ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಅಂತಿಮ ಹಂತಕ್ಕೆ ಮಹಿಳಾ ಕಾಲೇಜು

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕೊಕ್ಕೊ ಪಂದ್ಯಾವಳಿಯಲ್ಲಿ ಚಿಕ್ಕಬಳ್ಳಾಪುರದ ಕಾಲೇಜು ಮತ್ತು ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜು ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಆತಿಥೇಯ ಕಾಲೇಜು ತಂಡ ಅಂತಿಮ ಹಂತ ತಲುಪಿದೆ.

ಈಗಾಗಲೇ ಸೆಮಿಫೈನಲ್ ಹಂತ ತಲುಪಿರುವ ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜು ಮತ್ತು ಕೆ.ಆರ್.ಪುರಂ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ನಡುವೆ ಬುಧವಾರ ಬೆಳಿಗ್ಗೆ ಪಂದ್ಯ ನಡೆಯಲಿದೆ. ಗೆಲ್ಲುವ ತಂಡದ ಜೊತೆಗೆ ಅತಿಥೇಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಸ್ಪರ್ಧೆ ಗಿಳಿಯಲಿದೆ.

ಒಟ್ಟು 7 ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಪಂದ್ಯಾವಳಿಯನ್ನು ಬೆಳಿಗ್ಗೆ ಕಾಲೇಜು ಪ್ರಾಂಶುಪಾಲ ರಾಮೇಗೌಡ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT