ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡ್ಲಹಳ್ಳಿ: ಆಂಜನೇಯ ಸ್ವಾಮಿ ಜಾತ್ರೆ

Last Updated 20 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ  ಪ್ರಸಿದ್ಧ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಶನಿವಾರ ಸಂಜೆ ಆಂಜನೇಯ ಸ್ವಾಮಿ ಹೂವಿನ ಪಲ್ಲಕ್ಕಿ ಮಹೋತ್ಸವ ವೈಭವದಿಂದ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಗಾಡಿಗಳಲ್ಲಿ ತುಂಬಿಕೊಂಡಿದ್ದ ಬೆಲ್ಲದ ಪಾನಕವನ್ನು ಪ್ರಸಾದವಾಗಿ ನೀಡುತ್ತಾ ಡೊಳ್ಳು, ಕೋಲಾಟ, ನಂದಿಕೋಲು ಸೇರಿದಂತೆ ವಿವಿಧಕಲಾತಂಡಗಳ ಸಮ್ಮುಖದಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.

ಇದಾದ ನಂತರ ಸಂಜೆ ದೇವಸ್ಥಾನದ ಬಳಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ಸ್ವಾಮಿಯನ್ನು ಗುಡಿದುಂಬಿಸುವ ಮೂಲಕ ರಥೋತ್ಸವಕ್ಕೆ ತೆರೆಬಿದ್ದಿತು.ಗ್ರಾ.ಪಂ ಸದಸ್ಯ ಟಿ. ತಿಪ್ಪೇಸ್ವಾಮಿ, ಬಿ. ತಿಪ್ಪೇಸ್ವಾಮಿ, ಗುರು ಮೂರ್ತಪ್ಪ,  ಚನ್ನಬಸಪ್ಪ ನೇತೃತ್ವ ವಹಿಸಿದ್ದರು. ಸಂಜೆ ಚಿತ್ರದುರ್ಗ ಮುರುಘಾ ಮಠದ ಜಮುರಾ  ತಂಡದಆಶ್ರಯದಲ್ಲಿ ‘ಬಯಲುಸೀಮೆ ಕಟ್ಟೆ ಪುರಾಣ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT