ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ: ಸೌಲಭ್ಯಗಳಿಲ್ಲದ ಮತಗಟ್ಟೆ

Last Updated 23 ಏಪ್ರಿಲ್ 2013, 6:58 IST
ಅಕ್ಷರ ಗಾತ್ರ

ಕೆಂಭಾವಿ: ವಿಧಾನಸಭೆ ಚುನಾವಣೆಗೆ ಸ್ಥಾಪಿಸಲಾದ ಮತಗಟ್ಟೆಗಳನ್ನು ಅವೈಜ್ಞಾನಿಕವಾಗಿ ಸ್ಥಾಪಿಸಲಾಗಿದ್ದು, ಮತದಾರರಲ್ಲಿ ಗೊಂದಲ ಮೂಡಿಸಿದೆ.

ಮತದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಅವುಗಳನ್ನು ಸ್ಥಾಪಿಸಬೇಕಾಗಿತ್ತು. ಆದರೆ ಮನೆಗಳು ಒಂದೆಡೆಯಾದರೆ ಮತಗಟ್ಟೆಗಳು ಮತ್ತೊಂದೆಡೆ ನಿರ್ಮಾಣವಾಗಿರುವುದು ಗೊಂದಲ ಮೂಡಿಸಿದೆ. ಪಟ್ಟಣದ 80 ನೇ ಮತಗಟ್ಟೆಯನ್ನು ವಾರ್ಡ್ ಜನ ಇರುವ ಕಡೆಯಿಂದ ಬೇರೆಡೆಗೆ ಸ್ಥಾಳಾಂತರಿಸಲಾಗಿದೆ. ಇದೆ ರೀತಿ ಹಲವು ಮತಗಟ್ಟೆಗಳು ಬದಲಾವಣೆಯಾಗಿದ್ದು, ಸ್ಥಳೀಯ ಮತದಾರರು ದೂರದ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಾಗಿದೆ.

ಮತಗಟ್ಟೆಗಳು ಆಯಾ ವಾರ್ಡ್‌ಗಳಲ್ಲಿ ನಿರ್ಮಿಸಿದರೆ ಮತದಾರರಿಗೆ ಅನುಕೂಲವಾಗುತ್ತದೆ. ಆದರೆ ಈಗ ಸ್ಥಾಪನೆಯಾದ ಮತಗಟ್ಟೆಗಳು ವೃದ್ಧ ಮತದಾರರಿಗೆ ತೊಂದರೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಯಾ ವಾರ್ಡ್‌ಗಳಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿದ್ದರೂ ಬೇರೆ ವಾರ್ಡ್‌ಗಳಲ್ಲಿ ಮತಗಟ್ಟೆಗಳನ್ನು ನಿರ್ಮಿಸಲಾಗಿರುವುದು ಏತಕ್ಕೆ ಎಂಬುದು ತಿಳಿಯುತ್ತಿಲ್ಲ ಎಂದು ಹಿರಿಯ ಮತದಾರರೊಬ್ಬರು ಹೇಳುತ್ತಾರೆ.

ತೆಳಗೇರಿ ಬಡಾವಣೆ ಮತದಾರರು ತಮ್ಮ ಬಡಾವಣೆಯಲ್ಲಿರುವ 85 ನೇ ಮತಗಟ್ಟೆಯನ್ನು ಬಿಟ್ಟು  ದೂರದ 86, 89 ನೇ ಮತಗಟ್ಟೆಯಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮತದಾನ ಮಾಡಬೇಕಾಗಿದೆ. 80 ನೇ ಮತಗಟ್ಟೆ ತೆರೆಯಲು ಸರ್ಕಾರಿ ಕಟ್ಟಡಗಳಿದ್ದರೂ ದೂರದ ಕನ್ಯಾ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದೆ.

ಸಾಯಿನಗರ ಮತ್ತು ಜನತಾ ಕಾಲೋನಿಯಲ್ಲಿ ಮತಗಟ್ಟೆ ತೆರೆಯಲು ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಇದ್ದರೂ ಅಲ್ಲಿ ಮತಗಟ್ಟೆಗಳನ್ನು ತೆರೆಯದಿಲ್ಲ. ದೂರದ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದ್ದು, ಮತದಾರರಲ್ಲಿ ಗೊಂದಲ ಉಂಟಾಗಿದೆ. ಗ್ರಾಮದ ಎಲ್ಲ ಮತಗಟ್ಟೆಗಳು ಕೂಡ ಮತದಾರ ಒಂದೆಡೆಯಾದರೆ ಮತಗಟ್ಟೆಗಳು ಒಂದೆಡೆ ಎನ್ನುವಂತಾಗಿದೆ.

ಕೆಂಭಾವಿಯಲ್ಲಿ 15 ಮತಗಟ್ಟೆಗಳಿದ್ದು, ಅದರಲ್ಲಿ ಐದು ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಮತದಾರರು ನಿಲ್ಲಲು ನೆರಳಿನ ವ್ಯವಸ್ಥೆ ಇಲ್ಲ. ಎಲ್ಲ ಸೌಲಭ್ಯಗಳುಳ್ಳ ಸರ್ಕಾರಿ ಕಟ್ಟಡಗಳಿದ್ದರೂ, ಸೌಲಭ್ಯವಿಲ್ಲದ ಕಟ್ಟಡಗಳಲ್ಲಿ ಮತಗಟ್ಟೆಗಳನ್ನು ತೆರೆದಿರುವುದು ಏತಕ್ಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಈ ಅವ್ಯವಸ್ಥೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT