ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

Last Updated 7 ಜೂನ್ 2011, 5:35 IST
ಅಕ್ಷರ ಗಾತ್ರ

ಹಿರಿಯೂರು: ಕಪ್ಪು ಹಣ ವಶಪಡಿಸಿಕೊಂಡು, ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸತ್ಯಾಗ್ರಹ ಆರಂಭಿಸಿದ್ದ ಬಾಬಾ ರಾಮದೇವ್ ಮೇಲೆ ಕೇಂದ್ರ ಸರ್ಕಾರ ಪೊಲೀಸರ ಮೂಲಕ ನಡೆಸಿರುವ ದೌರ್ಜನ್ಯ ಖಂಡನೀಯ ಎಂದು ಬಿಜೆಪಿ ಮುಖಂಡ ವೈ.ಎಸ್. ಅಶ್ವತ್ಥಕುಮಾರ್ ಹೇಳಿದರು.

ನಗರದಲ್ಲಿ ಸೋಮವಾರ ರಾಮದೇವ್ ಬಂಧನ ಹಾಗೂ ಸತ್ಯಾಗ್ರಹಿಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ತಾಲ್ಲೂಕು ಬಿಜೆಪಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರುಮಾತನಾಡಿದರು.

ದೌರ್ಜನ್ಯದಿಂದ ಸತ್ಯಕ್ಕಾಗಿ ಹೋರಾಟ ನಡೆಸುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಯುಪಿಎ ಅಧ್ಯಕ್ಷೆಗೆ, ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇದ್ದರೆ, ಅವರಲ್ಲಿ ಪ್ರಾಮಾಣಿಕತೆ ಇದ್ದರೆ, ಸತ್ಯಾಗ್ರಹಿಗಳನ್ನು ದಮನ ಮಾಡುವ ಬದಲು, ಅವರು ಇಟ್ಟಿರುವ ಬೇಡಿಕೆ ಈಡೇರಿಸಲಿ ಎಂದು ಮಾಜಿ ಶಾಸಕ ಆರ್. ರಾಮಯ್ಯ ಒತ್ತಾಯ ಮಾಡಿದರು.

ಎಂ.ಎಸ್. ರಾಘವೇಂದ್ರ, ಎಚ್.ಎಸ್. ಸುಂದರರಾಜ್, ಜೆ. ರಾಮಯ್ಯ, ಎಂ.ಡಿ. ಕಾಂತರಾಜ್,  ಶ್ರೀನಿವಾಸ್, ರವೀಂದ್ರನಾಥ್,ಎಚ್.ಬಿ. ಮಾನಾಚಾರ್, ಪಿ.ಎಸ್. ತಿಮ್ಮರಾಜಯಾದವ್, ಕೇಶವ ಮೂರ್ತಿ, ಬಿ.ಕೆ. ತಿಪ್ಪೇಸ್ವಾಮಿ, ಎಚ್. ಲೋಕೇಶ್, ಎಂ.ಕೆ. ಗಜೇಂದ್ರಶರ್ಮ, ಬಿ.ಆರ್. ರಂಗಸ್ವಾಮಿ, ಮಂಜುನಾಥ್, ನೀಲಕಂಠಪ್ಪ, ದಾಕ್ಷಾಯಿಣಿ, ಆಲೂರು ಕಾಂತರಾಜ್, ಎಂ.ಡಿ. ಗೌಡ್ರು, ದೇವರಾಜಮೂರ್ತಿ, ದೇವರಾಜ್, ಪರಮೇಶ್ವರಾಚಾರ್, ಸರವಣ, ಎಸ್. ಮಂಜುನಾಥ್, ಸಲೀಂ, ಎಳನೀರು ಸರವಣ, ಜಿ.ಪಿ. ನಾರಾಯಣ್, ಚಂದ್ರಶೇಖರ ಪಟೇಲ್, ಯರಬಳ್ಳಿ ರಾಜಣ್ಣ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT