ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತಂತ್ರಜ್ಞಾನದ ಮಹಾದರ್ಶನ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೇಂದ್ರ ಕೃಷಿ ಸಚಿವಾಲಯ. ಆಹಾರ ಸಂಸ್ಕರಣಾ ಉದ್ಯಮಗಳು ಮತ್ತು ಎಪಿಇಡಿಎ ಸಹಯೋಗದಲ್ಲಿ ಮೀಡಿಯಾ ಟುಡೆ ಸಮೂಹ ಭಾನುವಾರದ ವರೆಗೆ ನಡೆಸುತ್ತಿರುವ 3ನೇ ಅಗ್ರಿ ಟೆಕ್ ಇಂಡಿಯಾ ಪ್ರದರ್ಶನ ಕೃಷಿ ಮತ್ತು ತತ್ಸಂಬಂಧಿ ಕ್ಷೇತ್ರದಲ್ಲಿನ ಬೆಳವಣಿಗೆ, ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುತ್ತಿದೆ.

ಭಾರತದ 20 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೃಷಿಕರ ಪ್ರತಿನಿಧಿಗಳು ಮಾತ್ರವಲ್ಲದೆ ಅಮೆರಿಕ, ಜರ್ಮನಿ, ತೈವಾನ್, ಕೆನಡಾ, ಚೀನಾ, ಇಸ್ರೇಲ್, ಟರ್ಕಿ, ಬ್ರಿಟನ್, ಸ್ಪೇನ್, ಬೆಲ್ಜಿಯಂ, ಸ್ವಿಜರ್‌ಲ್ಯಾಂಡ್, ಥಾಯ್ಲೆಂಡ್, ಫ್ರಾನ್ಸ್, ಶ್ರೀಲಂಕಾ,  ಜಪಾನ್ ಮತ್ತಿತರ ದೇಶಗಳ ಪ್ರದರ್ಶಕರು ಭಾಗವಹಿಸುತ್ತಿದ್ದಾರೆ.

ನೆದರ್‌ಲ್ಯಾಂಡ್‌ನ ಸುಮಾರು 30 ಕಂಪೆನಿಗಳು ನೂತನ ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ಪ್ರದರ್ಶಿಸುತ್ತಿವೆ. ವಿಚಾರ ಸಂಕಿರಣ, ಸಭೆ ಮತ್ತು ಕೊಳ್ಳುವ-ಮಾರುವವರ ಸಮಾಗಮ ಇಲ್ಲಿದೆ.

ಡೈರಿ ಟೆಕ್, ಇಂಡಿಯಾ ುಡೆಕ್ಸ್ ಮತ್ತು ಗ್ರೇನ್ ಟೆಕ್ ಇಂಡಿಯಾ ಹೆಸರಿನಡಿ ವೈವಿಧ್ಯಮಯ ಕೃಷಿ ಲೋಕ ಇಲ್ಲಿ ಅನಾವರಣಗೊಂಡಿದೆ. ಒಂದೇ ಸೂರಿನಡಿಯಲ್ಲಿ ಕೃಷಿ, ಕೃಷಿ ಯಂತ್ರೋಪಕರಣಗಳು, ಹೈನು, ಕೋಳಿ ಸಾಕಣೆ, ಜಾನುವಾರು, ಧಾನ್ಯ ಉದ್ಯಮ, ಆಹಾರ ಉತ್ಪನ್ನಗಳು, ಸಂಸ್ಕರಣೆ ಮತ್ತು ಚಿಲ್ಲರೆ ವ್ಯಾಪಾರಗಳ ಮಾಹಿತಿ ಪಡೆಯಬಹುದು.16ಕ್ಕೂ ಹೆಚ್ಚಿನ ದೇಶಗಳ ಕೃಷಿ ಉತ್ಪನ್ನದಿಂದ ಹಿಡಿದು ಚಿಲ್ಲರೆ ಉತ್ಪನ್ನಗಳು, ಯಂತ್ರೋಪಕರಣಗಳು ಇಲ್ಲಿವೆ.

ಜತೆಗೆ ಕೃಷಿ ಉತ್ಪನ್ನ ಮತ್ತು ಸುಗ್ಗಿ-ನಂತರದ ತಂತ್ರಜ್ಞಾನ, ಭಾರತೀಯ ಹೈನುಗಾರಿಕೆ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಸಹಕಾರ, ಮತ್ತು ಭಾರತದ ಆಹಾರ ಮತ್ತು ಧಾನ್ಯಗಳ ಸಂಸ್ಕರಣ ಮತ್ತು ಪ್ಯಾಕೇಜಿಂಗ್ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಸಹಕಾರದ ಸಾಧ್ಯತೆಗಳು ಕುರಿತ ಸಮ್ಮೇಳನವನ್ನೂ ಆಯೋಜಿಸಲಾಗಿದೆ.

ಈ ಪ್ರದರ್ಶನದ ಮೂಲಕ ಹೊರ ದೇಶಗಳ ನಿಯೋಗಗಳ ಜೊತೆ ಮಾತುಕತೆ ನಡೆಸುವ ಮೂಲಕ ಭಾರತೀಯ ಕೃಷಿ ಉದ್ಯಮಿಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತಿದ್ದೇವೆ. ಇದರೊಂದಿಗೆ ಶ್ರೀಲಂಕಾ, ಭೂತಾನ್, ನೈಜೀರಿಯ, ಆಸ್ಟ್ರೇಲಿ ಮತ್ತು ನ್ಯೂಜಿಲೆಂಡ್ ಮತ್ತಿತರ ದೇಶಗಳ ವ್ಯಾಪಾರಿ ನಿಯೋಗಗಳನ್ನು ಆಹ್ವಾನಿಸಿದ್ದೇವೆ ಎನ್ನುತ್ತಾರೆ ಮೀಡಿಯಾ ಟುಡೆ ಸಮೂಹದ ಸಿಇಒ ಎಂ.ಬಿ. ನಕ್ವಿ.
ಸ್ಥಳ: ಅರಮನೆ ಮೈದಾನದ ಗಾಯತ್ರಿ ವಿಹಾರ, ಮೇಕ್ರಿ ವೃತ್ತ ಬಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT