ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶವಕೃಪಾದಲ್ಲಿ ವೇದ ಶಿಬಿರ ಆರಂಭ

Last Updated 22 ಏಪ್ರಿಲ್ 2013, 9:45 IST
ಅಕ್ಷರ ಗಾತ್ರ

ಸುಳ್ಯ: ಹಳೆಗೇಟು ವಿದ್ಯಾನಗರದ ಶ್ರಿ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ಸುಮಾರು 45 ದಿನಗಳ ಕಾಲ ನಡೆಯುವ ಶ್ರಿಕೇಶವಕೃಪಾ ವೇದ ಶಿಬಿರ ಶನಿವಾರ ಉದ್ಘಾಟನೆಗೊಂಡಿತು.

ಶಿಬಿರವನ್ನು ಬಾಲಕೃಷ್ಣ ಸರಳಾಯ ಹಾಗೂ ವಿದುಷಿ ಗೀತಾ ಸರಳಾಯ ದಂಪತಿ ಉದ್ಘಾಟಿಸಿ `ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಇಂತಹ ಶಿಬಿರಗಳಿಂದ ಆಗಬೇಕು' ಎಂದು ಹೇಳಿದರು.

ಸಂಸ್ಕೃತ ಪ್ರಾಧ್ಯಾಪಕ ಶ್ರಿಶಕುಮಾರ್ `ವೇದ ಎಂದರೆ ಜ್ಞಾನ. ಹಿಂದಿನ ಕಾಲದ ಆಚಾರ- ವಿಚಾರ ಸಂಸ್ಕೃತಿಯನ್ನು ಅಂದಿನ ಪರಂಪರೆಯನ್ನು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯ ಇದೆ. ಇದು ಇಂತಹ ಶಿಬಿರಗಳಿಂದ ಸಾಧ್ಯ' ಎಂದು ಹೇಳಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸೋಂದಾ ಭಾಸ್ಕರ ಭಟ್ ಅಧ್ಯಕ್ಷತೆ ವಹಿಸಿದರು. ಕುಕ್ಕೆ ಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ ವಿ ಭಟ್ ಮುಖ್ಯ ಅತಿಥಿಯಾಗಿದ್ದರು. ಹರೀಶ್ ಭಟ್, ಶ್ರಿದೇವಿ ನಾಗರಾಜ ಇದ್ದರು.

ಶ್ರಿಕೃಷ್ಣ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರೋಹಿತ ನಾಗರಾಜ ಭಟ್ ಸ್ವಾಗತಿಸಿದರು. ಕುಂಬ್ರ ರಾಮಚಂದ್ರ ಭಟ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT