ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೋದ್ಯಮಗಳ ಇನ್ನಷ್ಟು ಐಪಿಒ?

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿನ ಷೇರು ವಿಕ್ರಯ ಗುರಿ ತಲುಪಲು ಇನ್ನಷ್ಟು ಕೇಂದ್ರೋದ್ಯಮಗಳು ಷೇರುಪೇಟೆ ಪ್ರವೇಶಿಸುವಂತೆ ಮಾಡಲು ಕೇಂದ್ರ ಸರ್ಕಾರ ಉತ್ತೇಜನ ನೀಡಲು ಚಿಂತಿಸುತ್ತಿದೆ.

2012-13ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಅರ್ಹ ಉದ್ದಿಮೆಗಳು ಬಂಡವಾಳ ಸಂಗ್ರಹಿಸಲು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬಿಡುಗಡೆ ಮಾಡಬೇಕು ಎನ್ನುವುದು ಸರ್ಕಾರದ ಆಲೋಚನೆ ಆಗಿದೆ. ಕೇಂದ್ರೋದ್ಯಮಗಳು ಷೇರುಪೇಟೆ ವಹಿವಾಟು ಪ್ರವೇಶಿಸುವುದಕ್ಕೆ  ಸರ್ಕಾರಿ ಉದ್ದಿಮೆಗಳ ಇಲಾಖೆಯು ಉತ್ತೇಜನ ನೀಡುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸದ್ಯಕ್ಕೆ 50 ಕೇಂದ್ರೋದ್ಯಮಗಳ ಷೇರುಗಳು, ಮುಂಬೈ ಷೇರುಪೇಟೆಯಲ್ಲಿ ಸಕ್ರಿಯವಾಗಿ ವಹಿವಾಟು ನಡೆಸುತ್ತಿವೆ.  ಕೇಂದ್ರ ಸರ್ಕಾರಿ ಸ್ವಾಮ್ಯದ ಇಷ್ಟೇ ಸಂಖ್ಯೆಯ ಉದ್ದಿಮೆಗಳು ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ಅರ್ಹವಾಗಿದ್ದರೂ, ಅವುಗಳೆಲ್ಲ ಅನೇಕ ಕಾರಣಗಳಿಗೆ   ಮಾರುಕಟ್ಟೆಯಿಂದ ದೂರವೇ ಉಳಿದಿವೆ. ಇಂತಹ ಉದ್ದಿಮೆ ಸಂಸ್ಥೆಗಳಲ್ಲಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಹೇವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಕೂಡ ಸೇರಿವೆ.

ಕಳೆದ ಮೂರು ವರ್ಷಗಳ ಕಾಲ ಸತತವಾಗಿ ಲಾಭದಲ್ಲಿ ಮುನ್ನಡೆದಿರುವ, ನಷ್ಟದ ಹೊರೆ ಇರದ ಉದ್ದಿಮೆ ಸಂಸ್ಥೆಗಳು `ಐಪಿಒ~ ಬಿಡುಗಡೆ ಮಾಡಬಹುದಾಗಿದೆ.

2011-12ನೇ ಹಣಕಾಸು ವರ್ಷದಲ್ಲಿ ಕೇಂದ್ರೋದ್ಯಮಗಳ ಷೇರು ವಿಕ್ರಯ ಮೂಲಕ ್ಙ 40 ಸಾವಿರ ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಲು ಕೇಂದ್ರ ಸರ್ಕಾರ ಗುರಿ ನಿಗದಿಪಡಿಸಿದೆ. ವರ್ಷ ಮುಗಿಯಲು ಕೇವಲ 3 ತಿಂಗಳು ಬಾಕಿ ಉಳಿದಿದ್ದರೂ, ಇದುವರೆಗೆ ಷೇರು ವಿಕ್ರಯದ ಮೂಲಕ ್ಙ 1,145 ಕೋಟಿಗಳಷ್ಟು ಮಾತ್ರ ಬಂಡವಾಳ ಸಂಗ್ರಹಗೊಂಡಿದೆ.

ಈ ಗುರಿ ಸಾಧಿಸಲು ಕೇಂದ್ರ ಸರ್ಕಾರವು ಲಾಭದಲ್ಲಿ ನಡೆದಿರುವ ಕೇಂದ್ರೋದ್ಯಮಗಳ ಷೇರುಗಳನ್ನು ಮರಳಿ ಖರೀದಿಸುವುದೂ ಸೇರಿದಂತೆ ಹಲವಾರು ಮಾರ್ಗೋಪಾಯಗಳ ಹುಡುಕಾಟದಲ್ಲಿ ತೊಡಗಿದೆ. ಆದರೆ, ಒಂದು ಕೇಂದ್ರೋದ್ಯಮದ ಷೇರುಗಳನ್ನು ಇನ್ನೊಂದಕ್ಕೆ ವರ್ಗಾಯಿಸುವುದು ನಿಜವಾದ ಅರ್ಥದಲ್ಲಿ ಷೇರು ವಿಕ್ರಯ ಆಗಲಾರದು ಎನ್ನುವ ಅಭಿಪ್ರಾಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT