ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೆಜೆಪಿಯಿಂದ ರಾಜ್ಯಕ್ಕೆ ಹಿತ'

Last Updated 25 ಏಪ್ರಿಲ್ 2013, 6:29 IST
ಅಕ್ಷರ ಗಾತ್ರ

ಕೊಲ್ಹಾರ: ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಪಕ್ಷಗಳು ಸ್ವಹಿತದಲ್ಲಿಯೇ ಕಾಲ ಕಳೆದಿವೆ. ನಾಡಿನ ನೆಲ, ಜಲ, ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ತೋರದೆ ಮೊಸಳೆ ಕಣ್ಣೀರು ಹಾಕಿ ಜನತೆಯನ್ನು ಮೋಸಗೊಳಿಸಿವೆ. ರಾಜ್ಯದ ಹಿತ ಕಾಯುವ ಸಲುವಾಗಿ ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಮನಗಂಡು ಕೆಜೆಪಿ ಸ್ಥಾಪಿಸಿದ್ದಾರೆ ಎಂದು ಬಸವನ ಬಾಗೇವಾಡಿ ಕೆಜೆಪಿ  ಅಭ್ಯರ್ಥಿ ಸಂಗರಾಜ ದೇಸಾಯಿ ಹೇಳಿದರು.

ಕೊಲ್ಹಾರದಲ್ಲಿ ಬುಧವಾರ ನಡೆದ ಸಂತೆಯಲ್ಲಿ ಇರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಅವರು ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿದರು.

ಬರುವ ಚುನಾವಣೆಯಲ್ಲಿ ಕೆಜೆಪಿಯು ಅಧಿಕ ಸ್ಥಾನಗಳನ್ನು ಪಡೆಯುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಈ ಭಾರಿ ತಮಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದರು.  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿರುವ ಹಲವು ಜನಪರ ಯೋಜನೆಗಳಿಂದ ಜನತೆಗೆ ಸಾಕಷ್ಟು ಪ್ರಯೋಜನ ದೊರೆತಿದೆ. 

ಗ್ರಾ.ಪಂ.ಸದಸ್ಯ ಟಿ.ಟಿ.ಹಗೇದಾಳ ಮಾತನಾಡಿ ಈ ಭಾಗದ ಯುವಕರ ಪ್ರಮುಖ ಆಕರ್ಷಣೆಯಾಗಿರುವ ಯುವ ಧುರೀಣ ಸಂಗರಾಜ ದೇಸಾಯಿ ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದು, ಬಡವರ, ದೀನ-ದಲಿತರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದಾರೆ.   ಜನ ದೇಸಾಯಿ ಅವರನ್ನು ಬೆಂಬಲಿಸಲಿದ್ದಾರೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT