ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉಪಕರಣ ವಿತರಣೆಯಲ್ಲಿ ತಾರತಮ್ಯ: ಆರೋಪ

Last Updated 10 ಫೆಬ್ರುವರಿ 2012, 6:50 IST
ಅಕ್ಷರ ಗಾತ್ರ

ಜಮಖಂಡಿ: ಕೃಷಿ ಇಲಾಖೆ ಮೂಲಕ ಕೃಷಿ ಉಪಕರಣಗಳ ವಿತರಣೆಗಾಗಿ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆಗೆ ನಡೆದು ಕಾಂಗ್ರೆಸ್ ಪಕ್ಷದ ತಾ.ಪಂ.ಸದಸ್ಯರು ಸಭಾತ್ಯಾಗ ಮಾಡಲು ಮುಂದಾದ ಘಟನೆ ಬುಧವಾರ ನಡೆಯಿತು.

ಸಹಾಯಕ ಕೃಷಿ ಅಧಿಕಾರಿ ವೈ.ಟಿ.ಗುಡ್ಡದ ತಮ್ಮ ಇಲಾಖೆಯ ಪ್ರಗತಿ ವರದಿ ಸಾದರಪಡಿಸು ತ್ತಿದ್ದಂತೆಯೇ ಸದಸ್ಯ ಮಾಯಪ್ಪ ಮಿರ್ಜಿ ತಮ್ಮ ಮತಕ್ಷೇತ್ರಕ್ಕೆ ಕೃಷಿ ಉಪಕರಣ ಗಳು ಹಂಚಿಕೆಯಾಗಿಲ್ಲ ಎಂದು ದೂರಿದರು. ಆಗ ಸದಸ್ಯ ನಿಂಗಪ್ಪ ಹೆಗಡೆ ಗೂಂಡಾಗಿರಿ ಮಾಡುತ್ತಿರೇನು? ಎಂದು ಖಾರವಾಗಿ ಪ್ರಶ್ನಿಸಿದ್ದು, ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು.

ಮಾಯಪ್ಪ ಮಿರ್ಜಿ, ಪದ್ಮಣ್ಣ ಜಕನೂರ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಲು ಮುಂದಾದರು. ಆಗ ಮಧ್ಯೆ ಪ್ರವೇಶಿಸಿದ ಜಿ.ಪಂ.ಸದಸ್ಯ ವಿಠ್ಠಲ ಚೌರಿ ಸಭೆಯಲ್ಲಿ ಮುಂದುವರಿಯುವಂತೆ ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾದರು.

ಸದಸ್ಯ ಹಾಜವ್ವಗೋಳ ಫಲಾನುಭವಿಗಳಿಗೆ ಸದಸ್ಯರು ಕೂಡ ಮಾಹಿತಿ ಪೂರೈಸಬೇಕು ಎಂದು ಹೇಳಿದ್ದು ಈ ರಾದ್ದಾಂತಕ್ಕೆ ಕಾರಣವಾಯಿತು. ಅವರೇನು ಬೀಗರಲ್ಲ ಎಂದು ಸದಸ್ಯೆ ದುರ್ಗವ್ವ ಗುಡೆನ್ನವರ ಈ ಮಧ್ಯೆ ಹೇಳಿದ್ದು ಯಾರ ಗಮನಕ್ಕೂ ಬರಲಿಲ್ಲ.

ತೋಟಗಾರಿಕೆ ಅಧಿಕಾರಿ ಪ್ರಭುರಾಜ ಎಚ್.ಎಸ್. ತಮ್ಮ ಇಲಾಖೆಯ ಪ್ರಗತಿ ವರದಿ ನೀಡುತ್ತಿದ್ದಂತಯೇ, ವಿಶೇಷ ಘಟಕ ಯೋಜನೆ ಅಡಿಯಲ್ಲಿ ಆಯ್ಕೆಯಾದ 15 ಮಂದಿ ಫಲಾನುಭವಿಗಳ ಪೈಕಿ 7 ಮಂದಿ ಫಲಾನುಭವಿಗಳು ಪರಿಕರಗಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದ್ದನ್ನು ಕೆಲವು ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು.
 
ಆಯ್ಕೆಯಾದ ಫಲಾನುಭವಿಗಳಿಗೆ ಫೋನ್ ಮುಖಾಂತರ ತಿಳಿಸಿರುವುದಾಗಿ ತೋಟ ಗಾರಿಕೆ ಅಧಿಕಾರಿ ಹೇಳಿದ್ದು, ಜಿ.ಪಂ. ಸದಸ್ಯ ವಿಠ್ಠಲ ಚೌರಿ ಅವರ ಸಮಾಧಾನಕ್ಕೆ ಕಾರಣವಾಯಿತು. ಫೋನ್ ಮಾಡಿದ್ದಕ್ಕೆ ಏನೂ ದಾಖಲೆ ಇರುತ್ತದೆ ಎಂದು ಕೆಂಡಾ ಮಂಡಲ ವಾದರು. ಮಾಯಪ್ಪ ಮಿರ್ಜಿ ತೋಟ ಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ ದರು.

ರಾವಸಾಬ ಗುಬಚಿ ಮಾತನಾಡಿ, ಪಡಿತರ ಆಹಾರ ಧಾನ್ಯ ವಿತರಣಾ ಕೇಂದ್ರದಲ್ಲಿ ಒಂದೆರಡು ದಿನ ಮಾತ್ರ ವಿತರಿಸಿ ಬಂದ್ ಮಾಡಲಾಗುತ್ತದೆ. ಪಡಿತರ ಧಾನ್ಯದ ಜೊತೆಗೆ ಸಾಬಾನು, ಚಹಾಪುಡಿ ಖರೀದಿ ಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ನೇರವಾಗಿ ಆರೋಪಿಸಿದರು.

ತಾ.ಪಂ.ಅಧ್ಯಕ್ಷೆ ಗೀತಾ ಬಾಪಕರ, ಉಪಾಧ್ಯಕ್ಷ ಪ್ರಕಾಶ ಹಳೇಮನಿ, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್. ಬಿರಾದಾರಪಾಟೀಲ, ಅಭಿವೃದ್ಧಿ ಅಧಿಕಾರಿ ರೇವಣ್ಣ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT