ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಲೋಕಾರ್ಪಣೆ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಟೈಗರ್ ಬೈ ಟೇಲ್, ಪಾಂಡುಪುರ
ರಿಲಯನ್ಸ್ ಟೈಮ್‌ಔಟ್: ಶನಿವಾರ ಸಂಜೆ 6.30ಕ್ಕೆ ಹೆಸರಾಂತ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಂದ ಲಕ್ಷ್ಮಿ ಪ್ರತಿವಾದಿ ರಚಿಸಿದ `ಟೈಗರ್ ಬೈ ಟೇಲ್~ ಕೃತಿ ಲೋಕಾರ್ಪಣೆ ಮತ್ತು ಲೇಖಕಿ ಜತೆ ಸಂವಾದ.

ಇದು ಸ್ವಾತಂತ್ರ್ಯಪೂರ್ವದ ಹದಿಹರೆಯದ ಭಾರತೀಯ ದೇಶಾಭಿಮಾನಿಯೊಬ್ಬರ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ. ಬೆಂಗಳೂರಲ್ಲಿ ಜನಿಸಿದ (1993) ಲಕ್ಷ್ಮಿ ಅಮೆರಿಕದ ಕ್ಯಾಲಿಫೋರ್ನಿಯ ನಿವಾಸಿ.

4ನೇ ತರಗತಿಯಲ್ಲಿದ್ದಾಗಲೇ ಬರವಣಿಗೆಯಲ್ಲಿ ಒಲವು ಬೆಳೆಸಿಕೊಂಡವರು. ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದ್ದು, ಸ್ಟಾನ್‌ಫೋರ್ಡ್ ವಿವಿಯಲ್ಲಿ ಜೀವರಸಾಯನ ಶಾಸ್ತ್ರ ಮತ್ತು ಸೃಜನಶೀಲ ಬರವಣಿಗೆಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಉದ್ದೇಶಿಸಿದ್ದಾರೆ.

ಭಾನುವಾರ ಸಂಜೆ 4ಕ್ಕೆ ರಿಲಯನ್ಸ್ ಟೈಮ್‌ಔಟ್ ಮತ್ತು ಯಂಗ್ ಜುಬಾನ್‌ಬುಕ್ಸ್ ಸಹಯೋಗದಲ್ಲಿ ಅದಿತಿ ಮತ್ತು ಚತುರ ರಾವ್ ಅವರ `ಗ್ರೋಯಿಂಗ್ ಅಪ್ ಇನ್ ಪಾಂಡುಪುರ~ ಕೃತಿ ಲೋಕಾರ್ಪಣೆ. ಸ್ಥಳ: ರಿಲಯನ್ಸ್ ಟೈಮ್‌ಔಟ್, ಕನ್ನಿಂಗ್‌ಹ್ಯಾಮ್ ರಸ್ತೆ.

 ದೇಶ-ಕಾಲ-ಶ್ರಮ...
ಮೌಲ್ಯಾಗ್ರಹ ಪ್ರಕಾಶನ: ಭಾನುವಾರ ರವಿಕೃಷ್ಣರೆಡ್ಡಿ ಅವರ `ದೇಶ-ಕಾಲ-ಶ್ರಮ: ಸಾಧನೆಯ ಹಿಂದಿನ ಕಥೆ~ ಮತ್ತು `ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ~ (ಇಂಗ್ಲಿಷ್ ಮೂಲ: ಕೆಂಟ್ ಎಂ. ಕೀತ್) ಕೃತಿಗಳ ಲೋಕಾರ್ಪಣೆ.

ವಿ.ಎಂ. ಮಂಜುನಾಥ್, ಎಸ್. ಕುಮಾರ್, ಜಯಶಂಕರ್ ಹಲಗೂರು, ರಶ್ಮಿ ಹೆಗಡೆ, ಸಿ. ರವೀಂದ್ರನಾಥ್, ಸುಜಾತಾ ಕುಮಟಾ, ಶಿವಸುಂದರ್, ನಾಗತಿಹಳ್ಳಿ ರಮೇಶ್, ಬಾಲಗುರುಮೂರ್ತಿ, ದಿನೇಶ್ ಕುಮಾರ್, ಚೀಮನಹಳ್ಳಿ ರಮೇಶ್‌ಬಾಬು ಅವರಿಂದ ಕವನ ವಾಚನ. ಅತಿಥಿಗಳು: ನಟರಾಜ್ ಹುಳಿಯಾರ್, ಪೃಥ್ವಿ ದತ್ತ ಚಂದ್ರ ಶೋಭಿ, ವಿ.ಪಿ. ನಿರಂಜನಾರಾಧ್ಯ. ಸ್ಥಳ: ಕನ್ನಡ ಭವನ, ಜೆ.ಸಿ. ರಸ್ತೆ. ಬೆಳಿಗ್ಗೆ 10.30.

ಪುಸ್ತಕ ವಾಚನ
ಟೈಮ್‌ಔಟ್ ಬೆಂಗಳೂರು: ಸೋಮವಾರ ರಂಗ ನಟ ಝಾಕ್ ಒಯೆ ಮತ್ತು ಪತ್ತೇದಾರಿ ಸಾಹಿತಿ ಸುದರ್ಶನ್ ಅವರಿಂದ ಸ್ವೀಡಿಷ್ ಲೇಖಕ, ಪತ್ರಕರ್ತ ಸ್ಟೀಗ್ ಲಾರ್ಸನ್ ಅವರ `ದ ಗರ್ಲ್ ಹೂ ಕಿಕ್ಡ್ ದ ಹಾರ್ನೆಸ್ಟ್ ನೆಸ್ಟ್~ ಕೃತಿಯ ಆಯ್ದ ಭಾಗಗಳ ವಾಚನ.

ಅನಿವಾರ್ಯ ಕಾರಣಕ್ಕಾಗಿ ಬದುಕಿನ ಪ್ರತಿ ಹಂತದಲ್ಲೂ ಅಪಾಯವನ್ನು ಎದುರಿಸುತ್ತ ಬಂದ ಬಾಲಕಿಯೊಬ್ಬಳ ಕಥೆ ಇದು. ಸಿನಿಮಾ ರೂಪದಲ್ಲಿಯೂ ಹೊರ ಬಂದಿದೆ.
ಸ್ಥಳ: ಕ್ರಾಸ್‌ವರ್ಡ್, ಜೆ ಪಿ ನಗರ. ಸಂಜೆ 7. ಮಾಹಿತಿಗೆ:  6660 1111.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT