ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಸಂಘದಿಂದ ಜಿಲ್ಲೆಗಳಲ್ಲಿ ಕನಕ ಭವನ

Last Updated 6 ಜನವರಿ 2011, 5:30 IST
ಅಕ್ಷರ ಗಾತ್ರ

ಮಾಲೂರು: ಕುರುಬ ಸಮುದಾಯದ ಸ್ಥಳೀಯರು ಸಹಕಾರ ನೀಡಿದಲ್ಲಿ ಕೇಂದ್ರ ಸಂಘದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಸತಿ ನಿಲಯ ಮತ್ತು ಕನಕ ಭವನಗಳನ್ನು ನಿರ್ಮಿಸುವುದಾಗಿ ರಾಜ್ಯ ಕುರುಬ ಸಮಾಜದ ಮುಖಂಡ ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು. ಬುಧವಾರ ಪಟ್ಟದಲ್ಲಿ ಕುರುಬ ಜನಾಂಗದಿಂದ  ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯ ಕಟ್ಟಡವನ್ನು ವೀಕ್ಷಿಸಿ ನಂತರ ಸಭೆಯನ್ನು ಉದ್ದೇಶಿಸಿ  ಅವರು ಮಾತನಾಡಿದರು.

ರಾಜ್ಯದಲ್ಲಿ ಕುರುಬ ಜನಾಂಗ 3ನೇ ಅತಿ ದೊಡ್ಡ ಜನಾಂಗವಾಗಿದ್ದು, ರಾಜಕೀಯವಾಗಿ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಸಮುದಾಯ ಅಭಿವೃದ್ದಿಯಾಗ ಬೇಕಾದರೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎಂದರು. ರಾಜ್ಯದಲ್ಲೇ ಕೋಲಾರ ಜಿಲ್ಲೆಯಿಂದ ಐ.ಎ.ಎಸ್ ಮತ್ತು ಕೆ.ಎ.ಎಸ್ ಅಧಿಕಾರಿಗಳು ಹೆಚ್ಚಾಗಿರುವುದು ಪ್ರಶಂಸನೀಯವಾಗಿದೆ.ತಾಲ್ಲೂಕಿನ ಯಾವುದೇ ಸಮುದಾಯದಿಂದ ವಿದ್ಯಾರ್ಥಿಗಳು ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಲ್ಲಿ ಸ್ಪರ್ಧಿಸಲು ಮುಂದೆ ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಸಮುದಾಯದಿಂದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವುದರ ಜೊತೆಗೆ ಐ.ಟಿ.ಐ ಕೋರ್ಸುಗಳನ್ನು ಪ್ರಾರಂಭಿಸ ಬೇಕೆಂದು ಮನವಿ ಮಾಡಿದರು. ಕುರಬ ಜನಾಂಗದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ನಾಗರಾಜ್, ಕೃಷ್ಣಮೂರ್ತಿ, ತಾಲ್ಲೂಕು ಕುರುಬ ಜನಾಂಗದ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಕುರುಬ ಸಮುದಾಯದ ವಿದ್ಯಾರ್ಥಿ ನಿಲಯದ ಸಮಿತಿ ಅಧ್ಯಕ್ಷ ಕೆ.ಎ. ಹನುಮಂತಯ್ಯ ಮುಖಂಡರಾದ ಅಂಜನಿ ಸೋಮಣ್ಣ, ಹರಿದಾಸ್, ವೆಂಕಟಸ್ವಾಮಿ, ಶ್ರೀಹರಿ, ತಾಲ್ಲೂಕು ಕುರುಬ ಸಮಾಜದ ಮಹಿಳಾ ಅಧ್ಯಕ್ಷೆ ಯಶೋಧಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT