ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡುಂಕುಳಂ: ಸ್ಥಳದಿಂದ ತೆರಳಿದ ರಷ್ಯ ತಜ್ಞರ ತಂಡ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತಿರುನೆಲ್ವೇಲಿ,(ಪಿಟಿಐ): ಕೂಡುಂಕುಳಂನಲ್ಲಿ ಬೀಡುಬಿಟ್ಟಿದ್ದ ರಷ್ಯದ ಪರಮಾಣು ಪೂರೈಕೆ  ಕಂಪೆನಿಯ ತಜ್ಞರು ಶುಕ್ರವಾರ ಸ್ಥಳದಿಂದ ವಾಪಸು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಅಣುಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಜಿನಿಯರ್‌ಗಳನ್ನು ಸಹಾ ಪ್ರತಿಭಟನಾಕಾರರು ಒಳಕ್ಕೆ ಬಿಡುತ್ತಿಲ್ಲವಾದ್ದರಿಂದ ಅವರೆಲ್ಲರೂ ಸಮೀಪದ ಅನುವಿಜಯ್ ವಸತಿ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ.

ರಷ್ಯದ ಆಟಂಸ್ಟ್ರಾಯ್ ತಜ್ಞರ ತಂಡವು ಶುಕ್ರವಾರ ಸ್ಥಾವರಕ್ಕೆ ಭೇಟಿ ನೀಡಲು ಉದ್ದೇಶಿಸಿತ್ತು. ಆದರೆ 10 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ಸ್ಥಾವರ ವಿರೋಧಿ ಚಳವಳಿಕಾರರು ತಂಡದ ಮೇಲೆ ಯಾವುದೇ ಸಂದರ್ಭದಲ್ಲಿ ಹಲ್ಲೆ ನಡೆಸಬಹುದೆಂಬ ಭೀತಿಯಿಂದ ಪೊಲೀಸರು ಅವರನ್ನು ಸ್ಥಳಕ್ಕೆ ತೆರಳದಂತೆ ತಡೆದರು.  ಇದರಿಂದಾಗಿ ತಜ್ಞರ ತಂಡವು ಸ್ಥಳದಿಂದ ವಾಪಸು ತೆರಳಿತು ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT