ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಶಾಪಿಂಗ್ ಉತ್ಸವ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಕೇರಳ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ದಿ ಗ್ರ್ಯಾಂಡ್ ಕೇರಳ ಶಾಪಿಂಗ್ ಫೆಸ್ಟಿವಲ್ ಜ.15ರವರೆಗೆ ನಡೆಯಲಿದೆ.

ಏಷ್ಯಾದ ಅತಿದೊಡ್ಡ ಶಾಪಿಂಗ್ ಫೆಸ್ಟಿವಲ್ ಎಂಬ ಹೆಗ್ಗಳಿಕೆ ಪಡೆದಿರುವ ಈ ಉತ್ಸವ ಇಡೀ ಕೇರಳ ರಾಜ್ಯವನ್ನೇ ಶಾಪಿಂಗ್ ಮಾಲ್ ಆಗಿ ಪರಿವರ್ತಿಸಲಿದೆ. `ಗಾಡ್ಸ್ ವೋನ್ ಕಂಟ್ರಿ~ ಎಂಬ ಅನ್ವರ್ಥಕ್ಕೆ ಒಳಾಗಾಗಿರುವ ಕೇರಳದಲ್ಲಿ ಈ ಉತ್ಸವ ಹೆಚ್ಚು ಖ್ಯಾತಿ ಗಳಿಸಿದೆ.

ಗ್ರಾಹಕರಿಗೆ ನಿಜವಾದ ಶಾಪಿಂಗ್ ಅನುಭವ ನೀಡುವ ಈ ಉತ್ಸವಕ್ಕೆ ಕೊಚ್ಚಿಯಲ್ಲಿ ಚಾಲನೆ ನೀಡಲಾಯಿತು. ಉತ್ಸವದಲ್ಲಿ ರಾಜ್ಯದ ಶ್ರೀಮಂತ ಕಲೆ, ಕರಕುಶಲತೆ, ಸಂಸ್ಕೃತಿ, ಆಚರಣೆ, ಪದ್ಧತಿ ಹಾಗೂ ಶಿಲ್ಪಕಲೆಗಳು ಅನಾವರಣಗೊಳ್ಳಲಿವೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವವರು ಒಂದಿಲ್ಲೊಂದು ಬಹುಮಾನವನ್ನು ಖಚಿತವಾಗಿ ಗೆಲ್ಲಬಹುದು. ಜತೆಗೆ 101 ಕೆ.ಜಿ ಚಿನ್ನ ಗೆಲ್ಲುವ ಅವಕಾಶ ಸಹ ಇದೆ. ಈ ಪರಿಯ ಅದ್ದೂರಿ ಹಾಗೂ ಬೃಹತ್ ಪ್ರಮಾಣದಲ್ಲಿ ಶಾಪಿಂಗ್ ಉತ್ಸವ ಆಯೋಜಿಸುತ್ತಿರುವ ದೇಶದ ಮೊದಲ ರಾಜ್ಯ ಕೇರಳ.

ಉತ್ಸವದಲ್ಲಿ ಆಭರಣ ಸಂಸ್ಥೆಗಳು, ವಸ್ತ್ರೋದ್ಯಮಿಗಳು, ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್ಸ್ ಮತ್ತು ಅಲಂಕಾರಿಕ ಕ್ಷೇತ್ರದ ಸುಮಾರು 7 ಸಾವಿರ ಚಿಲ್ಲರೆ ವಹಿವಾಟುದಾರರು ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಗ್ರಾಹಕರಿಗಾಗಿ ವಿಶೇಷ ಬಹುಮಾನ ಯೋಜನೆ ಜತೆಗೆ ಮನರಂಜನಾ ಸ್ಪರ್ಧೆಗಳು ಇವೆ. ಸ್ಕ್ರಾಚ್ ಅಂಡ್ ವಿನ್ ಕಾರ್ಡುಗಳ ಮೂಲಕ ಗ್ರಾಹಕರು ಹೆಚ್ಚು ಡಿಸ್ಕೌಂಟ್ ಪಡೆಯಬಹುದು. ಜತೆಗೆ ಪ್ರತಿದಿನದ ಮತ್ತು ಪ್ರತಿವಾರದ ಡ್ರಾಗಳ ಮೂಲಕ ಆಕರ್ಷಕ ಬಹುಮಾನ ಗೆಲ್ಲಬಹುದು.

ಈ ವರ್ಷ ಜಿಕೆಎಸ್‌ಎಫ್ ರಾಜ್ಯದ ಹೊರಭಾಗದಿಂದ ಬಂದು ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ನಡೆಸುವವರಿಗೆ ಶೇ 100 ವ್ಯಾಟ್ ಮರುಪಾವತಿಯ ಸೌಲಭ್ಯ ಒದಗಿಸಿದೆ. ಸೌತ್ ಇಂಡಿಯನ್ ಬ್ಯಾಂಕ್, ಮಲಬಾರ್ ಗೋಲ್ಡ್, ಜೋಸ್ಕೊ, ಭೀಮಾ ಜ್ಯುವೆಲ್ಸ್ ಉತ್ಸವಕ್ಕೆ ಕೈ ಜೋಡಿಸಿವೆ.

`ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ಕೇರಳದ ಗಳಿಕೆಯ ಪಾಲು ಹೆಚ್ಚಿದೆ. ಗ್ರ್ಯಾಂಡ್ ಕೇರಳ ಶಾಪಿಂಗ್ ಉತ್ಸವದಂತಹ ಸೃಜನಾತ್ಮಕ ಚಟುವಟಿಕೆಯ ಮೂಲಕ ನಾವು ಕೇರಳದ ಪ್ರವಾಸೋದ್ಯಮ ಸಾಧ್ಯತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಿದ್ದೇವೆ.

ಈ ಉತ್ಸವದಲ್ಲಿ ಪಾಲ್ಗೊಂಡವರಿಗೆ ಗುಣಮಟ್ಟದ ಪ್ರವಾಸಿ ಅನುಭವ ದೊರೆಯುತ್ತದೆ. ಈ ಮೂಲಕ ಕೇರಳವನ್ನು ಒಂದು ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸಿದ್ದೇವೆ~ ಎನ್ನುತ್ತಾರೆ ಗ್ರ್ಯಾಂಡ್ ಕೇರಳ ಶಾಪಿಂಗ್ ಉತ್ಸವದ ನಿರ್ದೇಶಕ ಡಾ. ರತನ್ ಕೇಳ್ಕರ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT