಮಧ್ಯರಾತ್ರಿಯವರೆಗೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ 15 ಕಬಡ್ಡಿ ತಂಡಗಳು ಪಾಲ್ಗೊಂಡಿದ್ದವು. ವಿವಿಧ ತಂಡಗಳ ನಡುವೆ ತುರುಸಿನ ಪಂದ್ಯ ನಡೆಯಿತು. ಕಬಡ್ಡಿ ಪಂದ್ಯಾವಳಿಯನ್ನು ನೋಡಿ, ಗ್ರಾಮಸ್ಥರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಹಲವು ದಿನಗಳ ನಂತರ ನಡೆದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ ನೋಡಲು ಭಾರಿ ಸಂಖ್ಯೆ ಜನರು ಸೇರಿದ್ದರು. ದೊಡ್ಡಮರಳಿ, ನಂದಿ ಕ್ರಾಸ್, ಯಲುವಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೊನೆಯ ಕ್ಷಣದವರೆಗೆ ಪಂದ್ಯಾವಳಿ ಕುತೂಹಲ ಮೂಡಿಸಿತ್ತು.

ದೊಡ್ಡಮರಳಿ ಚನ್ನಕೇಶವಸ್ವಾಮಿ ಕಬಡ್ಡಿ ತಂಡ, ಧರ್ಮಪುರದ ಆಂಜನೇಯಸ್ವಾಮಿ ಕಬಡ್ಡಿ ತಂಡ, ಆವತಿಯ ರಣಬೈರೇಗೌಡ ತಂಡ, ಚನ್ನಹಳ್ಳಿಯ ಕಬಡ್ಡಿ ಬಾಯ್ಸ, ಯಲುವಹಳ್ಳಿಯ ಪದ್ಮಭೂಷಣ್ ಡಾ.ರಾಜ್ ತಂಡ,  ಮಂಡಿಬೆಲೆಯ ಚನ್ನಕೇಶವ ಕಬಡ್ಡಿ ತಂಡ, ದೇವಿಶೆಟ್ಟಹಳ್ಳಿಯ ಸಾಯಿ ಕಬಡ್ಡಿ ತಂಡ, ಡಿ.ಹೊಸೂರಿನ ವಿನಾಯಕ ಕಬಡ್ಡಿ ತಂಡ, ದೊಡ್ಡಮರಳಿಯ ವಿನಾಯಕ ಕಬಡ್ಡಿ ತಂಡ, ಉಪ್ಪಾರಹಳ್ಳಿಯ ಗುಂಡುಬ್ರಹ್ಮ ತಂಡ, ಮಂಚನಬಲೆಯ ಸುಭಾಷ್ ತಂಡ, ದೊಡ್ಡಮರಳಿಯ ಬ್ಲ್ಯೂಬಾಯ್ಸ ಕಬಡ್ಡಿ ತಂಡ, ಆವಲಗುರ್ಕಿ ಹನುಮಾನ್ ತಂಡ ಮತ್ತು ಚೀಮನಹಳ್ಳಿ ಕಬಡ್ಡಿ ತಂಡದ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಆವತಿ ತಂಡವು ಪ್ರಥಮ ಸ್ಥಾನ ಗಳಿಸಿದರೆ, ಚೀಮನಹಳ್ಳಿ ಕಬಡ್ಡಿ ತಂಡವು ದ್ವಿತೀಯ ಸ್ಥಾನ ಗಳಿಸಿತು. ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಕುರಿ ಮತ್ತು ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ನಗದು ಬಹುಮಾನ ನೀಡಲಾಯಿತು. ಗ್ರಾಮದ ಮುಖಂಡರಾದ ಎಂ.ಎಫ್.ಸಿ.ನಾರಾಯಣಸ್ವಾಮಿ, ಚನ್ನಪ್ಪ, ಕೃಷ್ಣಪ್ಪ, ರವಿಕುಮಾರ್, ಅಶೋಕ್ ಮುರಳಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT