ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡದಕುಳಿ ಯಕ್ಷಮೇಳ ಅಮೆರಿಕಕ್ಕೆ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಕೊಂಡ ದಕುಳಿ ರಾಮಚಂದ್ರ ಹೆಗಡೆ ನೇತೃತ್ವದ ಕುಂಭಾಶಿಯ ಪೂರ್ಣಚಂದ್ರ ಯಕ್ಷಗಾನ ಮೇಳವು ಅಮೆರಿಕದಲ್ಲಿ ಮೂರು ತಿಂಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಲಿದೆ.

ಅಮೆರಿಕದ ‘ನಾವಿಕ’ ಹಾಗೂ ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಪ್ರವಾಸವನ್ನು ಆಯೋಜಿಸಲಾಗಿದೆ.
ತಂಡವು ಇದೇ 17ರಂದು ಅಮೆರಿಕಕ್ಕೆ ಪ್ರವಾಸ ಬೆಳೆಸಲಿದೆ. 21ರಂದು ತಂಡ ವು ಮೊದಲ ಪ್ರದರ್ಶನ ನೀಡಲಿದೆ.

ಶನಿವಾರ, ಭಾನುವಾರ ಹಾಗೂ  ರಜಾ ದಿನಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದ್ದು, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಸೇರಿದಂತೆ ವಿವಿಧ ಕಡೆಗಳಲ್ಲಿ ಒಟ್ಟು 25 ಪ್ರದರ್ಶನಗಳನ್ನು ನೀಡಲಿದೆ. ಕೆನಡಾದಲ್ಲಿ ಒಂದು ಕಾರ್ಯಕ್ರಮ ನೀಡಲಿದೆ. ಡಿಸೆಂಬರ್‌ 10ಕ್ಕೆ ರಾಜ್ಯಕ್ಕೆ ಮರಳಲಿದೆ.

ಕೊಂಡದಕುಳಿ ರಾಮಚಂದ್ರ ಹೆಗಡೆ, ಹಿರಿಯ ಭಾಗವತ ಕೊಳಗಿ ಕೇಶವ ಹೆಗಡೆ, ಸ್ತ್ರೀ ವೇಷಧಾರಿ ನೀಲ್ಕೋಡು ಶಂಕರ ಹೆಗಡೆ, ಗೋಪಾಲಕೃಷ್ಣ ಭಾಗವತ ಕಡತೋಕ, ಎ.ಪಿ.ಪಾಠಕ್‌, ಸಂಪ ಲಕ್ಷ್ಮೀನಾರಾಯಣ ತಂಡದ ಸದಸ್ಯರು.
 
‘ತಂಡವು ಮೊದಲ ಬಾರಿಗೆ ಅಮೆರಿಕ ಪ್ರವಾಸ ಮಾಡುತ್ತಿದೆ. ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸಲಾಗುವುದು. ವಿದೇಶದಲ್ಲಿರುವ ಕನ್ನಡಿಗರಿಗೆ ಯಕ್ಷಗಾನದ ಕಂಪನ್ನು ಪಸರಿಸಲು ಇದೊಂದು ಅಪೂರ್ವ ಅವಕಾಶ. ಅಲ್ಲಿನ ಕಲಾವಿದರನ್ನು ಬಳಸಿಕೊಂಡು ಪ್ರದರ್ಶನ ನೀಡಲಾಗುವುದು’ ಎಂದು ಕೊಂಡದಕುಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT