ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗಳ ಲೋಕಾರ್ಪಣೆ

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಇಳಾ ಪ್ರಕಾಶನ- ಅಭಿನವ, ಭಾರತಯಾತ್ರಾ ಕೇಂದ್ರ: ಡಾ. ವಿಜಯಾ ಅವರ `ರಂಗಸಾಂಗಯ್ಯ~ ಹಾಗೂ ಬಿ. ಸುರೇಶ್ ಅವರ `ಒಂಬತ್ತು ನಾಟಕಗಳು~ ಕೃತಿಗಳು ಭಾನುವಾರ ಲೋಕಾರ್ಪಣೆಯಾಗಲಿವೆ. ಕಲಾವಿದೆ ಡಾ. ಬಿ. ಜಯಶ್ರೀ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದು, ಲೇಖಕ ಪ್ರೊ. ಎಂ.ಎಚ್. ಕೃಷ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಕವಿತಾ ವಾಚನವನ್ನು ಡಾ. ಮಮತಾ ಜಿ. ಸಾಗರ, ಎಚ್. ಎನ್. ಆರತಿ, ಶರಣು ಹುಲ್ಲೂರ, ಎಂ. ಎಸ್. ಮೂರ್ತಿ, ಡಾ. ಪಿ. ಚಂದ್ರಿಕಾ, ಎಲ್. ಎನ್. ಮುಕುಂದರಾಜ್ ಮಾಡಲಿದ್ದಾರೆ. ನಂತರ ರವೀಂದ್ರ ಸೊರಗಾಂವಿ ಮತ್ತು ತಂಡದಿಂದ ಕವನಗಳ ಗಾಯನ.
ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ. ಸಿ. ರಸ್ತೆ. ಸಂಜೆ 6.

ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ಇನ್‌ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಚರ್: `ಅಥರ್ವ ವೇದ~ ಕೃತಿ ಮೂಲ, ಅನುವಾದ ಹಾಗೂ ಟಿಪ್ಪಣಿಗಳು ಆರು ಸಂಪುಟಗಳಲ್ಲಿ ಶನಿವಾರ ಲೋಕಾರ್ಪಣೆಯಾಗುತ್ತಿದೆ. ಅತಿಥಿಗಳು- ಪರ್ಡ್ಯೂ ವಿವಿ (ಅಮೆರಿಕ) ಯ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಎಲ್. ಕಶ್ಯಪ, `ರಾ ಪವರ್ ಜನರೇಟರ್ಸ್~ನ ವ್ಯವಸ್ಥಾಪಕ ನಿರ್ದೇಶಕ ಎಸ್. ಎನ್. ಸುಯಮಿತ್ರ. ವಿದ್ವಾಂಸ ಪ್ರಕಾಶ ವೆಂ. ಕುಲಕರ್ಣಿ, ಅಧ್ಯಕ್ಷತೆ- ಡಾ. ಅನಂತ ಅಯ್ಯರ್. ಸಂಜೆ 6.

ಕರೆಬಳಗ: ಕನ್ನಡ ಭವನ, ಜೆ. ಸಿ. ರಸ್ತೆ. ಪ್ರೊ. ಎಸ್. ಜಿ. ಸಿದ್ಧರಾಮಯ್ಯನವರ `ಕಾಲ ಕಣ್ಣಿಯ ಹಂಗು~ ಕವಿತೆಗಳ ಸಂಪುಟ ಬಿಡುಗಡೆ. ಲೋಕಾರ್ಪಣೆ- ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಗ್. ಅತಿಥಿಗಳು- ಡಾ. ಎಸ್. ರಾಘವೇಂದ್ರರಾವ್, ದು. ಸರಸ್ವತಿ, ಡಾ. ಕೆ. ವೈ. ನಾರಾಯಣಸ್ವಾಮಿ, ಎಂ. ಆರ್. ಗಿರಿರಾಜು, ಪ್ರೊ. ಎಸ್ ಜಿ. ಸಿದ್ಧರಾಮಯ್ಯ. ಭಾನುವಾರ ಸಂಜೆ 6.

ಅಂಕಿತ ಪುಸ್ತಕ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ವಾಡಿಯಾ ಸಭಾಂಗಣ, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಪ್ರತಿಭಾ ನಂದಕುಮಾರ್ ಅವರ `ಕಾಫಿ ಹೌಸ್~ ಮತ್ತು `ಮುದುಕಿಯರಿಗಿದು ಕಾಲವಲ್ಲ~ ಪುಸ್ತಕ ಬಿಡುಗಡೆ. ಲೋಕಾರ್ಪಣೆ- ಡಾ. ಯು. ಆರ್. ಅನಂತಮೂರ್ತಿ. ಅತಿಥಿ- ಲಹರಿ ವೇಲು. ಭಾನುವಾರ ಬೆಳಿಗ್ಗೆ 10.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT