ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್: ಡೆಬಿಟ್ ಕಾರ್ಡ್ ಬಳಕೆಗೆ ಶುಲ್ಕ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಟಿಎಂ ಡೆಬಿಟ್ ಕಾರ್ಡ್ ಬಳಕೆಗೆ ವಾರ್ಷಿಕ ರೂ.112 ಶುಲ್ಕ ವಿಧಿಸುವುದಾಗಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಹೇಳಿದೆ.

ಜುಲೈ 1ರಿಂದ ಪರಿಷ್ಕೃತ ದರ  ಜಾರಿಗೆ ಬರಲಿದೆ. ಹೊಸ ಕಾರ್ಡ್ ಮತ್ತು ಹಳೆಯ ಕಾರ್ಡ್ ನವೀಕರಣಕ್ಕೆ ಇನ್ನು ಮುಂದೆ ರೂ.100 ಶುಲ್ಕ ವಿಧಿಸಲಾಗುತ್ತದೆ. ಇದರ ಜತೆಗೆ ಸೇವಾ ಶುಲ್ಕದ ರೂಪದಲ್ಲಿ ರೂ.12 ಪಡೆಯಲಾಗುತ್ತದೆ. ನಂತರ ಪ್ರತಿ ವರ್ಷವೂ ಕಾರ್ಡ್ ಬಳಕೆಗೆ ರೂ.112ರಂತೆ ಶುಲ್ಕ ವಿಧಿಸಲಾಗುವುದು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಆದರೆ, ಕೆನರಾ ಕಿರು ಉಳಿತಾಯ ಖಾತೆ, ಪ್ರಾಥಮಿಕ ಬ್ಯಾಂಕ್ ಖಾತೆ ಮತ್ತು ವಿತ್ತೀಯ ಸೇರ್ಪಡೆ ಖಾತೆಗಳಿಗೆ ಈ ಶುಲ್ಕ ಅನ್ವಯಿುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT