ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗಳ ಲೋಕಾರ್ಪಣೆ...

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಒಂದು ಹನಿ ಬೆಳಕು, ಮೈಕೆಲೇಂಜಲೊ
ಅಂಕಿತ ಪ್ರಕಾಶನ: ಭಾನುವಾರ ಡಾ.ಸಿ. ರವೀಂದ್ರನಾಥ್ ಅನುವಾದಿಸಿರುವ `ಒಂದು ಹನಿ ಬೆಳಕು~ (ವಿವಿಧ ಕವಿಗಳ ಜಪಾನಿ ಹಾಯ್ಕುಗಳು) ಮತ್ತು ಎನ್.ಎಸ್. ನಾಗರಾಜ್ ನುಗ್ಗೇನಹಳ್ಳಿ ಅನುವಾದಿಸಿರುವ `ಮೈಕೆಲೇಂಜಲೊ~ (ವಿಶ್ವವಿಖ್ಯಾತ ಶಿಲ್ಪಿಯ ಜೀವನ ಚರಿತ್ರೆ.

ಮೂಲ: ಇರ‌್ವಿಂಗ್ ಸ್ಟೋನ್) ಕೃತಿಗಳ ಲೋಕಾರ್ಪಣೆ. ಅತಿಥಿಗಳು: ಡಾ.ಚಂದ್ರಶೇಖರ ಪಾಟೀಲ, ಜೋಗಿ. ಸ್ಥಳ: ಅಂಕಿತ ಆವರಣ, ನಂ 53, ಗಾಂಧಿಬಜಾರ್, ಮುಖ್ಯರಸ್ತೆ, ಬಸವನಗುಡಿ. ಬೆಳಿಗ್ಗೆ 10.30.

ಯು ಆರ್ ಸಾಹಿತ್ಯ
ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸ್ನಾತಕೋತ್ತರ ಕೇಂದ್ರ ಮತ್ತು ಕನ್ನಡ ವಿಭಾಗ:  ಶನಿವಾರ ಡಾ.ಯು.ಆರ್. ಅನಂತಮೂರ್ತಿ- ಸಾಹಿತ್ಯ ಚಿಂತನ ವಿಚಾರ ಸಂಕಿರಣ. ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅವರಿಂದ `ಯು.ಆರ್. ಅನಂತಮೂರ್ತಿ~ ಕೃತಿ ಲೋಕಾರ್ಪಣೆ. ಅತಿಥಿಗಳು: ಡಾ.ಯು.ಆರ್.ಅನಂತಮೂರ್ತಿ, ಡಾ.ವೂಡೇ ಪಿ.ಕೃಷ್ಣ, ಶೂದ್ರ ಶ್ರೀನಿವಾಸ್. ಅಧ್ಯಕ್ಷತೆ: ಪ್ರೊ.ಎಂ.ಎಚ್. ಕೃಷ್ಣಯ್ಯ.

ನಂತರ ವಿಚಾರ ಸಂಕಿರಣ. ಕಥಾ ಸಾಹಿತ್ಯ (ಪ್ರೊ.ಸಿ. ನಾಗಣ್ಣ), ಕಾದಂಬರಿ (ಡಾ.ಸಿರಾಜ್ ಅಹಮದ್), ವಿಮರ್ಶೆ/ವಿಚಾರ ಸಾಹಿತ್ಯ (ಎಸ್.ಆರ್. ವಿಜಯಶಂಕರ್). ಅನಂತಮೂರ್ತಿ ಅವರೊಂದಿಗೆ ಡಾ.ವಿಜಯಾ, ಡಾ.ಕೆ.ಸತ್ಯನಾರಾಯಣ, ಡಾ. ಎಂ.ಎಸ್. ಆಶಾದೇವಿ, ಚಂದ್ರಶೇಖರ ಆಲೂರು, ಡಾ.ಜಿ.ಪ್ರಶಾಂತ ನಾಯಕ್ ಅವರ ಸಂವಾದ. ಅಧ್ಯಕ್ಷತೆ: ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಸ್ಥಳ: ಶೇಷಾದ್ರಿಪುರಂ ಕಾಲೇಜು ಸಭಾಂಗಣ, ಶೇಷಾದ್ರಿಪುರಂ. ಬೆಳಿಗ್ಗೆ 11.

ಡಾ. ಬಾಬಾಸಾಹೇಬ್ ಅಂಬೇಡ್ಕರ್

ರಾಷ್ಟ್ರೋತ್ಥಾನ ಸಾಹಿತ್ಯ: ಶನಿವಾರ ಭಂತೆ ರಾಹುಲ ಬೋಧಿ ಮಹಾಥೇರೋ ಅವರಿಂದ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ `ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾಸಾಹೇಬ್ ಅಂಬೇಡ್ಕರ್~ ಕೃತಿ ಲೋಕಾರ್ಪಣೆ (ಮರಾಠಿ ಮೂಲ: ದತ್ತೋಪಂತ ಠೇಂಗಡಿ).

ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಜೀವನ ಕುರಿತ ಒಂದು ಅಧ್ಯಯನಪೂರ್ಣ ಶಬ್ದಚಿತ್ರ. ಠೇಂಗಡಿ ಅವರು ಅಂಬೇಡ್ಕರ್ ಅವರ ಬದುಕಿನ ಕೊನೆಯ ನಾಲ್ಕು ವರ್ಷ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು. ಗಂಭೀರ ವೈಚಾರಿಕ ಮಟ್ಟದಲ್ಲಿ ಅವರಿಬ್ಬರಿಗೂ ಸಂವಾದ ನಡೆಯುತ್ತಿತ್ತು.

ದಲಿತ ಸಮುದಾಯದ ಏಳ್ಗೆಗಾಗಿ ಅವರು ನಡೆಸಿದ ಹೋರಾಟಗಳು, ಅವರ ಚಿಂತನೆಯ ಆಳ ಮತ್ತು ವಿಸ್ತಾರ, ಸಂವಿಧಾನ ರಚನೆಯಲ್ಲಿನ ಪಾತ್ರ ಹಾಗೂ ಮತ್ತಿತರ ವಿಷಯಗಳನ್ನು ಓದುಗರಿಗೆ ದರ್ಶನ ಮಾಡಿಸಿದ್ದಾರೆ.

ಕೃತಿ ಕುರಿತು: ದತ್ತಾತ್ರೇಯ ಹೊಸಬಾಳೆ. ಸಾನ್ನಿಧ್ಯ: ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT