ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಯುದ್ಧವೀರ ಭಾರತ ಕೇಸರಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಆಲಗೂರ ಗ್ರಾಮದ ಜೈ ಹನುಮಾನ್ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿಯಲ್ಲಿ ಪುಣೆಯ ಭಾರತೀಯ ಸೇನೆಯ ಯುದ್ಧವೀರ `ಭಾರತ ಕೇಸರಿ~ ಪ್ರಶಸ್ತಿಯನ್ನು ಬಾಚಿಕೊಂಡು ಬೆಳ್ಳಿಗದೆಯನ್ನು ತಮ್ಮ ಹೆಗಲಿಗೇರಿಸಿಕೊಂಡರು.

ಪ್ರಶಸ್ತಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಯುದ್ಧವೀರ ಅವರು ಹರಿಯಾಣಣದ ಸತ್ಯವ್ರತ ಅವರನ್ನು ಮಣಿಸಿ ಪ್ರಶಸ್ತಿಗೆ ಲಗ್ಗೆ ಹಾಕಿದರು. ಪಂದ್ಯದ 15 ನಿಮಿಷಗಳ ಮೊದಲ ಸುತ್ತಿನಲ್ಲಿ ಇಬ್ಬರೂ ಪೈಲ್ವಾನರು ಯಾವುದೇ ಅಂಕ ಗಳಿಸದೇ ಸಮಬಲ ಪ್ರದರ್ಶಿಸಿದ್ದರು. ಆದರೆ 6 ನಿಮಿಷಗಳ ಎರಡನೇ ಸುತ್ತಿನಲ್ಲಿ ಯುದ್ಧವೀರ 2 ಅಂಕ ಪಡೆದು ಮೇಲುಗೈ ಸಾಧಿಸುವ ಮನ್ಸೂಚನೆ ನೀಡಿದರು. ಆರು ನಿಮಿಷಗಳ ಮೂರನೇ ಸುತ್ತಿನ ಪಂದ್ಯದಲ್ಲಿ ಮತ್ತೆ 2 ಅಂಕ ಗಳಿಸಿದ ಯುದ್ಧವೀರ ಪ್ರಶಸ್ತಿಗೆ ಭಾಜನರಾದರು. ಸತ್ಯವ್ರತ ಕೇವಲ 2 ಅಂಕ ಪಡೆಯುವಲ್ಲಿ ಯಶಸ್ವಿಯಾದರು.

ಜೈ ಹನುಮಾನ್ ಕೇಸರಿ ಪ್ರಶಸ್ತಿಗಾಗಿ ನಡೆದ ಪುರುಷರ 74 ಕೆಜಿ ವಿಭಾಗದ ರಾಜ್ಯ ಮಟ್ಟದ ಕುಸ್ತಿಯಲ್ಲಿ ಎಸ್‌ಟಿಸಿ ಧಾರವಾಡದ ಸಂದೀಪ ಕಾಟೆ ಅವರು ಕೆಎಸ್‌ಪಿ ದಾವಣಗೆರೆಯ ಲೋಕೇಶ ಯಲಶೆಟ್ಟಿ ಅವರನ್ನು ಪರಭಾವಗೊಳಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಫಲಿತಾಂಶಗಳು:

ಪುರುಷರ ವಿಭಾಗ:
60 ಕೆಜಿ ವಿಭಾಗ: ನಾಗರಾಜ (ಧಾರವಾಡ ಎಸ್‌ಟಿಸಿ)-1, ಶರೀಫ ಜಮಾದಾರ (ಹಳಿಯಾಳ)-2, ಚಂದ್ರಶೇಖರ (ದಾವಣಗೆರೆ ಕ್ರೀಡಾಶಾಲೆ)-3, ಎಂ.ಎಲ್.ದೊಂಡಿ(ಮುಧೋಳ)-3, 66 ಕೆಜಿ ವಿಭಾಗ: ನಿಶಾಂತ ಪಾಟೀಲ (ಬೆಳಗಾವಿ ಕ್ರೀಡಾಶಾಲೆ)-1, ಸುರೇಶ ಬ್ಯಾಕೋಡ (ಧಾರವಾಡ ಎಸ್‌ಟಿಸಿ)-2, ಮನೋಜ ಬಂಡಿ (ಜಮಖಂಡಿ)-3, ರಮೇಶ ಫಳಕೆ (ಆಲಗೂರ)-3

74 ಕೆಜಿ ವಿಭಾಗ: ಸಂದೀಪ ಕಾಟೆ (ಧಾರವಾಡ ಎಸ್‌ಟಿಸಿ)-1, ಲೋಕೇಶ ಯಲಶೆಟ್ಟಿ (ದಾವಣಗೆರೆ ಕೆಎಸ್ಪಿ)-2, ಆನಂದ ಫಳಕೆ (ಆಲಗೂರ)-3, ಕಾರ್ತಿಕ ಕಾಟೆ (ದಾವಣಗೆರೆ ಕ್ರಿಡಾಶಾಲೆ)-3, ರಾಷ್ಟ್ರ ಮಟ್ಟದ ಭಾರತ ಕೇಸರಿ ಪ್ರಶಸ್ತಿ: ಯುದ್ಧವೀರ (ಪುಣೆ)-1, ಸತ್ಯವೃತ (ಹರ‌್ಯಾಣ)-2, ಮಲ್ಲಪ್ಪ ಪಾಟೀಲ (ದಾವಣಗೆರೆ)-3, ವಿಕ್ರಾಂತ ಜಾಧವ (ಪುಣೆ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT