ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೈಗಾರಿಕಾ ಘಟಕ ಸ್ಥಾಪನೆಗೆ ಆದ್ಯತೆ: ಸಿಎಂ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೃಷಿ ಕ್ಷೇತ್ರಕ್ಕೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಕಲ್ಪಿಸುವ `ಸಮೃದ್ಧ ಕರ್ನಾಟಕ~ ಒಡಂಬಡಿಕೆಗೆ ಕರ್ನಾಟಕ ಮತ್ತು ನೆದರ್ಲೆಂಡ್ಸ್ ಸರ್ಕಾರ ಬುಧವಾರ ಸಹಿ ಹಾಕಿದವು.

ಈ ಒಡಂಬಡಿಕೆಯ ಅನ್ವಯ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸುಧಾರಿತ ತಂತ್ರಜ್ಞಾನದ ಆಹಾರ ಸಂಸ್ಕರಣೆ ಕಾರಿಡಾರ್ ಅನ್ನು ರಾಜ್ಯದ ಪ್ರಮುಖ ರಸ್ತೆ ಮತ್ತು ರೈಲು ಮಾರ್ಗಗಳಿಗೆ ಹೊಂದಿಕೊಂಡಂತೆ ಅಭಿವೃದ್ಧಿಪಡಿ ಲಾಗುವುದು.

  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡಿ, ರಾಜ್ಯದ ವೈವಿ ಧ್ಯಮಯ ಹವಾಮಾನದ ಲಾಭ ಪಡೆದು ಕೊಳ್ಳಲು ಸಂಪನ್ಮೂಲಗಳ ಬಳಕೆ, ಆಯಾ ಪ್ರದೇಶದಲ್ಲಿ ಲಭ್ಯವಿರುವ ಕೌಶಲ್ಯಗಳ ಬಳಕೆ, ಆಂತರಿಕ ಮತ್ತು ಬಾಹ್ಯ ಮಾರು ಕಟ್ಟೆಯನ್ನು ಬಳಸಿಕೊಳ್ಳಲು ಅನುಕೂಲ ವಾಗುವಂತೆ ವಿವಿಧ ಕೃಷಿ ಕೈಗಾರಿಕಾ ಘಟ  ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

  ಯೋಜನೆಯ ಬಗ್ಗೆ ಮಾಹಿತಿ ನೀಡುವ `ಸಮೃದ್ಧ ಕರ್ನಾಟಕ~ (www.bouteouskarnataka.com)  ವೆಬ್‌ಸೈಟ್‌ಗೆ ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

  `ಸಮೃದ್ಧ ಕರ್ನಾಟಕ~ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಮಹಿಂದ್ರಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ.

ರಾಯಭಾರ ಕಚೇರಿ: ನೆದರ್ಲೆಂಡ್ಸ್ ರಾಯಭಾರಿ ಬಾಬ್‌ಹೀನ್ ್ಸ ಮಾತನಾಡಿ, ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ಸರ್ಕಾರ ರಾಯಭಾರ ಕಚೇರಿ ಯೊಂದನ್ನು ತೆರೆಯಲಿದೆ ಎಂದು ಪ್ರಕಟಿಸಿದರು.

ಕೃಷಿ ಸಚಿವ ಉಮೇಶ್ ಕತ್ತಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂನಾಥ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಕೆ.ವಿ. ರಾಜು, ನೆದರ್ಲೆಂಡ್ಸ್ ಸರ್ಕಾರದ ಪ್ರತಿನಿಧಿಗಳು ಹಾಗೂ ಇತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT