ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಮಾಂಸದ ಬರ್ಗರ್

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಪ್ರಯೋಗಾಲಯದಲ್ಲಿ ಕೃತಕವಾಗಿ ಅಭಿವೃದ್ಧಿಪಡಿಸಿದ ದನದ ಮಾಂಸದಿಂದ ಸಿದ್ಧಪಡಿಸಿದ ಬರ್ಗರ್‌ನ ರುಚಿಯನ್ನು ಲಂಡನ್‌ನಲ್ಲಿ ಜನ ರಿಗೆ ಸವಿಯಲು ನೀಡಿದ್ದು, ಇದು ಮಾಂಸದ ರುಚಿಯನ್ನೇ ಹೋಲುತ್ತಿದ್ದರೂ ಅದರ ವೈಶಿಷ್ಟ್ಯ ಇದಕ್ಕಿಲ್ಲ ಎಂದು ತಜ್ಞರು ಹೇಳಿದ್ದಾರೆ.

5 ವರ್ಷದ ಸಂಶೋಧನೆಯ ನಂತರ ಮಾಂಸವನ್ನು ಹೀಗೆ ಕೃತಕವಾಗಿ ಅಭಿ ವೃದ್ಧಿಪಡಿಸಲಾಗಿದೆ. ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದ ಪ್ರೊ. ಮಾರ್ಕ್ ಪೋಸ್ಟ್ ದನದ ಆಕರಕೋಶಗಳನ್ನು ತೆಗೆದುಕೊಂಡು ಅದರಿಂದ ಈ ಮಾಂಸ ಅಭಿವೃದ್ಧಿ ಪಡಿಸಿದ್ದಾರೆ.

ಪ್ರಯೋಗಾಲಯದಲ್ಲಿ ತಯಾರಾದ ವಿಶ್ವದ ಈ ಮೊದಲ ಬರ್ಗರ್‌ಗೆ 2.15 ಲಕ್ಷ ಪೌಂಡ್ (2 ಕೋಟಿ ರೂಪಾಯಿ) ವೆಚ್ಚವಾಗಿದೆ. ಕೃತಕ ಮಾಂಸ ಉತ್ಪಾದಿಸುವ ಈ ವಿಧಾನ ಆಹಾರ ಕ್ರಾಂತಿಗೆ ಕಾರಣವಾಗಲಿದೆ. ದಶಕದಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಈ ಆಹಾರ ಪದಾರ್ಥ ದೊರೆಯಲಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT