ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮೀಜಿ ಕಾರಣಿಕ ಯುಗಪುರುಷ: ಬಣ್ಣನೆ

Last Updated 11 ಫೆಬ್ರುವರಿ 2012, 3:40 IST
ಅಕ್ಷರ ಗಾತ್ರ

ಸಿರುಗುಪ್ಪ: ಲಿಂ.ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳು ಸಮಾಜವೇ ಜಂಗಮ ಅಂತ ತಿಳಿದು ಸಮಾಜದಲ್ಲಿ ಲಿಂಗಯ್ಯನನ್ನು ಕಂಡಂತಹ ಕಾರಣಿಕ ಯುಗಪುರುಷ ಎಂದು ಹೊಸಪೇಟೆಯ ಸಂಗನಬಸವ ಶ್ರೀಗಳು ಸ್ಮರಿಸಿದರು.

ಪಟ್ಟಣದ ಅಭಯಾಂಜನೇಯ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ವತಿಯಿಂದ ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಶರಣರ ದರ್ಶನ ಪ್ರವಚನ ಮಾಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂದೇಶ ನೀಡಿದರು.

ಶಿವಯೋಗಿಗಳು ಪಲ್ಲಕ್ಕಿಯನ್ನು ಎಂದೂ ಹತ್ತಲಿಲ್ಲ, ಆತ್ಮಸ್ತುತಿಗೆ ಮಹತ್ವ ಕೊಟ್ಟರು ಹೊರತು ಅವರ ಜೀವಿತ ಕಾಲಕ್ಕೆ ತಮ್ಮ ಚರಿತ್ರೆ ಬಗ್ಗೆ ಹೆಚ್ಚು ಮಹತ್ವ ಕೊಡಲಿಲ್ಲ, ಒಂದು ಲೇಖನ, ಒಂದು ಪದ ರಚನೆ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದು ನೆನೆದರು.

ಸಮಾಜದ ಉದ್ಧಾರವಾಗಬೇಕು, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು, ಕ್ರಿಯಾಶೀಲ, ಆಚಾರವಂತರಾಗಬೇಕೆಂಬ ಚಿಂತನೆ ಅವರದಾಗಿತ್ತು. ವೀರಶೈವ ಸಮಾಜವನ್ನು ಮಾತ್ರ ಉದ್ಧಾರ ಮಾಡಲಿಲ್ಲ, ವೀರಶೈವೇತರನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದಂತವರು ಎಂದರು.

ಅಖಿಲ ಭಾರತ ವೀರಶೈವ ಮಹಾ ಸಭಾವನ್ನು ಮತ್ತು ಶಿವಯೋಗ ಮಂದಿರವನ್ನು ಮತ್ತು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಶ್ರೀಗಳು ನುಡಿದರು.

ವಳಬಳ್ಳಾರಿಯ ಸಿದ್ಧಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಬಸವಭೂಷಣ ಶ್ರೀಗಳು ಸಮ್ಮುಖವಹಿಸಿದ್ದರು.
ನಾ.ಮ.ಬಸವರಾಜಯ್ಯ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿದರು.

ಬೆಳಗಾವಿಯ ಕುಮಾರ ದೇವರು ಶರಣರ ದರ್ಶನ ಪ್ರವಚನ ನೀಡಿದರು. ಮಾಜಿ ಶಾಸಕ ಟಿ.ಎಂ. ಚಂದ್ರ ಶೇಖರಯ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎನ್.ಜಿ. ಬಸವರಾಜಪ್ಪ ಶಿವಶಂಕರಗೌಡ, ಪಂಪಾಪತಿಸ್ವಾಮಿ, ಪಲ್ಲೇದ ಮೃತ್ಯುಂಜಯ, ದೊಡ್ಡವೀರೇಶ ಗೌಡ, ಆರ್.ಪಂಪನಗೌಡ, ಬಿ.ಜಿ. ಸಿದ್ದಾರೆಡ್ಡಿ, ಎಂ.ಗೋಪಾಲರೆಡ್ಡಿ, ಎಪಿಎಂಸಿ ಅಧ್ಯಕ್ಷ ಮಂಜುನಾಥಗೌಡ ಅತಿಥಿಗಳಾಗಿದ್ದರು. ಕಾರ್ಯಾಧ್ಯಕ್ಷ ಬಿ.ಆರ್. ಚನ್ನಬಸವನಗೌಡ ಸ್ವಾಗತಿಸಿ ದರು. ಶಿವಕುಮಾರ ಬಳಿಗಾರ್ ನಿರೂಪಿಸಿದರು. ಎನ್.ಎಂ.ಶಿವಪ್ರಕಾಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT