ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: 74 ಕೆಜಿ ವಿಭಾಗದಲ್ಲಿ ಸುಶೀಲ್ ಸ್ಪರ್ಧೆ

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಒಲಿಂಪಿಯನ್‌ಗಳಾದ  ಭಾರತದ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ ದತ್‌ ಅವರು 2016 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊನಲ್ಲಿ  ನಡೆಯ ಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ 74 ಮತ್ತು 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಸುಶೀಲ್ 66 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಎರಡು ಸಲ ಪದಕ ಜಯಿಸಿದ್ದರೆ, ಯೋಗೇಶ್ವರ್ ಲಂಡನ್‌ ಒಲಿಂಪಿಕ್ಸ್‌ನಲ್ಲಿ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಇತ್ತೀಚಿಗೆ ವಿಶ್ವ ಕುಸ್ತಿ ಸಂಸ್ಥೆ ಫಿಲಾ (ಎಫ್‌ಐಎಲ್‌ಎ) ಈ ಎರಡು ವಿಭಾಗಗಳಲ್ಲಿ ಬದಲಾವಣೆ ತಂದಿರುವ ಕಾರಣ ಭಾರತದ ಸ್ಪರ್ಧಿಗಳು ತಮ್ಮ ವಿಭಾಗಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ  ವಿಶ್ವ ಕುಸ್ತಿ ಸಂಸ್ಥೆ  ಆಯೋಜಿಸುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸುಶೀಲ್ 70  ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಯೋಗೇಶ್ವರ್ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಜನವರಿ 30 ರಿಂದ ಫೆಬ್ರುವರಿ 1ರವರೆಗೆ ಅಮೆರಿಕಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಮೊದಲ ಬಾರಿಗೆ ಈ ಇಬ್ಬರು ಕುಸ್ತಿಪಟುಗಳು ನೂತನ ವಿಭಾಗಗಳಲ್ಲಿ ಕಾದಾಡಲಿದ್ದಾರೆ.

‘ವಿಶ್ವ ಕುಸ್ತಿ ಸಂಸ್ಥೆ  ಆಯೋಜಿಸುವ ಟೂರ್ನಿಗಳಲ್ಲಿ 70 ಕೆಜಿ, ಒಲಿಂಪಿಕ್ಸ್‌ ಕಾಮನ್‌ವೆಲ್ತ್‌, ಮತ್ತು ಏಷ್ಯನ್ ಕ್ರೀಡಾ ಕೂಟಗಳಲ್ಲಿ 74 ಕೆಜಿ ವಿಭಾಗದಲ್ಲಿ ಪಾಲ್ಗೊಳ್ಳಲು ಸುಶೀಲ್‌ ನಿರ್ಧರಿಸಿದ್ದಾರೆ. ಯೋಗೇಶ್ವರ್‌ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ’ ಎಂದು ರಾಷ್ಟ್ರೀಯ ಮುಖ್ಯ ಕೋಚ್ ವಿನೋದ್‌ ಕುಮಾರ್ ತಿಳಿಸಿದ್ದಾರೆ. 55ಕೆಜಿ ವಿಭಾಗದಲ್ಲಿ ಬದಲಾವಣೆ ಆಗಿರುವ ಕಾರಣ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿರುವ ಅಮಿತ್‌ ಕುಮಾರ್‌ ದಹಿಯಾ 57 ಕೆಜಿ ವಿಭಾಗದಲ್ಲಿ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT