ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೆಜೆಪಿಯಿಂದ ರಾಜ್ಯದಲ್ಲಿ ಸಾಮಾಜಿಕ ನ್ಯಾಯ'

Last Updated 22 ಏಪ್ರಿಲ್ 2013, 6:45 IST
ಅಕ್ಷರ ಗಾತ್ರ

ಹಾನಗಲ್: `ರಾಜ್ಯ ರಾಜಕೀಯದಲ್ಲಿ ಹೊಸ ಆಶಾವಾದ ಮೂಡಿಸಿರುವ ಕೆ.ಜೆ.ಪಿಗೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಸರ್ಕಾರ ರಚನೆಗೆ ಬಲ ಬಂದಂತಾಗಿದೆ' ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಹೇಳಿದರು.

ಹಾನಗಲ್‌ನಲ್ಲಿ ವಿವಿಧ ಪಕ್ಷಗಳಿಂದ ಕೆ.ಜೆ.ಪಿ ಸೇರಿದ ನಾಯಕರನ್ನು ಉದ್ದೆೀಶಿಸಿ ಮಾತನಾಡಿದ ಅವರು, ಹಾನಗಲ್ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಲ್ಲಿ ಬಿಎಸ್‌ವೈ ನೇತೃತ್ವದ ಸರಕಾರಿ ನೀಡಿದ ಅಭಿವೃದ್ಧಿ ಕಾರ್ಯಗಳು ಮತದಾರರನ್ನು ತೃಪ್ತಿಗೊಳಿಸಿವೆ ಎಂದರು.

ತಾಲ್ಲೂಕಿನ ಮಾಸನಕಟ್ಟಿಯಲ್ಲಿ ಕೆಜೆಪಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಸ್.ಕೆ.ಪೀರಜಾದೆ, ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಿ.ಐ.ಕಿತ್ತೂರ ನೇತೃತ್ವದಲ್ಲಿ 40ಕ್ಕೂ ಅಧಿಕ ಇತರ ಪಕ್ಷಗಳ ಅಲ್ಪಸಂಖ್ಯಾತ ಸಮುದಾಯದ ನಾಯಕರು ಕೆಜೆಪಿ ಸೇರಿದರು.

ನರೇಗಲ್ ಗ್ರಾಮದಲ್ಲಿ ಸಿದ್ಧರಾಮಗೌಡ ಪಾಟೀಲ ಹಾಗೂ ಪ್ರಭು ಶಂಕ್ರಿಕೊಪ್ಪ ಅವರ ನೇತೃತ್ವದಲ್ಲಿ ಚಂದ್ರು ನಾಯಕರ ಸೇರಿದಂತೆ 15 ಜನ ಕೆಜೆಪಿ ಸೇರಿದರು. ಕೂಸನೂರ ಗ್ರಾಮದ ಹುನುಮಂತಪ್ಪ ತುಮರಿಕೊಪ್ಪ ಅವರ ನೇತೃತ್ವದಲ್ಲಿ ಬಾಬುಸಾಬ ಸೇಖಸನದಿ, ಖಲೀಲಸಾಬ ಕಂಬಳಿ, ಮಖಬೂಲಸಾಬ ನಾಸಿಪುಡಿ, ಅಲ್ಲಾಬಕ್ಷ ಕಛವಿ ಕೆಜೆಪಿ ಸೇರಿದರು.

ಹಾನಗಲ್‌ನ ಹೊಸಪೇಟೆ ಓಣಿಯಲ್ಲಿ ಮಹಮ್ಮದ್‌ಗೌಸ್ ನಾಸಿಪುಡಿ ನೇತೃತ್ವ ದಲ್ಲಿ 25ಕ್ಕೂ ಹೆಚ್ಚು ಜನರು ಕೆಜೆಪಿ ಸೇರಿದರು.
ನೂರಾನಿಗಲ್ಲಿಯಲ್ಲಿ ಆರೀಫ ಅಹಮ್ಮದ ಗಿರಿಸಿನಕೊಪ್ಪ ಅವರ ನೇತೃತ್ವದಲ್ಲಿ 11 ಜನ ಕೆಜೆಪಿ ಸೇರಿದ್ದಾರೆ. ತಾಲ್ಲೂಕಿನ ಆರೆಗೊಪ್ಪ ಗ್ರಾಮದ ಅಲ್ಪ ಸಂಖ್ಯಾತ ಸಮುದಾಯದ ಹಲವಾರು ಪಕ್ಷ ಸೇರಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಹಸೀನಾ ನಾಯ್ಕನವರ, ಮುಖಂಡರಾದ ಬಿ.ಎಸ್.ಅಕ್ಕಿವಳ್ಳಿ,  ಫೈರೋಜ ಜಹಗೀರದಾರ, ಚಮನಸಾಬ ಕಿತ್ತೂರ, ಮುಸ್ತಾಕ ಆಲದಕಟ್ಟಿ, ಚನ್ನು ಹುಗ್ಗಿ, ಶಿವಪುತ್ರ ಚಿಕ್ಕಣ್ಣನವರ, ರವಿರಾಜ ಕಲಾಲ, ಮಾರುತಿ ತಾಂದಳೆ, ಭಾಸ್ಕರ ಹುಲಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT