ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಇಲಾಖೆ ಅವ್ಯವಹಾರ ತನಿಖೆಗೆ ನಿರ್ಧಾರ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ
Last Updated 3 ಜನವರಿ 2014, 7:42 IST
ಅಕ್ಷರ ಗಾತ್ರ

ವಿಜಾಪುರ: ಸರ್ಕಾರದ ಸಹಾಯಧನ ದಲ್ಲಿ ರೈತರಿಗೆ ಕೃಷಿ ಉಪಕರಣಗಳ ವಿತರಣೆಯಲ್ಲಿ ಆಗಿರುವ ಅವ್ಯವಹಾರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಕಳಪೆ ಕೃಷಿ ಉಪಕರಣ ನೀಡುತ್ತಿರುವ ಕೃಷಿ ಇಲಾಖೆಯ ಹಗರಣದ ಕುರಿತು ತನಿಖೆ ನಡೆಸಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಅವರಿಗೆ ಸೂಚಿಸಲಾ ಯಿತು. ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಾಯಬಣ್ಣ ಅಲ್ಯಾಳ ಅವರು ಕೃಷಿ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉದ್ದೇಶ ಪೂರ್ವಕವಾಗಿ ಕಳಪೆ ಕಂಪೆನಿಯ  ಕೃಷಿ ಉಪಕರಣಗಳನ್ನು ವಿತರಿಸಿ ವಂಚಿಸಲಾ ಗುತ್ತಿದೆ. ಕೃಷಿ ಜಂಟಿ ನಿರ್ದೇಶಕರ ಮೇಲೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಬಾಪುಗೌಡ ಪಾಟೀಲ, ಶ್ರೀಶೈಲ ಗೌಡ ಬಿರಾದಾರ, ಯಲ್ಲಪ್ಪ ಹಾದಿ ಮನಿ, ದೇವಾನಂದ ಚವ್ಹಾಣ, ಉಮೇಶ ಕೋಳಕೂರ ಸೇರಿದಂತೆ ಹಲವು ಸದಸ್ಯರು, ‘ಕಳಪೆ ಕೃಷಿ ಉಪಕ ರಣಗಳನ್ನೇ ರೈತರಿಗೆ ಪೂರೈಸ ಲಾಗುತ್ತಿದೆ. ಕೆಲ ಕೃಷಿ ಅಧಿಕಾರಿಗಳು ರೈತ ಫಲಾನುಭವಿಗಳಿಗೆ ಸಹಾಯ ಧನದಡಿ ನೀಡುವ ಸೌಲಭ್ಯಗಳಿಗೆ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿ ದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಫಲಾನುಭವಿಗಳ ಹೆಸರಿನಲ್ಲಿ ಬೇನಾಮಿಯಾಗಿ ಸಾಮಾನ್ಯ ವರ್ಗದ ರೈತರು ಸೌಲಭ್ಯಗಳನ್ನು ಪಡೆಯುತ್ತಿ ದ್ದಾರೆ. ಕಳಪೆ ಬೀಜ, ಔಷಧಿ ತಯಾರಿ ಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರಿಗೆ ನೀಡುವ ಸೌಲಭ್ಯಗಳ ಕುರಿತಂತೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಸಿಇಒ ಅವರಿಗೆ ಸೂಚಿಸಿರು. ‘ನಾನೇ ಖುದ್ದಾಗಿ ಪರಿಶೀ ಲನೆ ನಡೆಸುತ್ತೇನೆ’ ಎಂದು ಸಿಇಒ ಶಿವಕುಮಾರ ಹೇಳಿದರು. ವರದಿ ಪಡೆದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ವಾನು ಮತದ ನಿರ್ಣಯ ಅಂಗೀಕರಿಸ ಲಾಯಿತು.ತೋಟಗಾರಿಕೆ ಇಲಾಖೆ ಯಲ್ಲಿ ಅನುದಾನ ಅಪವ್ಯಯವಾಗು ತ್ತಿದೆ ಎಂದು ಸದಸ್ಯ ಗಂಗಾಧರ ನಾಡಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿ ದರು. ಇಲಾಖಾವಾರು ಮಾಹಿತಿ ಯನ್ನು ಸದಸ್ಯರಿಗೆ ಪೂರೈಸಬೇಕು.

ಕ್ರಿಯಾ ಯೋಜನೆ ರೂಪಿಸುವಾಗ, ಆಯಾ ಭಾಗದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತಪ್ಪೆಸ ಗಿದ ಮುದ್ದೇಬಿಹಾಳ ತಾಲ್ಲೂಕಿನ ತೋಟಗಾರಿಕೆ ಸಹಾಯಕ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ನೇಕಾರರ ಸಾಲ ಮನ್ನಾ ಅವಧಿ ವಿಸ್ತರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸ ಲಾಯಿತು. ಈ ಕುರಿತಂತೆ ಶಿವಾನಂದ ಅವಟಿ ಸಭೆಯ ಗಮನ ಸೆಳೆದರು. ಅಧ್ಯಕ್ಷೆ ಕಾವ್ಯಾ ದೇಸಾಯಿ, ವಿಜಾಪುರ ನಗರ ಶಾಸಕ ಡಾ.ಮಕ್ಬೂಲ್‌ ಬಾಗ ವಾನ, ಸದಸ್ಯರು ಪಾಲ್ಗೊಂಡಿದ್ದರು.

ಹೆಚ್ಚುವರಿ ಶಿಕ್ಷಕರ ನಿಯೋಜನೆಗೆ ಸೂಚನೆ
ಕೃಷ್ಣಾ ತೀರದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದ್ದು, ಆ ಶಾಲೆಗಳಿಗೆ ನಗರದ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕು. ಗ್ರಾಮೀಣ ಪ್ರದೇಶ ದಲ್ಲಿ ಇಂಗ್ಲೀಷ್‌ ಮತ್ತು ವಿಜ್ಞಾನ ಶಿಕ್ಷಕರನ್ನು ಜಿಲ್ಲಾ ಪಂಚಾಯಿತಿಯಿಂದ ಗೌರವ ಧನ ನೀಡಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಬೇಕು ಎಂದು ಸದಸ್ಯರು ಡಿಡಿಪಿಐ ಸಂಗಮೇಶ ಹಳಿಂಗಳಿ ಅವರಿಗೆ ಸೂಚಿಸಿದರು.

ತಡವಲಗಾ ಪೂಜಾರಿ ವಸತಿ ಶಾಲೆಯ ಶಿಕ್ಷಕರ ಗೈರು ಹಾಜರಿ ಕುರಿತಂತೆ ಡಿಡಿಪಿಐ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರಾದ ಅನುಸೂಯಾ ಜಾಧವ, ಶಿವಾನಂದ ಅವಟಿ, ಸೌಮ್ಯ ಕಲ್ಲೂರ, ದೇವಾನಂದ ಚವ್ಹಾಣ, ಪಾಟೀಲ ಅಸಮಾಧಾನ ವ್ಯಕ್ತಪಡಿಸಿ, ಒಂದು ವಾರದೊಳಗಾಗಿ ಶಿಕ್ಷಕರನ್ನು ಅಮಾನತುಗೊಳಿಸಲು ಆಗ್ರಹಿಸಿದರು. ಈ ಕುರಿತಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಿಇಒ ಶಿವ ಕುಮಾರ ಡಿಡಿಪಿಐಗೆ ಸೂಚಿಸಿದರು. ತಾಂಬಾ, ತಡವಲಗಾ ಹಾಗೂ ಅಥರ್ಗಾ ಶಾಲೆಗಳಲ್ಲಿ ಶಿಕ್ಷಕರಿಗಾಗಿ ವಸತಿ ಸೌಕರ್ಯ ಕಲ್ಪಿಸಿದರೂ ಅವರು ಅಲ್ಲಿ ವಾಸ್ತವ್ಯ ಮಾಡುತ್ತಿಲ್ಲ. ತಡವಲಗಾ ಶಿಕ್ಷಕರ ವಸತಿ ಗೃಹದಲ್ಲಿ ಕುರಿಗಳು ಬೀಡು ಬಿಟ್ಟಿವೆ ಎಂದು ಆ ಭಾಗದ ಸದಸ್ಯರು ಹೇಳಿದರು.

ಮೊಕದ್ದಮೆ: ಖೊಟ್ಟಿ ದಾಖಲೆಗಳನ್ನು ನೀಡಿ ಅಂಗನವಾಡಿ ಸಹಾಯಕರು ಹಾಗೂ ಕಾರ್ಯಕರ್ತೆಯರ ಹುದ್ದೆಗೆ ನೇಮಕವಾಗಿರುವ ಕುರಿತಂತೆ ಸದಸ್ಯರು ವಿವಿಧ ಪ್ರಕರಣಗಳನ್ನು ಸಭೆಯ ಗಮನಕ್ಕೆ ತಂದರು. ತಕ್ಷಣ ಪರಿಶೀಲನೆ ನಡೆಸಿ ಖೊಟ್ಟಿ ದಾಖಲೆ ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT