ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗೇರಿ: ಅರ್ಧಕ್ಕೆ ನಿಂತ ಕೆರೆ ಕಾಮಗಾರಿ

Last Updated 17 ಡಿಸೆಂಬರ್ 2010, 10:30 IST
ಅಕ್ಷರ ಗಾತ್ರ

ಕೆಂಗೇರಿ: ಇಲ್ಲಿನ ಕೆರೆ ಅಭಿವೃದ್ಧಿ ಕಾರ್ಯ ಅರ್ಧಕ್ಕೆ ನಿಂತಿದೆ. ಕೆರೆ ತುಂಬಾ ಕಸ- ಕಡ್ಡಿ, ಜೊಂಡು ತುಂಬಿಕೊಂಡಿದ್ದು, ನೀರು ಕಲುಷಿತಗೊಂಡಿದೆ.

ಕಲುಷಿತ ನೀರಿನಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸೊಳ್ಳೆ, ನೊಣ, ಹಂದಿ, ನಾಯಿಗಳ, ಹಾವಳಿಯಿಂದ ಕೆರೆಯ ಬಳಿ ಬರಲು ಜನರು ಹೆದರುತ್ತಿದ್ದಾರೆ.

ಕೆರೆಯ ಸುತ್ತಲೂ ಇರುವ ಪಾದಚಾರಿ ಮಾರ್ಗ ಹಾಳಾಗಿದೆ. ಸಿಮೆಂಟ್ ಬ್ಲಾಕ್‌ಗಳು ಮೇಲೆದ್ದು ಅವ್ಯವಸ್ಥೆ ಉಂಟಾಗಿದೆ.

ಅರಣ್ಯ ಇಲಾಖೆಯು ಐದಾರು ವರ್ಷಗಳ ಹಿಂದೆಯೇ ಆರಂಭಿಸಿದ ಅಭಿವೃದ್ಧಿ ಕಾಮಗಾರಿ ಅಪೂರ್ಣವಾಗಿ ಉಳಿದಿದೆ. ಯೋಜನೆ ಪ್ರಕಾರ ದೋಣಿ ವಿಹಾರ ಆರಂಭಿಸಿದ್ದಿದ್ದರೆ ಆದಾಯವೂ ಬರುತ್ತಿತ್ತು. ನಾಗರಿಕರಿಗೂ ಸಂತೋಷದಿಂದ ಕಾಲ ಕಳೆಯಲು ಒಳ್ಳೆಯ ತಾಣವೂ ಸಿಗುತ್ತಿತ್ತು.

32.16 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದರೆ ಸುತ್ತ ಮುತ್ತಲಿನ ನಿವಾಸಿಗಳು ಮತ್ತು ಪ್ರವಾಸಿಗರ ಪಾಲಿಗೆ ಕೆರೆಯು ಆಕರ್ಷಕ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ.

ಇನ್ನಾದರೂ ಇಲಾಖೆಯ ಅಧಿಕಾರಿಗಳು ಕೆರೆಯನ್ನು ಅಭಿವೃದ್ದಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕರು, ಸಂಘ, ಸಂಸ್ಥೆಗಳು ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT