ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಸೇತುವೆ: ಆತಂಕ

Last Updated 12 ಅಕ್ಟೋಬರ್ 2012, 9:55 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ರಾಜೋಳಾದಿಂದ ಹುಮನಾಬಾದ್ ತಾಲ್ಲೂಕಿನ ಘಾಟಬೋರೋಳಗೆ ಹೋಗುವ ರಸ್ತೆಯಲ್ಲಿನ ಸೇತುವೆಯ ಒಂದು ಭಾಗ ಕುಸಿದಿದ್ದರಿಂದ ಅಪಾಯ ಸಂಭವಿಸುವ ಭೀತಿ ಎದುರಾಗಿದೆ. ಆದರೂ ಈ ಕಡೆ ಯಾರೂ ಲಕ್ಷ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಭಾಗದಲ್ಲಿ ಹೆಚ್ಚಿನ ಕಬ್ಬು ಬೆಳೆಯುವುದರಿಂದ ಅದನ್ನು ಸಾಗಿಸುವ ಲಾರಿ ಮತ್ತಿತರೆ ಭಾರಿ ವಾಹನಗಳು ಈ ರಸ್ತೆಯಿಂದ ಹೆಚ್ಚಾಗಿ ಹೋಗುತ್ತವೆ. ಇದಲ್ಲದೆ ಸಮೀಪದಲ್ಲಿಯೇ ಇರುವ ಘೋಡವಾಡಿ ದರ್ಗಾಕ್ಕೆ ಈ ರಸ್ತೆಯಿಂದಲೇ ಆಂಧ್ರ ಮತ್ತು ಮಹಾರಾಷ್ಟ್ರದ ಹಾಗೂ ರಾಜ್ಯದ ವಿವಿಧೆಡೆಯ ಭಕ್ತರು ಆಗಮಿಸುತ್ತಾರೆ.

ಇಷ್ಟೇ ಅಲ್ಲ; ಭಾಲ್ಕಿಗೆ ಹೋಗಲು ಈ ರಸ್ತೆ ಸಮೀಪದ ರಸ್ತೆಯಾಗಿದೆ. ಆದ್ದರಿಂದ ಇಲ್ಲಿಂದ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ ರಸ್ತೆಯಲ್ಲಿ ಅಲ್ಲಲ್ಲಿ ತಗ್ಗುಗಳು ಬಿದ್ದು ರಸ್ತೆ ಹದಗೆಟ್ಟಿದೆ. ಇದಲ್ಲದೆ ರಾಜೋಳಾ ಸಮೀಪದಲ್ಲಿನ ಸೇತುವೆಗೆ ಹಾನಿ ಆಗಿದ್ದರಿಂದ ವಾಹನಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಲು ಜನರು ಭಯಪಡುತ್ತಿದ್ದಾರೆ.

ಗ್ರಾಮದ ಸಮೀಪದಲ್ಲಿಯೇ ಇರುವ ಈ ಸೇತುವೆಯ ಬಾಹ್ಯ ಗೋಡೆಯಷ್ಟೇ ಕುಸಿದಿದೆಯೇ ಅಥವಾ ಸಂಪೂರ್ಣ ಸೇತುವೆಗೆ ಹಾನಿಯಾಗಿದೆಯೇ ಎಂಬುದನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅಲ್ಲದೆ ಸೇತುವೆಯ ದುರಸ್ತಿ ಕಾರ್ಯವನ್ನು ಶೀಘ್ರ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT