ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಸಾಕಾಣಿಕೆಯಿಂದ ಆರ್ಥಿಕ ಬಲವರ್ಧನೆ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನಕಪುರ: ಕುರಿ ಸಾಕಾಣಿಕೆಯಲ್ಲಿ ವೈಜ್ಞಾನಿಕತೆ ರೂಢಿಸಿಕೊಳ್ಳಬೇಕು ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ  ಭೋಜರಾಜ.ಬಿ. ಕರೂದಿ ತಿಳಿಸಿದರು.

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ಕುರಿ ಪೋಷಕರ ಸಂಘ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಕುರಿಗಾರ ಸಹಕಾರ ಸಂಘದ ಪ್ರಚಾರ ಶಿಬಿರ~  ಉದ್ಘಾಟಿಸಿ ಅವರು ಮಾತನಾಡಿದರು.

ಗುಂಡು ತೋಪುಗಳು, ಗೋಮಾಳಗಳು ಕಣ್ಮರೆಯಾಗುತ್ತಿರುವಂತೆ, ಕುರಿಗಳಿಗೆ ಮೇವಿನ ಸಮಸ್ಯೆ ಹೆಚ್ಚಾಯಿತು. ಸರ್ಕಾರವು ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುತ್ತಿದೆ.  ಕುರಿಗಳನ್ನು ಹೊರಗೆ ಮೇಯಲು ಬಿಡದೆ ಮನೆಯಲ್ಲಿಯೇ ಸಾಕಬಹುದು. ಕನಿಷ್ಠ 25 ಕುರಿಗಳನ್ನು ಸಾಕಿದರೆ ವಾರ್ಷಿಕ 3 ರಿಂದ 4 ಲಕ್ಷ ರೂಪಾಯಿ ವರಮಾನ ಪಡೆಯಬಹುದು.  ನಿಗಮದಿಂದ ಕುರಿ ಸಾಕಾಣಿಕೆಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ರೇಷ್ಮೆ, ಹೈನುಗಾರಿಕೆಯಂತೆ ಕುರಿ ಸಾಕಾಣಿಕೆಯು ಲಾಭದಾಯಕ ಉದ್ಯಮವಾಗುತ್ತಿದೆ. ಕಡಿಮೆ ಸ್ಥಳಾವಕಾಶದಲ್ಲಿ, ಕೂಲಿ ಕಾರ್ಮಿಕರಿಲ್ಲದೆ ಕುಟುಂಬದ ಸದಸ್ಯರೇ ನಿರ್ವಹಣೆ ಮಾಡಬಹುದು. ರಾಂಬುಲೆ ತಳಿಯ ಟಗರು 100 ರಿಂದ 120 ಕೆ.ಜಿ ತೂಗುತ್ತದೆ. ಒಂದು ಕುರಿಯಿಂದ 20 ರಿಂದ 25 ಸಾವಿರ ಲಾಭ ಪಡೆಯಬಹದು ಎಂದರು. 

 ನಾಗರಾಜು ಮಾತನಾಡಿ ರೈತರು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು, ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ತಿಳಿಸಿದರು.

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಜೆ. ಫಜಲುಲ್ಲಾ ಷರೀಪ್, ಮಂಡ್ಯ ವಿಭಾಗದ ಸಹಾಯಕ ನಿರ್ದೇಶಕ ಡಾ. ಕೆ.ಟಿ. ಆನಂದ ಕುಮಾರ್ ಕುರಿ ಉದ್ಯಮ ಹಾಗೂ ಅವುಗಳಿಗೆ ತಗಲುವ ರೋಗಗಳನ್ನು ತಡಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ. ಚಿದಾನಂದ, ಡಾ. ವರದರಾಜು, ಕುರಿಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಕೆ.ತಮ್ಮಯ್ಯ, ಉಪಾಧ್ಯಕ್ಷ ಆರ್.ಎನ್. ಲೋಕೇಶ್ ಇತರರು ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT