ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಮುಂಗಡಪತ್ರ: ಮುಖ್ಯಾಂಶಗಳು

Last Updated 28 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ/ ಐಎಎನ್ಎಸ್): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸಂಸತ್ತಿನಲ್ಲಿ ಮಂಡಿಸಿದ 2011-12ರ ಸಾಲಿನ ಮುಂಗಡಪತ್ರದ ಮುಖ್ಯಾಂಶಗಳು:

* ಮಹಿಳಾ ಸ್ವಸಹಾಯ ಅಭಿವೃದ್ಧಿಗಾಗಿ ತಜ್ಞರ ಸಮಿತಿ ರಚನೆ.

* ವಿದೇಶೀ ಸಾಂಸ್ಥಿಕ ಹೂಡಿಕೆಗಳಿಗೆ (ಎಫ್ ಐ ಐ) ಕಾರ್ಪೋರೇಟ್ ಬಾಂಡ್ ಗಳಲ್ಲಿ 40 ಶತಕೋಟಿ ಡಾಲರ್ ನಷ್ಟು ಹಣ  ಹೂಡಲು ಅವಕಾಶ.

*ಕಿರು ಹಣಕಾಸು ಕಂಪೆನಿಗಳಿಗಾಗಿ 100 ಕೋಟಿ ರೂಪಾಯಿಗಳ ಈಕ್ವಿಟಿ ನಿಧಿ.

* ಆರ್ಥಿಕ ದುರ್ಬಲ ವರ್ಗಗಳಿಗಾಗಿ ಅಡಮಾನ ಅಪಾಯ/ ಸಾಹಸ ಖಾತರಿ ನಿಧಿ ರಚನೆ

*ಆದ್ಯತಾ ವರ್ಗದ ವಸತಿ ಸಾಲ ಮಿತಿ 25 ಲಕ್ಷ ರೂಪಾಯಿಗಳಿಗೆ ಏರಿಕೆ.

* ಅಭಿವೃದ್ಧಿಗೆ ಕೃಷಿ ಬೆಳವಣಿಗೆ ಅತ್ಯಗತ್ಯ: ಪೂರ್ವ ವಲಯದಲ್ಲಿ ಹಸಿರು ಕ್ರಾಂತಿಯ ನಿರೀಕ್ಷೆ.

* ಬೆಳವಣಿಗೆ ದರ ಹಾಲಿ ಶೇಕಡಾ 8.75ರಿಂದ 2011-12ರಲ್ಲಿ ಶೇಕಡಾ 9.25ಕ್ಕೆ ಏರುವ ನಿರೀಕ್ಷೆ.

*ವಿಮಾ, ಪಿಂಚಣಿ ನಿಧಿಗಳು, ಬ್ಯಾಂಕಿಂಗ್ ಸಂಬಂಧಿತ ಮಸೂದೆಗಳ ಮಂಡನೆ.

* ಸಗಟು ಮತ್ತು ಬಿಡಿ ಮಾರಾಟ ದರಗಳಲ್ಲಿನ ಅಂತರ ಸ್ವೀಕಾರಾರ್ಹ ಅಲ್ಲ

*ಸ್ವತಂತ್ರ ಸಾಲ ನಿರ್ವಹಣಾ ಕಚೇರಿಯ ಸ್ಥಾಪನೆ, ಸಂಸತ್ತಿನಲ್ಲಿ ಸರ್ಕಾರಿ/ ಸಾರ್ವಜನಕ ಸಾಲ ನಿರ್ವಹಣಾ ಮಸೂದೆ ಮಂಡನೆ.

* ಉತ್ತಮ ಮುಂಗಾರುವಿಗಾಗಿ ಹರಸುವಂತೆ ವರುಣದೇವನಿಗೆ ಪ್ರಾರ್ಥನೆ.

* ವಸ್ತುಗಳು ಮತ್ತು ಸೇವೆ ಪ್ರಸ್ತಾವನೆ ಮೂಲಕ ಅನುಸರಣೆ ಸುಧಾರಣೆ ಸಲುವಾಗಿ ಈ ಅಧಿವೇಶನದಲ್ಲೇ ಮಸೂದೆ: ಅನುಷ್ಠಾನಕ್ಕಾಗಿ ಬಲಾಢ್ಯ ಐಟಿ ಜಾಲ.

* ವಸ್ತುಗಳ  ಉತ್ಪಾದನೆ ಮತ್ತು ಸೇವಾ ಹೆಚ್ಚಳಕ್ಕೆ ಅನುಕೂಲವಾಗುವಂತೆ ವೆಚ್ಚದ ಹೊಂದಾಣಿಕೆ

*ಸರ್ಕಾರಿ ರಂಗದ ಉದ್ಯಮಗಳಲ್ಲಿ ಶೇಕಡಾ 51ರ ಪಾಲುದಾರಿಕೆ ಉಳಿಸಿಕೊಳ್ಳಲು ಸರ್ಕಾರ ಬದ್ಧ.
* ವಿದೇಶೀ ನೇರ ಹೂಡಿಕೆ (ಎಫ್ ಡಿ ಐ) ನೀತಿಯ ಉದಾರೀಕರಣ.

* ಹಾಲಿ ಖೋತಾ 2009-10ರ ಮಟ್ಟದಲ್ಲಿ.

* ಭ್ರಷ್ಟಾಚಾರದ ಸಮಸ್ಯೆ ವಿರುದ್ಧ ನಮ್ಮೆಲ್ಲರ ಸಾಮೂಹಿಕವಾಗಿ ಹೋರಾಟ ಅಗತ್ಯ

* ಅಭಿವೃದ್ಧಿಗೆ ಹೆಚ್ಚು ಮಂದಿಯ ಒಳಗೊಳ್ಳುವಿಗೆ ಬೇಕು.

* ಬಲಾಢ್ಯ ಆರ್ಥಿಕ ಕ್ರೋಡೀಕರಣದ ಅಗತ್ಯ.

* ಹೊಸ  ಸ್ಪಂದನಶೀಲ ಆರ್ಥಿಕತೆಗೆ ಒತ್ತು.

* ಆಂತರಿಕ ಮತ್ತು ಬಾಹ್ಯ ಹೊಡೆತಗಳನ್ನು ಎದುರಿಸಿಯೂ ಆರ್ಥಿಕತೆಯಲ್ಲಿ ಗಮನಾರ್ಹ  ಚೇತರಿಕೆ.

* ಬಿಕ್ಕಟ್ಟು ಪೂರ್ವ ಪಥಕ್ಕೆ ಮರಳಿದ ಆರ್ಥಿಕ ಸ್ಥಿತಿ.

* ಎರಡಂಕಿ ಬೆಳವಣಿಗೆಯತ್ತ ಹೆಜ್ಜೆ.

* ಜನವರಿ ವೇಳೆಗೆ ಒಟ್ಟಾರೆ ಆಹಾರ ಹಣದುಬ್ಬರ ಶೇಕಡಾ 9ಕ್ಕಿಂತಲೂ ಕೆಳಕ್ಕೆ ಇಳಿಯುವ ನಿರೀಕ್ಷೆ.

* ಇನ್ನೂ ಉತ್ತಮ ಸಾಧನೆ ಸಾಧ್ಯವಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT