ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಕುಮಾರ್‌ಗೆ ಜಯಮಾಲೆ

Last Updated 5 ಸೆಪ್ಟೆಂಬರ್ 2013, 7:05 IST
ಅಕ್ಷರ ಗಾತ್ರ

ಚಿಕ್ಕೋಡಿ: ಸಾವಿರಾರು ಕುಸ್ತಿ ಪ್ರಿಯರಿಗೆ ರೋಮಾಂಚಕಾರಿ ಅನುಭವ ನೀಡಿದ ಕುಸ್ತಿಯಲ್ಲಿ ಪಂಜಾಬ್‌ನ ಕೃಷ್ಣಕುಮಾರ, ಅವರು ಹರಿಯಾಣದ ಸತ್ಯೇಂದ್ರ ಅವರನ್ನು ಚಿತ್ ಮಾಡುವ ಮೂಲಕ ಜಯದ ಪತಾಕೆ ಹಾರಿಸಿದರು.

ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ಬುಧವಾರ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ 29 ನಿಮಿಷಗಳ ಕಾದಾಟದ ನಂತರ ಪ್ರಶಸ್ತಿ ಮೊತ್ತವಾದ ರೂ  5,55,551 ಅನ್ನು ಇಬ್ಬರಿಗೂ ಹಂಚಲಾಯಿತು.

ರೂ 3,45,551 ನಗದು ಬಹುಮಾನಕ್ಕಾಗಿ ಉತ್ತರ ಪ್ರದೇಶದ ವರುಣಕುಮಾರ ಮತ್ತು ನವದೆಹಲಿಯ ಸಂಜಯಕುಮಾರ ನಡುವೆ 24 ನಿಮಿಷ ನಡೆದ ಸೆಣಸಾಟದಲ್ಲಿ ವರುಣಕುಮಾರ ಜಯಶಾಲಿಯಾದರು.

ತೃತೀಯ ಸ್ಥಾನದ ರೂ  1,50,001 ನಗದು ಬಹುಮಾನಕ್ಕಾಗಿ ಪಂಜಾಬ್‌ನ ನವನೀತ ಶರ್ಮಾ ಹಾಗೂ ಹರಿಯಾಣದ ಮನ್‌ದೀಪ್ ಡೋಲು ಮಧ್ಯೆ 50 ನಿಮಿಷಗಳ ನಡೆದ ಕಾದಾಟದಲ್ಲಿ ಮನ್‌ದೀಪ್ ಜಯಶಾಲಿಯಾದರು. ನಾಲ್ಕನೇ ಸ್ಥಾನದ ರೂ  1,05,001 ಬಹುಮಾನಕ್ಕಾಗಿ ಮಹಾರಾಷ್ಟ್ರದ ನಂದು ಅಮದಾರ ಹಾಗೂ ಉತ್ತರ ಪ್ರದೇಶದ ವಿಕ್ರಾಂತ್ ಕುಮಾರ್ ಮಧ್ಯೆ ನಡೆದ ಕಾದಾಟದಲ್ಲಿ ನಂದು ಅಮದಾರ ಜಯ ಪಡೆದರು.

ಐದನೇ ಸ್ಥಾನದ ರೂ  75,001 ಬಹುಮಾನಕ್ಕಾಗಿ ನಡೆದ ಪಂದ್ಯದಲ್ಲಿ ಪಂಜಾಬ್‌ನ ಗೋಲ್ಡನ್ ಸಿಂಗ್ ಜಯ ಸಾಧಿಸಿದರು. ರೂ 50,001 ನಗದು ಬಹುಮಾನಕ್ಕಾಗಿ ಮುಧೋಳದ ಸಂಜಯ ಮಾನೆ ಮತ್ತು ಬಾವಾನ ಸೌಂದತ್ತಿಯ ಸಂಭಾಜಿ ಸುಡಕೆ ನಡುವೆ ನಡೆದ ಕಾದಾಟದ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿತು. ರೂ  50,001 ನಗದು ಬಹುಮಾನ ಹೊಂದಿದ್ದ ಏಳನೇ ಕ್ರಮಾಂಕದ ಕುಸ್ತಿಯಲ್ಲಿ ಹರಿಯಾಣದ ಪೈಲ್ವಾನ್ ಪ್ರದೀಪ ಗುಲಬರ್ಗಾದ ಸಿದ್ದಪ್ಪ ಅವರನ್ನು ಸೋಲಿಸಿದರು.

ವಿವಿಧ ಮಠಾಧೀಶರು, ಸಣ್ಣ ಕೈಗಾರಿಕೆ ಸಚಿವ ಪ್ರಕಾಶ ಹುಕ್ಕೇರಿ, ಶಾಸಕ, ಮಾಜಿ ಸಚಿವ ಉಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಡಿಕೆಎಸ್‌ಎಸ್‌ಕೆ ಅಧ್ಯಕ್ಷ ಅಮೀತ ಕೋರೆ ಮುಂತಾದವರು ಕುಸ್ತಿ ಪಂದ್ಯಾಟ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT