ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ದರ್ಶನ ಪಡೆದ ರಜತಿ ಅಮ್ಮಾಳ್

Last Updated 27 ಸೆಪ್ಟೆಂಬರ್ 2011, 10:20 IST
ಅಕ್ಷರ ಗಾತ್ರ

ಉಡುಪಿ: 2ಜಿ ಹಗರಣದಲ್ಲಿ ಸಿಲುಕಿ ತಿಹಾರ್ ಜೈಲಿನಲ್ಲಿರುವ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರ ತಾಯಿ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಪತ್ನಿ ರಜತಿ ಅಮ್ಮಾಳ್ ಉಡುಪಿ ಕೃಷ್ಣಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಮಧ್ಯಾಹ್ನ 1 ಗಂಟೆಗೆ ಮಠಕ್ಕೆ ಆಗಮಿಸಿದ ಅವರು ಕೃಷ್ಣಮುಖ್ಯಪ್ರಾಣನಿಗೆ ನಮಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶೀರೂರು ಮಠಕ್ಕೆ ತೆರಳಿ ಪರ್ಯಾಯ ಶೀರೂರು ಲಕ್ಷ್ಮೀವರ ತೀರ್ಥರಿಂದ ಆಶೀರ್ವಾದ ಪಡೆದರು. ರಜತಿ ಅಮ್ಮಾಳ್ ಅವರಿಗೆ ಕೃಷ್ಣನ ವಿಗ್ರಹ, ಮಂತ್ರಾಕ್ಷತೆ ನೀಡಿದ ಸ್ವಾಮೀಜಿ ಆಶೀರ್ವದಿಸಿದರು. ಕೆಲವೇ ನಿಮಿಷ ಮಠದಲ್ಲಿದ್ದ ಅವರ ಜತೆ  ಇನ್ನೊಬ್ಬ ಮಹಿಳೆ ಇದ್ದರು.

ವಿಶೇಷ ಪ್ರಾರ್ಥನೆ: ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಮಗಳು ಶೀಘ್ರವಾಗಿ ಆರೋಪಗಳಿಂದ ಮುಕ್ತವಾಗಿ ಹೊರಬರಲಿ ಎಂಬ ಕಾರಣದಿಂದ ಕೃಷ್ಣನ ದರ್ಶನ ಮಾಡಲು ಬಂದಿದ್ದ ಅವರು ಸ್ವಾಮೀಜಿ ಬಳಿ ಸಮಸ್ಯೆ ತೆರೆದಿಟ್ಟರು. `ಕೃಷ್ಣನ ಅನುಗ್ರಹದಿಂದ 48 ದಿನಗಳೊಳಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ~ ಎಂಬ ಭರವಸೆಯನ್ನು ಸ್ವಾಮೀಜಿ ನೀಡಿದರು. ಕನಿಮೋಳಿ ಆರೋಪ ಮುಕ್ತರಾದ ಕೂಡಲೇ ಅವರನ್ನು ಮಠಕ್ಕೆ ಕರೆತಂದು ಕೃಷ್ಣ ದರ್ಶನ ಮಾಡಿಸಿ ಎಂದೂ ಹೇಳಿದ್ದಾಗಿ ಮಠದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT