ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್ ಹೊಸ ಸಿಲಬಸ್ ತಂದಿರುವ ಕುತ್ತು!

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 29.8.2011 ರಂದು ಸರ್ಕಾರವು ಕೆಪಿಎಸ್‌ಸಿಯ ಶಿಫಾರಸ್ಸಿನ ಮೇರೆಗೆ ಕೆಎಎಸ್ ಪ್ರಿಲಿಮ್ಸ ಪರೀಕ್ಷೆಯ ಪಠ್ಯವನ್ನು ಬದಲಾವಣೆ ಮಾಡಿ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. 
ಆದರೆ ಈ ಹೊಸ ಪದ್ದತಿಯಲ್ಲಿ  120 ಅಂಕಗಳಿಗೆ ಮೀಸಲಾಗಿಟ್ಟಿರುವುದು ಕಲಾ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಬಹಳಷ್ಟು ಅಭ್ಯರ್ಥಿಗಳು ಕಲಾ ಪದವಿ ಹೊಂದಿದ್ದು, ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯ ಹಾಗೂ ಸಾಮಾನ್ಯ ಮನೋ ಸಾಮರ್ಥ್ಯ ವಿಷಯಗಳಲ್ಲಿ ಹಿಂದುಳಿದಿರುತ್ತಾರೆ.
ಜೊತೆಗೆ ಉತ್ತಮ ಗುಣಮಟ್ಟದ ಪುಸ್ತಕಗಳು ಕನ್ನಡದಲ್ಲಿ ಲಭ್ಯವಿಲ್ಲವಾಗಿದೆ. ಇದರ ಪರಿಣಾಮ ಕಲಾ ಪದವಿ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ತೇರ್ಗಡೆ ಹೊಂದುವುದು ಕಠಿಣವಾಗುತ್ತದೆ.ಆದುದರಿಂದ ಹೊಸ ಪಠ್ಯವನ್ನು ಸರ್ಕಾರವು ಪುನರ್ ಪರಿಶೀಲಿಸಬೇಕಾಗಿರುವುದು  ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT