ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಂನಲ್ಲಿ ಓಣಂ ಸದ್ಯ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೇರಳ ತಿನಿಸುಗಳ ಅಪ್ಪಟ ರುಚಿಯನ್ನು ಬೆಂಗಳೂರಿಗರಿಗೆ ಪರಿಚಯಿಸಿದ್ದು `ಎಂದೆ ಕೇರಳಂ~ ರೆಸ್ಟೊರೆಂಟ್. ಕೇರಳದ ಸುಗ್ಗಿ ಹಬ್ಬ ಎನಿಸಿಕೊಂಡಿರುವ ಓಣಂ ಅಂಗವಾಗಿ ಈಗ ಕೇರಳ ಸದ್ಯಂ (ಅಲ್ಲಿನ ಸಾಂಪ್ರದಾಯಿಕ ಹಬ್ಬದ ಖಾದ್ಯ) ಉಣ ಬಡಿಸುತ್ತಿದೆ. ಅದಕ್ಕಾಗಿ ಸೆ.11ರ ವರೆಗೂ ಓಣಂ ಆಹಾರ ಉತ್ಸವ ನಡೆಸುತ್ತಿದೆ.

ಕೇರಳ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ. ಅದರ ಸಹಜ ಚೆಲುವನ್ನು ಇಮ್ಮಡಿಗೊಳಿಸಿರುವುದು ಇಲ್ಲಿನ ಆಹಾರ ವೈವಿಧ್ಯ ಕೂಡ. ರುಚಿ ರುಚಿಯಾದ ಸಸ್ಯಾಹಾರ ಹಾಗೂ ಮಾಂಸಾಹಾರ ತಿನಿಸುಗಳು ಭಕ್ಷ್ಯಪ್ರಿಯರ ಹೃದಯ ಗೆದ್ದಿವೆ.

ಓಣಂ ಹಬ್ಬಕ್ಕೆಂದೇ ವಿಶಿಷ್ಟವಾಗಿ ತಯಾರು ಮಾಡುವ ಅಡುಗೆಯೇ `ಓಣಂ ಸದ್ಯ~. ಇದು ಹಲವು ವಿಶಿಷ್ಟ ಹಾಗೂ ಸ್ವಾದಿಷ್ಟ ತಿನಿಸುಗಳನ್ನು ಒಳಗೊಂಡಿರುವ ಊಟ. ಓಣಂ ಹಬ್ಬದ ವಿಶೇಷ ತಿನಿಸುಗಳನ್ನು ಬೆಂಗಳೂರಿಗರಿಗೂ ಉಣ ಬಡಿಸಬೇಕು ಎಂಬ ಆಶಯದಿಂದ ಎಂಟೆ ಕೇರಳಂ ಖ್ಯಾತ ಬಾಣಸಿಗ ತಿರುಮೇನಿ ಉನ್ನಿಕೃಷ್ಣನ್ ನಂಬೂದಿರಿ ಅವರನ್ನು ಕರೆಯಿಸಿದೆ.

ಕಾಳನ್, ಪಾಯಸ, ಚಿಪ್ಸ್, ಓಲನ್, ತೋರನ್, ಎರುಶೇರಿ, ಅವಿಯಲ್ ಮೊದಲಾದ ಕೇರಳ ಖಾದ್ಯವನ್ನು ಬಯಸುವ ಆಹಾರ ಪ್ರಿಯರು ಎಂಟೆ ಕೇರಳಂಗೆ ಭೇಟಿ ನೀಡಬಹುದು. ಮಧ್ಯಾಹ್ನ ಊಟಕ್ಕೆ ಮಾತ್ರ ಓಣಂನ ಈ ವಿಶೇಷ ಊಟ ಲಭ್ಯ. ಸ್ಥಳ: ಎಂದೆ ಕೇರಳಂ, ನಂ.1, (ಹಳೇ ನಂ.12), ಹಲಸೂರು ರಸ್ತೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT