ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಸಂಸ್ಕೃತಿಗೆ ಮುನ್ನುಡಿ ಬರೆದ ಟಿವಿಎನ್

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: `ಕೈಗಾರಿಕಾ ಕ್ಷೇತ್ರದಲ್ಲಿ ಒಬ್ಬರ ಪ್ರಗತಿ ಕಂಡು ಇನ್ನೊಬ್ಬರು ಸಹಿಸದ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿ ಜಿಲ್ಲಾ ಕೈಗಾರಿಕಾ ಸಂಸ್ಕೃತಿಗೆ ಮುನ್ನುಡಿ ಬರೆದು, ಶಿವಮೊಗ್ಗದ ವಿಶ್ವೇಶ್ವರಯ್ಯ ಎಂದೇ ಹೆಸರಾದವರು ಟಿ.ವಿ. ನಾರಾಯಣ ಶಾಸ್ತ್ರಿಗಳು~ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ನಗರದ ಆಟೋ ಕಾಂಪ್ಲೆಕ್ಸ್ ಸಂಕೀರ್ಣದಲ್ಲಿ ಶನಿವಾರ ಗ್ಯಾರೇಜ್ ಮತ್ತು ಎಂಜಿನಿಯರ್ ವರ್ಕ್‌ಶಾಪ್ ವತಿಯಿಂದ ಹಮ್ಮಿಕೊಂಡಿದ್ದ ಕೈಗಾರಿಕೋದ್ಯಮಿ ಟಿ.ವಿ. ನಾರಾಯಣ ಶಾಸ್ತ್ರಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಎಸ್. ಅನಂತರಾಮಯ್ಯ ಮಾತನಾಡಿ, ನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಸರಾದ ಆಟೋ ಸಮುಚ್ಚಯ ನಿರ್ಮಿಸಲಾಯಿತು~ ಎಂದರು. ಟಿ.ವಿ. ನಾರಾಯಣಶಾಸ್ತ್ರಿ ಮಕ್ಕಳಾದ ಲಲಿತಾಂಬಾ, ನಳಿನಾ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ ಶೆಟ್ಟಿ, ಪದಾಧಿಕಾರಿ ಉಮೇಶ್ ಆರಾಧ್ಯ, ಗ್ಯಾರೇಜ್ ಮತ್ತು ಎಂಜಿನಿಯರ್ ಸಂಘದ ಉಪಾಧ್ಯಕ್ಷ ಪಾಷಾ, ಪದಾಧಿಕಾರಿಗಳಾದ ಎಸ್.ಪಿ. ಸುಬ್ರಹ್ಮಣ್ಯ, ಧನಂಜಯ್, ಕುಪ್ಪಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT