ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶಲೋಚನ ಸಂಯಮದ ಪ್ರತೀಕ

Last Updated 16 ಅಕ್ಟೋಬರ್ 2012, 6:45 IST
ಅಕ್ಷರ ಗಾತ್ರ

ಕಳಸ: ಜೈನ ಮುನಿಗಳು 28 ಗುಣಗಳನ್ನು ಪಾಲಿಸಲೇಬೇಕು. ಸತ್ಯ, ಅಹಿಂಸೆಯಂತಹ ಸಾಮಾನ್ಯ ಗುಣಗಳ ಜೊತೆಗೆ ಕೇಶಲೋಚನದಂತಹ ವಿಶಿಷ್ಟ ಗುಣಗಳನ್ನೂ ಮುನಿಗಳು ಕಡ್ಡಾಯ ವಾಗಿ ಪಾಲಿಸಬೇಕು ಎಂದು ಸಂಸೆಯ ಶ್ರೀಷೇಣ ಜೈನ್ ಹೇಳಿದರು.
 
ಪಟ್ಟಣದ ಮಹಾವೀರ ಭವನದಲ್ಲಿ ಶನಿವಾರ ನಡೆದ ಪಾವನಕೀರ್ತಿ ಮುನಿ ಗಳ ಕೇಶಲೋಚನ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಉಪನ್ಯಾಸ ನೀಡಿದರು. ಜೈನ ಧರ್ಮದ ಪ್ರಕಾರ ಮುನಿ ದೀಕ್ಷೆ ಹೊಂದದೆ ಮೋಕ್ಷ ಸಾಧ್ಯ ವಿಲ್ಲ. ಮುನಿಗಳು ಕಣ್ಣಿಗೆ ಕಾಣುವ ದೇವರು. ಅವರ ಕಠಿಣ ವ್ರತಾಚರಣೆ ಯು ಪ್ರಾಪಂಚಿಕ ಸುಖಗಳ ಬಗೆಗಿನ ಅವರ ನಿರಾಸಕ್ತಿ ಮತ್ತು ಮೋಕ್ಷ ಸುಖದ ಬಗೆಗಿನ ಕಾತರದ ಪ್ರತಿಬಿಂಬ ಎಂದ ಶ್ರಿಷೇಣ ವಿಶ್ಲೇಷಿಸಿದರು.
 
ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಕೇಶಲೋಚನದಲ್ಲಿ ಮೊದಲಿಗೆ ಮುನಿಗಳು ಸೆಗಣಿಯನ್ನು ಸುಟ್ಟ ಬೂದಿಯನ್ನು ಹಚ್ಚಿಕೊಂಡು ತಮ್ಮ ಗಡ್ಡ ಮತ್ತು ಮೀಸೆಯ ಕೂದಲನ್ನು ಸ್ವತಃ ಕಿತ್ತು ತೆಗೆದರು. ಆನಂತರ ಅವರ ತಲೆಗೂದಲನ್ನು ಕೆಲ ಭಕ್ತರು ಕಿತ್ತು ತೆಗೆದು ಕೇಶಲೋಚನದ ವಿಧಿಯನ್ನು ಒಂದೂವರೆ ಗಂಟೆಯ ಕಾಲ ವಿಧಿವತ್ತಾಗಿ ನೆರವೇರಿಸಿದರು.
 
ಮುನಿಗಳ ಸುತ್ತಲೂ ನೆರೆದಿದ್ದ ಜೈನ ಬಾಂಧವರು ಪಂಚಣಮೋಕಾರ ಮಂತ್ರ ಮತ್ತು ಗೀತೆಗಳನ್ನು  ಹಾಡುತ್ತಾ ಕೇಶಲೋಚನವನ್ನು ಕಣ್ಣಾರೆ ಕಂಡ ಅನುಭವ ಪಡೆದರು.  ಎಲ್ಲ ಜೈನ ಮುನಿಗಳು ನಾಲ್ಕು ತಿಂಗಳಿಗೊಮ್ಮೆ ಕೇಶಲೋಚನ ನಡೆಸಲಿದ್ದು ವರ್ಷದಲ್ಲಿ ಮೂರು ಬಾರಿ ಇದೇ ಕ್ರಮದಲ್ಲಿ  ತಮ್ಮ ಕೂದಲನ್ನು ನಿವಾರಿಸಿಕೊಳ್ಳುತ್ತಾರೆ.

ಜೈನ ಮುನಿಗಳ ಎಲ್ಲ ಆಚರಣೆಗಳ ಪೈಕಿ ಕೇಶಲೋಚನ ಬಹಳ ಕಟ್ಟುನಿಟ್ಟಿನ ಮತ್ತು ಆಚರಿಸಲು ಕಷ್ಟಸಾಧ್ಯವಾದ ವ್ರತ ಎಂಬುದು ಸ್ಥಳದಲ್ಲಿ ನೆರೆದಿದ್ದವರ ಪೈಕಿ ಹೆಚ್ಚಿನವರ ಅಭಿಪ್ರಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT