ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮಾದರಿಯಲ್ಲಿ ಪರಿಹಾರ ನೀಡಿ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಕುಣಿಗಲ್‌, ಗುಬ್ಬಿ, ಚಿಕ್ಕ ನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕು ಗಳಲ್ಲಿ ತೆಂಗು ಪ್ರಮುಖ ಬೆಳೆ. ಕಳೆದ ಎರಡು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಮಳೆ  ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ  ತೆಂಗಿನ ಮರಗಳು ಸಂಪೂರ್ಣ ವಾಗಿ ಒಣಗಿವೆ.

ಒಂದೆಡೆ ತೆಂಗಿನಕಾಯಿಗೆ ನುಸಿಪೀಡೆ, ಗರಿಗೆ ಬೆಂಕಿ ರೋಗ. ಮತ್ತೊಂದೆಡೆ ಮಾರುಕಟ್ಟೆ ಯಲ್ಲಿ ತೆಂಗಿನಕಾಯಿಯನ್ನು ಕೇಳುವವರೇ ಇಲ್ಲ. ಮಳೆ ಇಲ್ಲದೇ, ಅಂತರ್‌ಜಲ ಕುಸಿತದಿಂದ ತೆಂಗಿನ ಗಿಡಗಳನ್ನು ಕಳೆದುಕೊಂಡಿರುವ ರೈತರ ಸ್ಥಿತಿ ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ. ತೆಂಗಿನ ಮರ ಒಣಗಿರುವುದಕ್ಕೆ ಇದುವರೆವಿಗೂ ರಾಜ್ಯ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ.

ಕೇರಳದಲ್ಲಿಯೂ ಇದೇ ರೀತಿ ತೆಂಗಿನ ಮರಗಳು ಒಣಗಿವೆ. ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಲ್ಲಿನ ರೈತರಿಗೆ ಪರಿಹಾರ ಘೋಷಿಸಿದೆ. ರಾಜ್ಯದ ರೈತರಿಗೂ ಅದೇ ರೀತಿ ಪರಿಹಾರ ನೀಡಬೇಕು. ಮರವೊಂದಕ್ಕೆ ಕನಿಷ್ಠ ರೂ 13 ಸಾವಿರ ಪರಿಹಾರ ನೀಡಬೇಕು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು  ಗಂಭೀರವಾಗಿ ಪರಿಗಣಿಸಬೇಕು. 

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತೋಟಗಾರಿಕಾಧಿಕಾರಿಗಳಿಗೆ ಆದೇಶಿಸಿ ಜಿಲ್ಲೆಯಲ್ಲಿ ಒಣಗಿರುವ ತೆಂಗಿನ ಮರಗಳ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಬೇಕು. ವರದಿ ಆಧಾರದ ಮೇಲೆ ಪರಿಹಾರ ದೊರಕಿಸಿ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT