ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾಷ್ ಕಂಠ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

`ಹಳೇ ಪಾತ್ರೆ.. ಹಳೇ ಕಬ್ಣ, ಹಳೇ ಪೇಪರ್ ತರ ಹೊಯ್... ಈ ಪ್ರೀತಿ, ಈ ಪ್ರೇಮ ಬಲು ಬೇಜಾರ್ ಕಣೊ ಹೊಯ್...~ `ಜಂಗ್ಲಿ~ ಚಿತ್ರದ ಈ ಹಾಡು ಪಡ್ಡೆ ಹುಡುಗರಿಂದ ವೃದ್ಧರ ವರೆಗೆ ಎಲ್ಲರ ಬಾಯಲ್ಲಿ ನಲಿದಾಡಿತ್ತು.

ಇದನ್ನು ಹಾಡಿದ್ದು ಹಿಂದಿಯ ಹಿನ್ನೆಲೆ ಗಾಯಕ ಕಾಶ್ಮೀರಿ ಮೂಲದ ಕೈಲಾಷ್ ಖೇರ್. ಸೂಫಿ ಸಂಗೀತದ ಮಾದರಿಯಲ್ಲಿ ತಾರಕಕ್ಕೆ ಏರುವ ಕಚ್ಚಾ ಧ್ವನಿ ಅವರದ್ದು. ಹಾಡಿದ್ದೆಲ್ಲ ಆತ್ಮದಾಳದಿಂದ ಎದ್ದುಬಂದಂತೆ ಕೇಳಿಸುವ ಸ್ವರ.

ಹತ್ತು ವರ್ಷಗಳ ಹಿಂದೆ ಬಿಸಿನೆಸ್ ಕೈಕೊಟ್ಟಾಗ ಸ್ನೇಹಿತರ ಸಲಹೆಯಂತೆ ಕಂಠಸಿರಿ ನಂಬಿಕೊಂಡು ದೆಹಲಿಯಿಂದ ಮುಂಬೈಗೆ ಬಂದವರು ಕೈಲಾಷ್. ಗಲ್ಲಾ ಪೆಟ್ಟಿಗೆಯಲ್ಲಿ ವಿಫಲವಾದ ಚಿತ್ರವೊಂದರಲ್ಲಿ ಹಾಡಿದ್ದ `ಅಲ್ಲಾ ಕೆ ಬಂದೆ~  (2002) ಅವರನ್ನು ಹಿಂದಿ ಚಿತ್ರೋದ್ಯಮದಲ್ಲಿ ಮನೆಮಾತಾಗಿಸಿತು.
 
ಹಿನ್ನೆಲೆ ಗಾಯನವೇ ಅಲ್ಲದೇ ತಮ್ಮದೇ ಆದ ಕೈಲಾಸ ಬ್ಯಾಂಡ್ ಮೂಲಕ ಆಲ್ಬಂ ಬಿಡುಗಡೆ ಮಾಡತೊಡಗಿದರು. ರಾಕ್, ಪಾಪ್ ಸಂಜೆ ನಡೆಸಿದರು. ಹಿಂದಿ ಅಲ್ಲದೇ ಕನ್ನಡ, ತೆಲುಗು, ತಮಿಳಿನಲ್ಲೂ ಹಾಡುವ ಕೈಲಾಷ್ ಕನ್ನಡದಲ್ಲಿ ಈಗ ಬಹುಬೇಡಿಕೆಯ ಗಾಯಕ.

ಇಂತಿಪ್ಪ ಕೈಲಾಷ್ ಈಗ ಯುವಜನರನ್ನು ರಂಜಿಸಲು ಬೆಂಗಳೂರಿಗೆ ಬರುತ್ತಿದ್ದಾರೆ. ಫೀವರ್ 104 ಎಫ್‌ಎಂ ನಡೆಸುವ ಫೀವರ್ ಎಂಟರ್‌ಟೇನ್‌ಮೆಂಟ್ ನಗರದಲ್ಲಿ ಶುಕ್ರವಾರ ಕೈಲಾಷ್ ಸಂಗೀತ ಸಂಜೆ ಏರ್ಪಡಿಸಿದೆ.

ಸೂಫಿ ರಾಗಗಳು, ಉತ್ತರ ಭಾರತದ ಜನಪದ ಗೀತೆಗಳು ಅವರ ಕಂಚಿನ ಕಂಠದಲ್ಲಿ ಮೊಳಗಲಿವೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ: 6.30. ಟಿಕೆಟ್ ಮತ್ತಿತರ ವಿವರಗಳಿಗೆ www.bookmshow.com 
                                                                                                                                 ಜ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT