ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಯೊಂದಿಗೆ ಐಸ್‌ಕ್ರೀಂ ತಿಂದ ಪೇದೆಗಳ ಅಮಾನತು

Last Updated 23 ಫೆಬ್ರುವರಿ 2011, 19:10 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್): ಕೈದಿಯೊಂದಿಗೆ ಸಲಿಗೆಯಿಂದ ವರ್ತಿಸುವ ಪೊಲೀಸರಿಗೆ ಎಚ್ಚರಿಕೆಯ ಪಾಠ ಎನಿಸುವ ಘಟನೆಯೊಂದು ಮಂಗಳವಾರ ನಡೆದಿದೆ.

ವಿಚಾರಣಾಧೀನ ಕೈದಿಯ ಜೊತೆ ಸೇರಿ ಐಸ್‌ಕ್ರೀಂ ತಿಂದ ತಪ್ಪಿಗಾಗಿ ಇಬ್ಬರು ಪೊಲೀಸರು ಬುಧವಾರ ಅಮಾನತಿನ ಬೆಲೆ ತೆತ್ತಿದ್ದಾರೆ. ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಕೈದಿಯೊಂದಿಗೆ ಹೊರಗೆ ಹೋದ ಪೊಲೀಸರು ಅಂಗಡಿಯೊಂದರಲ್ಲಿ ಆತನ ಜೊತೆ ಐಸ್‌ಕ್ರೀಂ ಸೇವಿಸುತ್ತಿದ್ದ ದೃಶ್ಯಗಳನ್ನು ಸ್ಥಳೀಯ ಟಿ.ವಿ ವಾಹಿನಿಗಳು ಪ್ರಕಟಿಸಿದ್ದವು. ಪತ್ರಿಕೆಗಳು ಸಹ ಈ ಬಗ್ಗೆ ವರದಿ ಮಾಡಿದ್ದವು. ಇದನ್ನು ಆಧರಿಸಿ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT