ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗದಿರಲಿ

Last Updated 6 ಜೂನ್ 2011, 9:35 IST
ಅಕ್ಷರ ಗಾತ್ರ

ಸುರತ್ಕಲ್: ಆಧುನೀಕರಣ, ಕೈಗಾರಿಕೀಕರಣ, ಅಭಿವೃದ್ಧಿಯ ಹೆಸರಲ್ಲಿ  ಪರಿಸರ ನಾಶವಾಗುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳ ದಾಳಿಯಿಂದ ನಿಸ್ವಾರ್ಥ ಸೇವೆ ನೀಡುವ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತಿದೆ. ಆಧುನಿಕತೆ ಪರಿಸರಕ್ಕೆ ಹಾನಿಯಾಗದಿರಲಿ ಎಂದು ಬಳಕೆದಾರರ ವೇದಿಕೆ  ಶ್ರೀರಂಗ ಹೆಚ್. ಅಭಿಪ್ರಾಯಪಟ್ಟರು.

ಸುರತ್ಕಲ್ ಸರ್ವೀಸ್ ಬಸ್ ತಂಗುದಾಣದ ಬಳಿ ವಿಶ್ವಪರಿಸರದ ದಿನಾಚರಣೆಅಂಗವಾಗಿ ಸಂಕೇತ ಕಲಾವಿದರ ಬೀದಿ ನಾಟಕ `ನಾವು ನಮ್ಮ ಪರಿಸರ~ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಳಕೆದಾರರ ವೇದಿಕೆ.

ಸುರತ್ಕಲ್ ಗೋವಿಂದದಾಸ ಕಾಲೇಜು, ಮಿತ್ರಮಂಡಳಿ ಸುರತ್ಕಲ್, ಸಂಕೇತ ಕಲಾವಿದರು. ಕಡಲ ಕಲಿಗಳ ಕಲಾವೇದಿಕೆ, ಜಯಕರ್ನಾಟಕ ಸುರತ್ಕಲ್ ಘಟಕ, ರೋಟರಿ ಕ್ಲಬ್ ಸುರತ್ಕಲ್,ಹೊನ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇವುಗಳ ಜಂಟಿ ಆಶ್ರಯದಲ್ಲಿ ಬೀದಿ ನಾಟಕ ನಡೆಯಿತು.

ಬಳಕೆದಾರರ ವೇದಿಕೆಯ ಸಂಯೋಜಕ ಬಾಲಕೃಷ್ಣ ರಾವ್ ಬೀದಿ ನಾಟಕ ಉದ್ಘಾಟಿಸಿದರು. ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಮೋಹನ್ ರಾವ್, ವಿದ್ಯಾದಾಯಿನೀ ಆಡಳಿತ ಮಂಡಳಿ ಸದಸ್ಯ ಸುಬ್ರಹ್ಮಣ್ಯ, ಸಂಕೇತ ನಿರ್ದೇಶಕ ಜಗನ್ ಪವರ್ ಬೇಕಲ , ಸುರತ್ಕಲ್ ರೋಟರಿ ಕ್ಲಬ್‌ನ ಅರವಿಂದ ಭಟ್,

ಶ್ರೀಧರ್ ಎನ್.ಟಿ.,ಗೋವಿಂದದಾಸ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಹರೀಶ್ ಆಚಾರ್, ಕಡಲಕಲಿಗಳ ಕಲಾವೇದಿಕೆಯ ರಾಕೇಶ್ ಹೊಸಬೆಟ್ಟು, ಹೊನ್ನಕಟ್ಟೆ ಫ್ರೆಂಡ್ಸ್ ಸರ್ಕಲ್‌ನ ಶ್ರೀನಿವಾಸ, ಇಶ್ಯುಸ್ ,ಕನ್ಸಂಟ್ಸ್‌ನ ಜಯರಾಮ್ ಶ್ರೀಯಾನ್, ಜಯಕರ್ನಾಟಕದ ವೈ.ರಾಘವೇಂದ್ರ ರಾವ್, ಶ್ರೀಕಾಂತ್, ವಕೀಲ ರಾಘವೇಂದ್ರ,  ಹರೀಶ್ ಪೇಜಾವರ , ಗೋವಿಂದದಾಸ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ದೇವಪ್ಪ ಕುಳಾಯಿ , ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿ ಮತ್ತಿತರರು ಇದ್ದರು. ಹೊನ್ನಕಟ್ಟೆ, ಗಣೇಶಪುರಗಳಲ್ಲೂ ಬೀದಿನಾಟಕ ಪ್ರದರ್ಶನ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT