ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ ಕೇಂದ್ರೀಯ ವಿದ್ಯಾಲಯಕ್ಕೆ ಪ್ರಶಸ್ತಿ ಗರಿ

Last Updated 14 ಫೆಬ್ರುವರಿ 2012, 10:05 IST
ಅಕ್ಷರ ಗಾತ್ರ

ಕಾರವಾರ: ದೇಶದ ಪ್ರತಿಷ್ಠಿತ ಶಿಕ್ಷಣ ಸೊಸೈಟಿಗಳಲ್ಲಿ ಒಂದಾಗಿರುವ ಮುಂಬೈನ ಭಾರತೀಯ ಅಣುಶಕ್ತಿ ಶೈಕ್ಷಣಿಕ ಸಂಘ ಮುಂಬೈ (ಎ.ಇ. ಇ.ಎಸ್) ತನ್ನ ಅಧೀನ ಅಣುಶಕ್ತಿ ಕೇಂದ್ರೀಯ ವಿದ್ಯಾಲಯಗಳ ಪೈಕಿ ಅತ್ಯುತ್ತಮ ಶೈಕ್ಷಣಿಕ ಹಾಗೂ ಸಹಪಠ್ಯ ವಿಭಾಗಗಳಲ್ಲಿ ಗಮನಾರ್ಹ ಸಾಧನೆಗೈ ಯ್ದಿರುವ ಶಾಲೆಗಳಿಗೆ ನೀಡುವ ಪ್ರತಿಷ್ಠಿತ ಡಾ. ಹೋಮಿ ಬಾಬಾ ಪ್ರಶಸ್ತಿ ಹಾಗೂ ಡಾ. ರಾಜಾರಾಮಣ್ಣ ಪ್ರಶಸ್ತಿ ತಾಲ್ಲೂಕಿನ ಕೈಗಾದ ಅಣುಶಕ್ತಿ ಕೇಂದ್ರೀಯ ವಿದ್ಯಾಲಯಕ್ಕೆ ದೊರಕಿದೆ.

ವಿದ್ಯಾಲಯದ ಸರ್ವಾಂಗೀಣ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದ್ದು, ಮುಂಬೈನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಈಚೆಗೆ ನಡೆದ ಕಾರ್ಯ ಕ್ರಮದಲ್ಲಿ ವಿದ್ಯಾಲಯದ ಪ್ರಾಚಾರ್ಯ ಎಮ್.ಎನ್.ವಿ.ಪಿ.ನಾಯ್ಡು ಪ್ರಶಸ್ತಿ ಸ್ವೀಕರಿಸಿದರು.  

ಸಿಬಿಎಸ್‌ಇ ನಡೆಸಿರುವ 10  ಮತ್ತು 12ನೇ ತರಗತಿಯ ಪರೀಕ್ಷಾ ಫಲಿ ತಾಂಶಗಳ ಗುಣಾತ್ಮಕತೆಯ ಸೂಚ್ಯಂಕ, 2010-11 ನೇ ಶೈಕ್ಷಣಿಕ ಸಾಲಿನ ಆಂತರಿಕ ಪರೀಕ್ಷೆಗಳಲ್ಲಿನ ಗುಣಮಟ್ಟ ನಿರ್ವಹಣೆ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದ ಪ್ರಮುಖ ಸ್ಪರ್ಧಾ ತ್ಮಕ ಪರೀಕ್ಷೆಗಳಲ್ಲಿ ಶಾಲಾ ವಿದ್ಯಾರ್ಥಿ ಗಳು ತೋರಿದ ಅಪ್ರತಿಮ ಸಾಧನೆ.

ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (ಎನ್.ಟಿ.ಎಸ್.ಸಿ) ಎನ್.ಸಿ.ಇ.ಆರ್.ಟಿ., ಜೆ.ಎನ್.ಎನ್.ಎಸ್.ಇ, ಹಿಂದಿ ವಿಜ್ಞಾನ ರಸಪ್ರಶ್ನೆ ಮತ್ತು 2010ರ ನವೆಂಬರನಲ್ಲಿ ನಡೆದ ಅಖಿಲಭಾರತ ಮಟ್ಟದ ಸಾಂಸ್ಕೃತಿಕ  ಮೇಳದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು ಮಾಡಿದ ಸಾಧನೆ ನೋಡಿ ಪ್ರಶಸ್ತಿ ನೀಡಲಾಗಿದೆ.

ಈ ಪ್ರತಿಷ್ಠಿತ ಸಂದಿರುವುದಕ್ಕೆ ಕೈಗಾ ಅಣುವಿದ್ಯುತ್ ಕೇಂದ್ರದ ಸ್ಥಾನಿಕ ನಿರ್ದೇಶಕ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಪಿ.ಗುಪ್ತಾ, ಕೈಗಾ 1 ಮತ್ತು 2ರ  ನಿರ್ದೇಶಕ ಎಚ್.ಎನ್.ಭಟ್ ಹಾಗೂ 3 ಮತ್ತು 4ರ ನಿರ್ದೇಶಕ ಟಿ. ಜೆ. ಕೋಟಿಶ್ವರನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಿದೇವಿ ಜಾತ್ರೆ

ಹುಕ್ಕೇರಿ: ಮೂರು ವರ್ಷಕ್ಕೊಮ್ಮೆ ಜರುಗುವ ತಾಲ್ಲೂಕಿನ ಇಂಗಳಿ ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರೆಯು ಇದೇ 14ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT