ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಕಾಲುಜೋಡಣಾ ಶಿಬಿರಕ್ಕೆ ಶಾಶ್ವತ ಸ್ಥಳ ಸೌಲಭ್ಯ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಿರಂತರ ಕೃತಕ ಕಾಲು ಜೋಡಣಾ ಶಿಬಿರಕ್ಕಾಗಿ ವಿಕ್ಟೋರಿಯ ಆಸ್ಪತ್ರೆಯ ಆವರಣದಲ್ಲಿ 3 ಸಾವಿರ ಚದರ ಅಡಿಯ ಜಾಗವನ್ನು ನೀಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಘೋಷಿಸಿದರು.

ನಗರದಲ್ಲಿ ಗುರುವಾರ ಬೆಂಗಳೂರಿನ ಪೀಣ್ಯದ ರೋಟರಿ ಸಂಘ ಹಾಗೂ ಎ.ಎಸ್.ಜೈನಸಂಘ ಶಿವಾಜಿನಗರದ ಇನ್‌ಫೆಂಟ್ರಿ ರಸ್ತೆಯ ಗಣೇಶ ಬಾಗ್‌ನಲ್ಲಿ ಆಯೋಜಿಸಿದ್ದ ಜೈಪುರ್ ಕೃತಕ ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಪ್ರತಿ ದಿನ ಕನಿಷ್ಠ 40ಜನರಿಗೆ ಕೃತಕ ಕಾಲುಗಳನ್ನು ಜೋಡಿಸಲು ಅನುಕೂಲವಾಗುವಂತೆ ಈ ಜಾಗವನ್ನು ಬಿಟ್ಟುಕೊಡಲಾಗುವುದು~ ಎಂದು ಅವರು ನುಡಿದರು.

`ಅಂಗವಿಕಲರಿಗೆ ತ್ರಿಚಕ್ರ ವಾಹನ, ಗಾಲಿಕುರ್ಚಿ ಹಾಗೂ ಊರು ಗೋಲುಗಳನ್ನು ನೀಡುವಂಥ ಪವಿತ್ರ ಕೆಲಸ ಇಂದು ನಡೆಯುತ್ತಿದೆ. ಈ ಕೆಲಸದಲ್ಲಿ ಪಾಲ್ಗೊಂಡ ನಾನು ಧನ್ಯ~ ಎಂದು ಅವರು ಹೇಳಿದರು.

ಗುರುವಾರ ನಡೆದ ಶಿಬಿರದಲ್ಲಿ ಸುಮಾರು 250 ಜನ ಅಂಗವಿಕಲರಿಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತು. ತ್ರಿಚಕ್ರ ವಾಹನ, ಊರುಗೋಲು ಹಾಗೂ ಗಾಲಿಕುರ್ಚಿ ವಿತರಿಸಲಾಯಿತು.

ಅಂಗವಿಕಲರಿಗೆ ಕೃತಕ ಕಾಲು ಜೋಡಣಾ ಶಿಬಿರ ಜನವರಿ 11 ರ ವರೆಗೆ ಇನ್‌ಫೆಂಟ್ರಿ ರಸ್ತೆಯ ಗಣೇಶ ಬಾಗ್‌ನಲ್ಲಿ ನಡೆಯಲಿದೆ. ಕಾನೂನು ಸಚಿವ ಸುರೇಶ್ ಕುಮಾರ್, ಭಗವಾನ್ ಮಹಾವೀರ ಅಂಗವಿಕಲರ ಸಹಾಯಕ ಸಮಿತಿ ಕಮಲ್ ಮೆಹತಾ, ರೋಟರಿ ಬೆಂಗಳೂರು ಪೀಣ್ಯದ ಗವರ್ನರ್ ಡಾ.ಎಸ್.ನಾಗೇಂದ್ರ, ಜೈಪುರ ಕೃತಕ ಕಾಲು ಜೋಡಣಾ ಯೋಜನೆಯ ಮುಖ್ಯಸ್ಥ ಗೌತಮ್ ಚಂದ್ ಇದ್ದರು.
 

ಭರವಸೆಯಿಂದ ಬದುಕಿ: ಡಾ.ಯತಿರಾಜ್
ಭರವಸೆ ಉಳಿಸಿಕೊಂಡರೆ ಜೀವನದಲ್ಲಿ ಎಂತಹ ಸವಾಲುಗಳೊಂದಿಗೂ ಬದುಕಲು ಸಾಧ್ಯ ಎಂದು ಡಾ.ಯತಿರಾಜ್ ಸ್ವತಃ ಬದುಕಿ ತೋರಿದ್ದಾರೆ.

ನಗರದಲ್ಲಿ ಗುರುವಾರ ಬೆಂಗಳೂರಿನ ಪೀಣ್ಯದ ರೋಟರಿ ಸಂಘ  ಹಾಗೂ ಎ.ಎಸ್.ಜೈನಸಂಘ ಶಿವಾಜಿನಗರದ ಇನ್‌ಫೆಂಟ್ರಿ ರಸ್ತೆಯ ಗಣೇಶ ಬಾಗ್‌ನಲ್ಲಿ ಆಯೋಜಿಸಿದ್ದ ಕೃತಕ ಕಾಲು ಜೋಡಣಾ ಶಿಬಿರದಲ್ಲಿ 78 ವರ್ಷದ ಯತಿರಾಜ್ ಬಿಡುವಿಲ್ಲದ ಕೆಲಸದಲ್ಲಿ  ನಿರತರಾಗಿದ್ದರು.

ತಮ್ಮ 14ನೇ ವಯಸ್ಸಿನಲ್ಲಿ ಕಾಲುಗಳನ್ನು ಕಳೆದುಕೊಂಡ ಯತಿರಾಜ್ ಕೃತಕ ಕಾಲುಗಳೊಂದಿಗೇ 65 ವರ್ಷಗಳ ಕಾಲ ಬದುಕು ನಡೆಸಿದ್ದಾರೆ.

ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಅಧ್ಯಯನ ಮಾಡಿ ಕೆಜಿಎಫ್‌ನ ಚಿನ್ನದ ಗಣಿಯ ಆಸ್ಪತ್ರೆಯಲ್ಲಿ 45 ವರ್ಷಗಳ ಕಾಲ ಫಿಸಿಯೋಥೆರಪಿಸ್ಟ್ ಆಗಿ ಸೇವೆ ಸಲ್ಲಿಸಿರುವ ಯತಿರಾಜ್ ಜೈಪುರ್ ಕೃತಕ ಅಂಗ ಜೋಡಣಾ ಶಿಬಿರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೃತಕ ಕಾಲುಗಳೊಂದಿಗೆ ಬದುಕುವುದು ಕಷ್ಟ, ಅವುಗಳಿಂದ ವಿಪರೀತ ನೋವು ಉಂಟಾಗುತ್ತದೆ ಎಂಬುವವರಿಗೆ ಸಾಂತ್ವನ ಹೇಳುವ ಅವರು, `ಕೃತಕ ಕಾಲು ಜೋಡಣೆಯ ಆರಂಭದ ದಿನಗಳಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುತ್ತದೆ. ಆ ನಂತರ ಅದು ದೇಹದ ಲಯಕ್ಕೆ ಹೊಂದಿಕೊಂಡು ಸಾಮಾನ್ಯ ಅನುಭವ ನೀಡುತ್ತದೆ~ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT