ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಚಿನ್ನದ ಹುಡುಗಿಗೆ ಸನ್ಮಾನ

Last Updated 23 ಜುಲೈ 2012, 8:35 IST
ಅಕ್ಷರ ಗಾತ್ರ

ಲಕ್ಕುಂಡಿ (ಗದಗ ತಾ): ಶಿವ ಶರಣರ ತತ್ವ ಮತ್ತು ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂದು ಅಲ್ಲಮಪ್ರಭು ಮಠದ ಉಸ್ತುವಾರಿ ಸ್ವಾಮೀಜಿ ವೀರೇಶ್ವರ ದೇವರು ಹೇಳಿದರು.

ಅಲ್ಲಮಪ್ರಭು ಮಠದಲ್ಲಿ ದ್ವೀತಿಯ ಬಸವರಾಜೇಂದ್ರ ಸ್ವಾಮಿಗಳ ಮಾಸಿಕ ಪುಣ್ಯಸ್ಮರಣೆ ಹಾಗೂ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಜೀವನದಲ್ಲಿನ ಜಂಜಾಟ ಬಿಡುಗಡೆಗೊಳಿಸಲು ಶಿವಾನಭವದಲ್ಲಿನ ತತ್ವ ಮತ್ತು ಬೋಧನೆಗಳು ಸಹಕಾರಿಯಾಗಲಿದೆ ಎಂದರು.

ಶರಣಗೌಡ ಬೇಲೇರಿ ತರಬೇತಿ ನೀಡಿದ ಕ್ರೀಡಾಪಟು ಏಷಿಯನ್ ಕ್ರೀಡೆಯಲ್ಲಿ ಬಂಗಾರದ ಪದಕ ಪಡೆದ ಪ್ರೇಮಾ ಹುಚ್ಚಣ್ಣವರನ್ನು ಅಭಿನಂದಿಸಿದರು.

ಸೋಲಾರಕೊಪ್ಪ ಅನನ್ಯ ಆಶ್ರಮದ ಶಿವಮೂರ್ತಿ ದೇವರು ಮಾತನಾಡಿದರು.

ಧಾರವಾಡ ಜಿಲ್ಲಾ  ಪಂಚಾಯತ ಸದಸ್ಯ ಯಲ್ಲಪ್ಪ ದಾಸನಕೊಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರೇಮಾ ಹುಚ್ಚಣ್ಣವರಿಗೆ ಮುಖ್ಯಮಂತ್ರಿಗಳಿಂದ ಸೂಕ್ತ ಧನಸಹಾಯ ಕೊಡಿಸುವುದಾಗಿ ಭರವಸೆ ನೀಡಿದರು.

ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ, ಕುಸ್ತಿ ಚಾಂಪಿಯನ್ ಪ್ರೇಮಾ ಹುಚ್ಚಣ್ಣವರನ್ನು ಸನ್ಮಾನಿಸ ಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಚನ್ನಯ್ಯ ಹಂಚಿನಮನಿ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ ಮರಿಯಪ್ಪ ಡೋಣೆ ಹಾಜರಿದ್ದರು. ಶರಣಪ್ಪ ಗರ್ಜಪ್ಪನವರ ಪ್ರಾಥಿಸಿದರು, ಎಂ. ವಿ. ಗಡ್ಡಿ ಸ್ವಾಗತಿಸಿದರು, ಮೃತ್ಯುಂಜಯ ಕುಲಕರ್ಣೆ ನಿರೂಪಿಸಿದರು. ಮರಿಯಪ್ಪ ವಡ್ಡರ ವಂದಿಸಿದರು.

`ಪ್ರೇಮಾ ಹುಚ್ಚಣ್ಣವರಗೆ ಸೌಲಭ್ಯ ಕಲ್ಪಿಸಿ~

ಗದಗ: ಏಷ್ಯನ್ ಕುಸ್ತಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಅಸುಂಡಿ ಗ್ರಾಮದ ಪ್ರೇಮಾ ಹುಚ್ಚಣ್ಣವರಗೆ ಸೌಲಭ್ಯ ಕಲ್ಪಿಸಬೇಕು ಎಂದು ತರಬೇತುದಾರ ಶರಣಗೌಡ ಬೇಲೇರಿ ಸರ್ಕಾರವನ್ನು ಆಗ್ರಹಿಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಆಶ್ರಯ ನೀಡಿ, ಸಕಲ ಸೌಲಭ್ಯ ಕಲ್ಪಿಸಬೇಕು. ಉಚಿತ ಬಸ್ ಪಾಸ್ ಮತ್ತು ಕ್ರೀಡಾ ಸಲಕರಣೆಗಳನ್ನು ನೀಡಬೇಕು. ವಿಶೇಷ ತರಬೇತಿ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರೇಮಾ ಹುಚ್ಚಣ್ಣವರ ಮಾತನಾಡಿ, `ನನ್ನ ಈ ಸಾಧನೆಗೆ ನಮ್ ಸರ್ (ಶರಣಬಸನಗೌಡ ಬೇಲೇರಿ) ಸ್ಪೂರ್ತಿ. ಅವರು ನನ್ನ ಜೊತೆ ಬಂದಾರಂತನ್ ನಾನ್ ಚಿನ್ನದ ಪದಕ ಪಡೆದೇನಿ, ನನಗ್ ಗೆಲ್ತೇನಿ ಅನ್ನೋ ಭರವಸೆ ಇದ್ದಿಲ್ಲ. ಸರ್ ನನಗ್ ಧೈರ್ಯ ತುಂಬಿ ಆಡಲಿಕ್ಕೆ ಪ್ರೋತ್ಸಾಹ ನೀಡಿದರು~ ಎಂದರು. ಪ್ರತಿಕಾಗೋಷ್ಠಿಯಲ್ಲಿ ಶೇಖಣ್ಣ ಕವಳಿಕಾಯಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT