ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಶೋಧನೆ: ಲಾಭ ಪಡೆಯಿರಿ

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ: ನಂಜುಂಡಸ್ವಾಮಿ ಸಲಹೆ
Last Updated 22 ಆಗಸ್ಟ್ 2015, 4:57 IST
ಅಕ್ಷರ ಗಾತ್ರ

ಅರಕಲಗೂಡು: ಕೃಷಿಯಲ್ಲಿ ಹಲವಾರು ಹೊಸ ಉಪಯುಕ್ತ ವಿಧಾನಗಳು ಬಳಕೆಗೆ ಬರುತ್ತಿದ್ದು ರೈತರು ಇದರ ಲಾಭ ಪಡೆದುಕೊಳ್ಳಲು ಮುಂದಾಗುವಂತೆ ಜಿಲ್ಲಾ ಪಂಚಾಯತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ ತಿಳಿಸಿದರು.

ತಾಲ್ಲೂಕಿನ ಗಂಜಲಗೂಡು ಗ್ರಾಮ ದಲ್ಲಿ ನಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಬುಧವಾರ ನಡೆದ ಭತ್ತದ ಬೆಳೆ ವಿಚಾರಗೋಷ್ಠಿ ಯಲ್ಲಿ ಅವರು ಮಾತನಾಡಿದರು. ತಜ್ಞರ ಸಲಹೆ ಪಡೆದು  ವ್ಯವಸ್ಥಿತ ರೀತಿಯಲ್ಲಿ ಕೃಷಿ ಕಾರ್ಯ ನಡೆಸಿದಾಗ ಬೇಸಾಯದಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಈ ಕುರಿತು ರೈತರು ಯೋಜನೆ ಗಳನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.

ಆಹಾರ ಬೆಳೆಗಳನ್ನು ಲಾಭದಾಯಕ ಆಗಿಸುವ ನಿಟ್ಟಿನಲ್ಲಿ ಸರ್ಕಾರ, ಕೃಷಿ ವಿದ್ಯಾಲಯಗಳು ರೈತರಿಗೆ ಮಾರ್ಗ ದರ್ಶನ ನೀಡಬೇಕು ಎಂದರು. ಹಾಸನ ಕೃಷಿ ವಿದ್ಯಾಲಯದ ಕೀಟ ಶಾಸ್ತ್ರಜ್ಞ ಡಾ.ಮುನಿಸ್ವಾಮಿಗೌಡ ಮಾತ ನಾಡಿ, ರೈತರು ತಮ್ಮ ಜಮೀನಿನಲ್ಲಿ ಒಂದೇ ಬೆಳೆಗೆ ಅಂಟಿಕೊಳ್ಳದೆ ಬೆಳೆ ಪರಿ ವರ್ತನೆ ಮತ್ತು ಅಂತರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಬೇಕು.

ಇದರಿಂದ ಬೆಳೆಗಳಿಗೆ ಬರುವ ಕೀಟ ರೋಗಬಾಧೆ ಯನ್ನು  ತಡೆಗಟ್ಟಬಹುದು. ಅಲ್ಲದೆ, ಭೂಮಿಯ ಆರೋಗ್ಯ ಕಾಪಾಡಿಕೊಳ್ಳ ಬಹುದು ಎಂದರು. ಕಂದಲಿ ಕೃಷಿ ವಿಜ್ಞಾನ ಕೇಂದ್ರದ  ಡಾ.ಬಸವರಾಜ್‌ ಹಾಗೂ  ಹಾಸನ ಕೃಷಿ ವಿದ್ಯಾಲಯದ ಬೇಸಾಯ ಶಾಸ್ತ್ರಜ್ಞ ಡಾ.ಬೈರಪ್ಪನವರ್‌  ಭತ್ತದ ಬೇಸಾಯ, ಬೆಳೆ ಯಲ್ಲಿ ಬರುವ ರೋಗ ಅದರ ಹತೋಟಿ ಕ್ರಮ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯ ಲೋಕೇಶ್‌, ಡಾ.ಮಂಜುನಾಥ್‌, ಶಿಬಿರಾರ್ಥಿಗಳಾದ  ಸಂಗೀತಾ, ಸಂದೇಶ್‌, ಪೂಜಾ, ಸುಪರ್ಣಾ, ಕ್ಷಮಾ, ಚಿನ್ಮಯಿ, ದಿವ್ಯಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT