ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ್ಲೋಡಿನ ವೇದಾವತಿ ನದಿ ಬರಿದು

ಹೊಸದುರ್ಗ: ಕುಡಿಯುವ ನೀರಿನ ಭೀತಿಯ ತಳಮಳ
Last Updated 12 ಡಿಸೆಂಬರ್ 2012, 7:58 IST
ಅಕ್ಷರ ಗಾತ್ರ

ಹೊಸದುರ್ಗ: ಎರಡು ವರ್ಷಗಳಿಂದಲೂ ಮಳೆ ಬಾರದೇ ವರುಣನ ಅವಕೃಪೆಯಿಂದ ಬರದ ಬವಣೆಯಲ್ಲಿ ಬೆಂಡಾಗಿರುವ ತಾಲ್ಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಯು ಎದುರಾಗುವ ಭೀತಿ ವ್ಯಾಪಕವಾಗಿ ಕಂಡು ಬಂದಿದೆ.

ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಉದ್ಭವವಾಗಿದ್ದು, ತಾಲ್ಲೂಕಿನ ಬಹುತೇಕ ಕೃಷಿಕರು ದಾಳಿಂಬೆ ಬೆಳೆಗೆ ಮಾರು ಹೋಗಿ ಹೆಚ್ಚು ಹೆಚ್ಚು ಕೊಳವೆ ಬಾವಿಗಳನ್ನು ತಗೆಸುತ್ತಾ ಬರುತ್ತಿರುವುದರಿಂದ ಅಂತರ್ಜಲ ಕುಸಿತಗೊಂಡಿದೆ. ಕೊಳವೆಬಾವಿಗಳಲ್ಲಿ ನೀರು ಬರುವುದೇ ದುರ್ಲಭ ಆಗುತ್ತಿರುವ ಸ್ಥಿತಿ ಉದ್ಭವವಾಗಿದ್ದು, ಕೆಲವು ಹಳ್ಳಿಗಳಲ್ಲಿ ಇರುವ ಕೆಲವೇ ಬಾವಿಗಳಲ್ಲಿ ಜಲಮೂಲ ಪಾತಾಳ ಸೇರಿದೆ. 

ಈಗಾಗಲೇ, ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಹಿಂದೆಂದೂ ಕಂಡರಿಯದಷ್ಟು ಕುಡಿಯುವ ನೀರಿನ ಸಮಸ್ಯೆಯ ಉದ್ಭವದಿಂದ ಜನ ಜಾನುವಾರುಗಳು ಕಂಗಾಲಾಗಿವೆ. ನೀರಿನ ಸೌಲಭ್ಯ ಕಲ್ಪಿಸಿಕೊಳ್ಳುವ ಪರ್ಯಾಯ ಮಾರ್ಗೋಪಾಯಗಳೇ ಜನರಿಗೆ ತಿಳಿಯದಂತೆ ಆಗಿದೆ.

ಸುಮಾರು 50 ಸಾವಿರ ಜನಸಂಖ್ಯೆಯ ಪಟ್ಟಣದ ಜನರಿಗೆ ನೀರಿನ ಸೌಲಭ್ಯದ ಹೊಣೆ ಹೊತ್ತಿರುವ ಪುರಸಭಾ ಆಡಳಿತ ನೀರಿನ ಬವಣೆಯಿಂದ ಆತಂಕಗೊಂಡಿದೆ. ಈಗಾಗಲೇ, ಇಂತಹ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಪುರಸಭೆ ಗಾಢ ಚಿಂತನೆಯಲ್ಲಿ ತೊಡಗಿದೆ. ಆದರೆ, ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಏಕೈಕ ಜಲಮೂಲ ಕೆಲ್ಲೋಡಿನ ವೇದಾವತಿ ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ.

ಅಪಾರ ಪ್ರಮಾಣದಲ್ಲಿ ವೇದಾವತಿ ತೀರದಲ್ಲಿ ಅಕ್ರಮ ಮರಳು ಸಾಗಣಿಯಿಂದ ಇಷ್ಟೊಂದು ಭೀಕರ ಜಲಕ್ಷಾಮಕ್ಕೆ ಕಾರಣವಾಗಿದೆ. ಪರ್ಯಾಯ ನೀರಿನ ವ್ಯವಸ್ಥೆಯ ಅನುದಾನಕ್ಕೆ ಕೊರತೆಯಾಗಿಲ್ಲ. ಶಾಸಕ ಗೂಳಿಹಟ್ಟಿ ಡಿ. ಶೇಖರ್ ಬದಲಿ ವ್ಯವಸ್ಥೆ ಕಲ್ಪಿಸಲುರೂ 25 ಲಕ್ಷ ಅನುದಾನ ನೀಡಿದ್ದಾರೆ. ಆದರೆ, ಬಹಳಷ್ಟು ತಿಂಗಳಾದರೂ ಇದರ ಬಳಕೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆತಿಲ್ಲ.

ಈ ಸಂಬಂಧ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂಳು ತಿನ್ನುತ್ತಿದೆ. ಈ ಅನುದಾನದಲ್ಲಿ ಪಟ್ಟಣದಲ್ಲಿ ಐದು ಮತ್ತು ವೇದಾವತಿ ನದಿಯಲ್ಲಿ ಐದು ಕೊಳವೆಬಾವಿ ತೋಡಿಸಿ ಪೈಪ್‌ಲೈನ್ ಅಳವಡಿಸಲು ಪುಸರಭೆ ಅಡಳಿತ ಚಿಂತನೆ ಮಾಡಿದೆ. ಅನುದಾನವಿದ್ದರೂ ಅಧಿಕಾರಿಗಳ ಅನುಮತಿ ದೊರೆಯದಿರುವುದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.

ಪ್ರತಿಭಾ ಕಾರಂಜಿ ಉತ್ತಮ ವೇದಿಕೆ
ಧರ್ಮಪುರ:
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರ ತೆಗೆಯಲಿಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಸಂಯೋಜಕ ಪಿ.ಇ. ಸತೀಶ್‌ತಿಳಿಸಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದರ್ಮಪುರ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಿಆರ್‌ಪಿ ಚನ್ನಕೇಶವಗೌಡ  ಮಾತನಾಡಿ,  ಪ್ರತಿಭಾ ಕಾರಂಜಿಗೆ ಬಂದಿರುವ ತೀರ್ಪುಗಾರರು ಯಾವುದೇ ತಾರತಮ್ಯ ಮಾಡದೆ ತೀರ್ಪು ನೀಡಿ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಮೂರ್ತಿ, ರಂಗನಾಥ್, ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಈ. ಗುಲ್ಜಾರ್‌ಖಾನ್, ರಾಘವೇಂದ್ರ ಉಪಸ್ಥಿತರಿದ್ದರು.

ಹೊಸದುರ್ಗ: ಎರಡು ವರ್ಷಗಳಿಂದಲೂ ಮಳೆ ಬಾರದೇ ವರುಣನ ಅವಕೃಪೆಯಿಂದ ಬರದ ಬವಣೆಯಲ್ಲಿ ಬೆಂಡಾಗಿರುವ ತಾಲ್ಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಯು ಎದುರಾಗುವ ಭೀತಿ ವ್ಯಾಪಕವಾಗಿ ಕಂಡು ಬಂದಿದೆ.

ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಉದ್ಭವವಾಗಿದ್ದು, ತಾಲ್ಲೂಕಿನ ಬಹುತೇಕ ಕೃಷಿಕರು ದಾಳಿಂಬೆ ಬೆಳೆಗೆ ಮಾರು ಹೋಗಿ ಹೆಚ್ಚು ಹೆಚ್ಚು ಕೊಳವೆ ಬಾವಿಗಳನ್ನು ತಗೆಸುತ್ತಾ ಬರುತ್ತಿರುವುದರಿಂದ ಅಂತರ್ಜಲ ಕುಸಿತಗೊಂಡಿದೆ. ಕೊಳವೆಬಾವಿಗಳಲ್ಲಿ ನೀರು ಬರುವುದೇ ದುರ್ಲಭ ಆಗುತ್ತಿರುವ ಸ್ಥಿತಿ ಉದ್ಭವವಾಗಿದ್ದು, ಕೆಲವು ಹಳ್ಳಿಗಳಲ್ಲಿ ಇರುವ ಕೆಲವೇ ಬಾವಿಗಳಲ್ಲಿ ಜಲಮೂಲ ಪಾತಾಳ ಸೇರಿದೆ. 

ಈಗಾಗಲೇ, ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಹಿಂದೆಂದೂ ಕಂಡರಿಯದಷ್ಟು ಕುಡಿಯುವ ನೀರಿನ ಸಮಸ್ಯೆಯ ಉದ್ಭವದಿಂದ ಜನ ಜಾನುವಾರುಗಳು ಕಂಗಾಲಾಗಿವೆ. ನೀರಿನ ಸೌಲಭ್ಯ ಕಲ್ಪಿಸಿಕೊಳ್ಳುವ ಪರ್ಯಾಯ ಮಾರ್ಗೋಪಾಯಗಳೇ ಜನರಿಗೆ ತಿಳಿಯದಂತೆ ಆಗಿದೆ.

ಸುಮಾರು 50 ಸಾವಿರ ಜನಸಂಖ್ಯೆಯ ಪಟ್ಟಣದ ಜನರಿಗೆ ನೀರಿನ ಸೌಲಭ್ಯದ ಹೊಣೆ ಹೊತ್ತಿರುವ ಪುರಸಭಾ ಆಡಳಿತ ನೀರಿನ ಬವಣೆಯಿಂದ ಆತಂಕಗೊಂಡಿದೆ. ಈಗಾಗಲೇ, ಇಂತಹ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಪುರಸಭೆ ಗಾಢ ಚಿಂತನೆಯಲ್ಲಿ ತೊಡಗಿದೆ. ಆದರೆ, ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಏಕೈಕ ಜಲಮೂಲ ಕೆಲ್ಲೋಡಿನ ವೇದಾವತಿ ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ.

ಅಪಾರ ಪ್ರಮಾಣದಲ್ಲಿ ವೇದಾವತಿ ತೀರದಲ್ಲಿ ಅಕ್ರಮ ಮರಳು ಸಾಗಣಿಯಿಂದ ಇಷ್ಟೊಂದು ಭೀಕರ ಜಲಕ್ಷಾಮಕ್ಕೆ ಕಾರಣವಾಗಿದೆ. ಪರ್ಯಾಯ ನೀರಿನ ವ್ಯವಸ್ಥೆಯ ಅನುದಾನಕ್ಕೆ ಕೊರತೆಯಾಗಿಲ್ಲ. ಶಾಸಕ ಗೂಳಿಹಟ್ಟಿ ಡಿ. ಶೇಖರ್ ಬದಲಿ ವ್ಯವಸ್ಥೆ ಕಲ್ಪಿಸಲುರೂ 25 ಲಕ್ಷ ಅನುದಾನ ನೀಡಿದ್ದಾರೆ. ಆದರೆ, ಬಹಳಷ್ಟು ತಿಂಗಳಾದರೂ ಇದರ ಬಳಕೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆತಿಲ್ಲ.

ಈ ಸಂಬಂಧ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂಳು ತಿನ್ನುತ್ತಿದೆ. ಈ ಅನುದಾನದಲ್ಲಿ ಪಟ್ಟಣದಲ್ಲಿ ಐದು ಮತ್ತು ವೇದಾವತಿ ನದಿಯಲ್ಲಿ ಐದು ಕೊಳವೆಬಾವಿ ತೋಡಿಸಿ ಪೈಪ್‌ಲೈನ್ ಅಳವಡಿಸಲು ಪುಸರಭೆ ಅಡಳಿತ ಚಿಂತನೆ ಮಾಡಿದೆ. ಅನುದಾನವಿದ್ದರೂ ಅಧಿಕಾರಿಗಳ ಅನುಮತಿ ದೊರೆಯದಿರುವುದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.

ಪ್ರತಿಭಾ ಕಾರಂಜಿ ಉತ್ತಮ ವೇದಿಕೆ
ಧರ್ಮಪುರ:
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರ ತೆಗೆಯಲಿಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಸಂಯೋಜಕ ಪಿ.ಇ. ಸತೀಶ್‌ತಿಳಿಸಿದರು.ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದರ್ಮಪುರ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿಆರ್‌ಪಿ ಚನ್ನಕೇಶವಗೌಡ  ಮಾತನಾಡಿ,  ಪ್ರತಿಭಾ ಕಾರಂಜಿಗೆ ಬಂದಿರುವ ತೀರ್ಪುಗಾರರು ಯಾವುದೇ ತಾರತಮ್ಯ ಮಾಡದೆ ತೀರ್ಪು ನೀಡಿ ಎಂದರು.ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಮೂರ್ತಿ, ರಂಗನಾಥ್, ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಈ. ಗುಲ್ಜಾರ್‌ಖಾನ್, ರಾಘವೇಂದ್ರ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT