ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಬ್ಜನಿಗಿಲ್ಲ ಅಂಗವೈಕಲ್ಯದ ಚಿಂತೆ

Last Updated 4 ಡಿಸೆಂಬರ್ 2012, 6:38 IST
ಅಕ್ಷರ ಗಾತ್ರ

ಗಜೇಂದ್ರಗಡ: ನಿಶ್ಚಿತ ಗುರಿ, ಸಾಧಿಸುವ ಹಂಬಲ, ಗುರಿಗೆ ತಕ್ಕ ಪರಿಶ್ರಮ ಹೊಂದಿದ್ದೇ ಆದಲ್ಲಿ ಎಂತಹ ವೈಕಲ್ಯವನ್ನು ಮೆಟ್ಟಿ ನಿಂತು ಸ್ವಾಭಿಮಾನದ ಸಾವಲಂಬಿ ಬದುಕು ಸಾಗಿಸಬಹುದು ಎಂಬುದಕ್ಕೆ ಅಪರೂಪದ ನಿದರ್ಶನಗಳು ಅಲ್ಲೊಂದು, ಇಲ್ಲೊಂದು ಕಾಣಸಿಗುತ್ತವೆ.

ಅಂಗಾಗ ನೂನ್ಯತೆಗಳನ್ನೇ ಕಾರಣವಾಗಿಸಿಕೊಂಡ ಬಹುತೇಕ ಅಂಗವಿಕಲರು ವೈಕಲ್ಯಕ್ಕೆ ವಿಧಿ ಬರ, ಶಾಪ ಎಂಬಿತ್ಯಾದಿ ಅಪ ನಂಬಿಕೆಗಳಲ್ಲಿ ತಮ್ಮನ್ನು ತಾವು ಸಿಲುಕಿಸಿಕೊಂಡು ಕೈಚಲ್ಲಿ ಪರಾವಲಂಬಿ ಬದುಕು ಸಾಗಿಸುವವರೇ ಹೆಚ್ಚಾಗಿರುವ ಪ್ರಸ್ತುತ ದಿನಗಳಲ್ಲಿ ಅಂಗವಿಕಲತೆ ಹಣೆ ಬರವೂ ಅಲ್ಲ... ಶಾಪವು ಅಲ್ಲ. ಸಾಧಿಸುವ ಛಲವೊಂದಿದ್ದರೆ ಎಂತಹ ವೈಕಲ್ಯವು ಅಡಿಯಾಗಲಾರದು ಎಂಬ ಕಟು ಸತ್ಯವನ್ನು ಅರಿತ ಕುಬ್ಜನೊಬ್ಬ ಪರಿಶ್ರಮದ ಸ್ವಾಭಿಮಾನದ ಬದುಕು ಸಾಗಿಸುವ ಮೂಲಕ ಅಂಗವಿಕಲರ ಸಮೂಹಕ್ಕೆ ಮಾದರಿಯಾಗಿದ್ದಾನೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡ ಪಟ್ಟಣದ ಶಿವಾಜಿ ಪೇಟೆಯ ಇಪ್ಪ ತ್ನಾಲ್ಕು ವರ್ಷದ ಯುವಕ ನಾಗರಾಜ ಕಳಕಪ್ಪ ಚಿಟಗಿ ಅಂಗವೈಕಲ್ಯ ಮೆಟ್ಟಿನಿಂತು ನಿಂತಿದ್ದಾರೆ. ಮೂರು ಅಡಿ ಎತ್ತರದ ನಾಗರಾಜಗೆ ಬಾಲ್ಯ ದಿಂದಲೂ ಓದಿನಲ್ಲಿ ತುಂಬಾ ಆಸಕ್ತಿ. ವಾರಿಗೆಯ ಸ್ನೇಹಿತರೊಂದಿಗೆ ಚೂಟಿಯಾಗಿ ಬೆರೆ ಯುವ ನಾಗರಾಜ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕ ವೃತ್ತಿ ಮಾಡುತ್ತಿದ್ದ ತಂದೆ ಕಳಕಪ್ಪ ವಿಧಿವಶರಾದ ಬಳಿಕ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ ಎನಿಸಿತು. ನಾಗರಾಜನ ಹಿರಿಯ ಸಹೋದರನೊಬ್ಬನ ದುಡಿಮೆಯಿಂದ ಕುಟುಂಬ ನಿರ್ವಹಣೆ ದುಬಾರಿಯಾದಿತು ಎಂದು ಭಾವಿಸಿಕೊಂಡ ನಾಗರಾಜ 2009 ರಲ್ಲಿ ಗಜೇಂದ್ರಗಡ ಸರ್ಕಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಪಾಯಿ ಅಂತ ಕಾರ್ಯನಿರ್ವಹಿಸಲಾರಂಭಿಸಿದ. ನಿರಂತರ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಾಗರಾಜಗೆ ಸ್ವಯಂ ಉದ್ಯೋಗದತ್ತ ಚಿತ್ತ ಹರಿಯಿತು.

ಮೊದಲಿನಿಂದಲೂ ಗೊತ್ತಿದ್ದ ಬೈಕ್ ರಿಪೇರಿ ವಿದ್ಯೆಯನ್ನೇ ಬಳಸಿಕೊಂಡು ಶ್ರೀಸಾಯಿ ಮೊಟರ್ಸ್‌ ಎಂಬ ಹೆಸರಿನ ಗ್ಯಾರೇಜನ್ನು ನಡೆಸುತ್ತಿದ್ದಾರೆ. ಬೈಕ್ ರಿಪೇರಿ ಕಾರ್ಯದಲ್ಲಿ ಅತ್ಯಂತ ಚಾಣಾಕ್ಷನಾದ ನಾಗರಾಜ ಸಮಯಕ್ಕೆ ಸರಿಯಾಗಿ ದ್ವಿಚಕ್ರ ವಾಹನಗಳನ್ನು ಸರಿ ಪಡಿಸುವುದರಿಂದ ವಾಹನ ಮಾಲೀಕರಿಗೂ ನಾಗರಾಜ ಅಚ್ಚು-ಮೆಚ್ಚಿನ ಮೆಕ್ಯಾನಿಕ್.

ದಿನದ 24 ಗಂಟೆಗಳಲ್ಲಿ  14 ಗಂಟೆ ಪರಿಶ್ರಮದ ಬದುಕು ಸಾಗಿಸುವ ನಾಗರಾಜಗೆ ಸಹೋದರ ಆಸೆಯಾಗಿದ್ದಾನೆ. ದೊಡ್ಡ ಗಾತ್ರದ ಬೈಕ್‌ಗಳು ಬಂದರೆ, ಸಹೋದರ ಬೈಕ್‌ಗಳನ್ನು ಎತ್ತುವ ಜವಾಬ್ದಾರಿಯನ್ನು ನಿರ್ವಹಿಸಿದರೆ, ನಾಗರಾಜ ಬೈಕ್ ದುರಸ್ತಿ ಕಾಯಕದಲ್ಲಿ ನಿರತರಾಗುತ್ತಾರೆ. ನಿತ್ಯ 1,500 ರಿಂದ 2,000 ವರೆಗೆ ಸಂಪಾದಿ ಸುತ್ತಿದ್ದಾರೆ.

`ಸರ್ಕಾರ ನೀಡುವ ಅಲ್ಪ ಪ್ರಮಾಣದ ಮಾಸಾಶನ ಇತರೆ ಸೌಲಭ್ಯಗಳನ್ನೇ ನೆಚ್ಚಿಕೊಂಡು ಕುಳಿತರೇ, ಏನ್ನನ್ನೂ ಸಾಧಿಸಲು ಸಾಧ್ಯವಾ ಗುವುದಿಲ್ಲ. ಸರ್ಕಾರದ ಯೋಜನೆಗಳನ್ನು ಬಳಸಿಕೆ ೂಂಡು ಅಂಗವಿಕಲರು ಬದುಕನ್ನು ಕಟ್ಟಿಕೊಳ್ಳುವ ಆಲೋಚನೆ ಮಾಡಬೇಕು.

ಬದಲಾಗಿ ಯೋಜನೆ ಗಳನ್ನು ದುರುಪಯೋಗ ಪಡಿಸಿಕೊಂಡರೆ, ಬದುಕು ಸದೃಢಗೊಳ್ಳುವುದಿಲ್ಲ. ಅಂಗವೈಕಲ್ಯ ಶಾಪವಲ್ಲ. ಅದನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡಬೇಕು. ನಾನು ಅಂಗವಿಕಲ, ನನ್ನಿಂದ ಏನಾಗುತ್ತದೆ ಎಂಬ ಅಸಹಾಯಕ ಪ್ರಶ್ನೆಯನ್ನು ತಮ್ಮಳಗೆ ತಾವು ಹಾಕಿಕೊಂಡು ನಿಸ್ಸಹಾಯಕ ಬದುಕು ಸಾಗಿಸಬಾರದು.

ಮನುಷ್ಯನಿಗೆ ಅಸಾಧ್ಯವಾದದದ್ದು ಯಾವುದು ಇಲ್ಲ. ಅಂಗವಿಕಲರು ಬದುಕಿನಲ್ಲಿ ನಕಾರಾತ್ಮಕ ಯೋಚ ಗಳನ್ನು ಮಾಡದೇ, ಸಕಾರಾತ್ಮಕ ಯೋಜನೆಗಳನ್ನು ಮಾಡಬೇಕು. ಅಂದಾಗ ಮಾತ್ರ ವೈಕಲ್ಯವನ್ನು ಮೀರಿದ ಸಾಧನೆ ಮಾಡಲು ಸಾಧ್ಯ' ಎಂಬುದು ನಾಗರಾಜ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT