ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಇ.ಎಸ್ ನೇಮಕಾತಿ; ವಿಳಂಬವೇಕೆ?

Last Updated 3 ಫೆಬ್ರುವರಿ 2011, 15:45 IST
ಅಕ್ಷರ ಗಾತ್ರ


ಕರ್ನಾಟಕ ಲೋಕಸೇವಾ ಆಯೋಗವು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಪ್ರೌಢಶಾಲಾ 629 ಮುಖ್ಯ ಶಿಕ್ಷಕರ ನೇಮಕಾತಿಗಾಗಿ 25.11.2007 ರಂದು ಅರ್ಜಿ ಆಹ್ವಾನಿಸಿ, ಫೆಬ್ರುವರಿ 2008 ರಂದು ಪೂರ್ವಭಾವಿ ಪರೀಕ್ಷೆ ಹಾಗೂ 13.12.2008 ರಂದು ಕೆ.ಎ.ಎಸ್. ಮಾದರಿಯಲ್ಲಿ ಮುಖ್ಯ ಪರೀಕ್ಷೆ ನಡೆಸಿ 7.07.2009 ರಂದು ಫಲಿತಾಂಶ ಪ್ರಕಟಿಸಿರುವುದು ಸರಿಯಷ್ಟೇ.

ಆಯೋಗವು ಅರ್ಜಿ ಆಹ್ವಾನಿಸಿ ಮೂರುವರೆ ವರ್ಷಗಳಾದರೂ ಈ ನೇಮಕಾತಿಯ ಅಂತಿಮ ಪಟ್ಟಿಯನ್ನ ಪ್ರಕಟಿಸಿ ಸಾ.ಶಿ. ಇಲಾಖೆಗೆ ಕಳುಹಿಸಿರುವುದಿಲ್ಲ. ಈ ಸಂಬಂಧ ಯಾವುದೇ ರಿಟ್ ನ್ಯಾಯಾಲಯದಲ್ಲಿ ಇಲ್ಲದಿದ್ದರೂ ವಿನಾಕಾರಣ ಆಯೋಗ ವಿಳಂಬ ನೀತಿ ಅನುಸರಿಸುತ್ತಿದೆ. ಒಂದೊಂದು ನೇಮಕಾತಿ ಪೂರ್ಣಗೊಳ್ಳಲು ನಾಲ್ಕು-ಐದು-ವರ್ಷಗಳ ಅಗತ್ಯವಿದೆಯೇ?

ಕೇಂದ್ರದ ಯು.ಪಿ.ಎಸ್.ಸಿ. ಮಾದರಿಯಲ್ಲಿ ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಲು ಆಯೋಗಕ್ಕೆ ಸಾಧ್ಯವಾಗುತ್ತಿಲ್ಲವೇಕೆ? ನೇಮಕಾತಿ ವಿಳಂಬದಿಂದ ಅಭ್ಯರ್ಥಿಗಳು ಕ್ರಿಯಾಶೀಲತೆ, ಉತ್ಸಾಹ ಕಳೆದುಕೊಂಡರೆ, ಆಯೋಗ ಮತ್ತು ಸರ್ಕಾರ ‘ಉತ್ತರದಾಯಿತ್ವ’ ಕಳೆದುಕೊಳ್ಳಬೇಕಾಗುತ್ತದೆ.

ಆದ್ದರಿಂದ ಈ ನೇಮಕಾತಿ ಪ್ರಕ್ರಿಯೆಯನ್ನ ‘ಆಯೋಗ’ ಮತ್ತು ಶಿಕ್ಷಣ ಇಲಾಖೆ ಬೇಗ ಪೂರ್ಣಗೊಳಿಸುವ ಕ್ರಮ ಕೈಗೊಳ್ಳಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT