ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಬಡ ಮಹಿಳೆಯರಿಗೆ ಹೊಸ ವರ್ಷದ 'ಲಾಟರಿ'

Last Updated 1 ಜನವರಿ 2014, 12:17 IST
ಅಕ್ಷರ ಗಾತ್ರ

ತಿರುವನಂತಪುರ (ಐಎಎನ್ ಎಸ್): ಕೇರಳದ ಬಡ ಮಹಿಳೆಯರಿಗಾಗಿ ರಾಜ್ಯ ಸರ್ಕಾರವು ಬುಧವಾರ ವಿಶೇಷ ಲಾಟರಿ ಯೋಜನೆಯೊಂದರ ಕೊಡುಗೆ ನೀಡಿದೆ. ಈ ಲಾಟರಿಯಲ್ಲಿ ಬರುವ ಆದಾಯದಿಂದ ಪ್ರತಿಯೊಂದು ದುರ್ಬಲ ಕುಟುಂಬಗಳ ಮಹಿಳೆಯರ ಮದುವೆ ಕಾಲಕ್ಕೆ ಸರ್ಕಾರ 30,000 ರೂಪಾಯಿಗಳ ನೆರವು ಒದಗಿಸಲಿದೆ.

'ಈ ಕಾರ್ಯಕ್ರಮವನ್ನು ಕಳೆದ ರಾಜ್ಯ ಮುಂಗಡಪತ್ರದಲ್ಲಿ ಪ್ರಕಟಿಸಲಾಗಿತ್ತು. 'ಮಾಂಗಲ್ಯ ಲಾಟರಿ' ಮೂಲಕ ಬರುವ ಸಂಪೂರ್ಣ ಆದಾಯವನ್ನು  ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳ  ಪ್ರತಿಯೊಬ್ಬ ಮಹಿಳೆಯ ಮದುವೆ ಕಾಲಕ್ಕೆ ನೆರವು ಒದಗಿಸಲು ವಿನಿಯೋಗಿಸಲಾಗುವುದು' ಎಂದು ಮುಖ್ಯಮಂತ್ರಿ ಉಮನ್ ಚಾಂಡಿ ವಾರದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಕುಟುಂಬಗಳಿಗೂ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿ ಮೀರದೇ ಇದ್ದರೆ 'ಮಾಂಗಲ್ಯ ಲಾಟರಿ'ಯ ಸೌಲಭ್ಯ ಲಭಿಸುವುದು.

2011ರಲ್ಲಿ ಚಾಂಡಿ ಸರ್ಕಾರವು ಅನುಷ್ಠಾನಗೊಳಿಸಿದ್ದ 'ಕಾರುಣ್ಯ ಲಾಟರಿ' ಯೋಜನೆಯ ಯಶಸ್ಸನ್ನು ಗಮನಿಸಿ 'ಮಾಗಲ್ಯ ಲಾಟರಿ' ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

'ಕಾರುಣ್ಯ ಧರ್ಮಾರ್ಥ ನಿಧಿ' ಈವರೆಗೆ ಸುಮಾರು 22,000 ರೋಗಿಗಳ ವೈದ್ಯಕೀಯ ವೆಚ್ಚವನ್ನು ಭರಿಸಿದೆ. ಈ ವೆಚ್ಚದ ಮೊತ್ತ 286 ಕೋಟಿ ರೂಪಾಯಿಗಳು.

ಬಡತನ ರೇಖೆಗಿಂತ ಕೆಳಗಿನ ಜನತೆಗೆ ಕ್ಯಾನ್ಸರ್, ಹೀಮೊಫಿಲಿಯಾ, ಕಿಡ್ನಿ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಈ ನಿಧಿಯ ಮೂಲಕ ನೆರವು ಒದಗಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT